ದಸರಾ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ

ಮೈಸೂರು, ಅ.17 : ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ತೆರೆ ಬಿದ್ದಿದೆ. ದಸರಾದ ಪ್ರಮುಖ ಆಕರ್ಷಣೆಯಾಗಿದ್ದ ಗಜಪಡೆಗಳಿಗೆ ಮೈಸೂರಿನಲ್ಲಿ ಗುರುವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು. ಪೂಜೆ ಸಲ್ಲಿಸಿ ಎಲ್ಲಾ ಆನೆಗಳನ್ನು ಅವುಗಳ ಶಿಬಿರಕ್ಕೆ ಮರಳಿ ಕಳಿಸಲಾಯಿತು.

ಅರಮನೆ ಆವರಣದಲ್ಲಿ ಗುರುವಾರ ಅರ್ಜುನ, ಬಲರಾಮ, ಗಜೇಂದ್ರ, ಅಭಿಮನ್ಯು, ಸರಳಾ, ವರಲಕ್ಷ್ಮೀ, ವಿಜಯಾ, ವಿಕ್ರಮ, ಗೋಪಾಲಸ್ವಾಮಿ, ಪ್ರಶಾಂತ್, ಶ್ರೀರಾಮ, ದುರ್ಗಪರಮೇಶ್ವರಿ, ಹರ್ಷ ಮತ್ತು ಗೋಪಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು.

dasara

ಜಿಲ್ಲಾಧಿಕಾರಿಗಳಾದ ಶಿಖಾ, ವಲಯ ಅರಣ್ಯಾಧಿಕಾರಿ ದೇವರಾಜ್, ಮೈಸೂರು ಮೇಯರ್ ರಾಜೇಶ್ವರಿ ಆನೆಗಳಿಗೆ ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ ನೀಡಿ ಅವುಗಳಿಗೆ ಬೀಳ್ಕೊಡುಗೆ ನೀಡಿದರು. ನಂತರ ಆನೆಗಳನ್ನು ಲಾರಿಗಳ ಮೂಲಕ ಬಳ್ಳೆ, ದುಬಾರೆ, ತಿಥಿಮತಿ, ಕೆ.ಗುಡಿ ಶಿಬಿರಗಳಿಗೆ ಕಳುಹಿಸಿಕೊಡಲಾಯಿತು.

ಆನೆಗಳೊಂದಿಗೆ ಆಗಮಿಸಿದ 28 ಮಾವುತರು ಮತ್ತು ಕಾವಾಡಿಗರು ಮತ್ತು ಅವರ ಕುಟುಂಬದ ಸುಮಾರು 200 ಮಂದಿಯೂ ಸಹ ಗುರುವಾರ ಮೈಸೂರು ತೊರೆಯುತ್ತಿದ್ದಾರೆ. ಮುಂದಿನ ದಸರಾ ವೇಳೆಗೆ ಮತ್ತೆ ನಗರಕ್ಕೆ ಆಗಮಿಸುತ್ತಾರೆ. (ಮೈಸೂರು ದಸರಾದ ಚಿತ್ರಗಳು)

ಆನೆಗಳು ಆರೋಗ್ಯವಾಗಿವೆ : ದಸರಾದಲ್ಲಿ ಪಾಲ್ಗೊಂಡು ಕಾಡಿಗೆ ಮರಳುತ್ತಿರುವ ಎಲ್ಲಾ ಆನೆಗಳು ಆರೋಗ್ಯಕರವಾಗಿವೆ ಎಂದು ವಲಯ ಅರಣ್ಯಾಧಿಕಾರಿ ದೇವರಾಜ್ ಹೇಳಿದ್ದಾರೆ. ಎಲ್ಲಾ 14 ಆನೆಗಳು ಆರೋಗ್ಯಕರವಾಗಿದ್ದು, ನಗರಕ್ಕೆ ಬಂದ ನಂತೆ 200ರಿಂದ 600 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿವೆ ಎಂದರು.

ದುರ್ಗಪರಮೇಶ್ವರಿ ಆನೆಯನ್ನು ದಸರಾಗೆ ಮೊದಲ ಬಾರಿಗೆ ಕರೆಸಲಾಗಿತ್ತು. ಅದಕ್ಕೆ ಅಗತ್ಯ ತಾಲೀಮು ನೀಡಿದ್ದೆವು. ಆದರೆ, ಜಂಬೂ ಸವಾರಿಯಲ್ಲಿ ಅದು ಪಾಲ್ಗೊಳ್ಳಲಿಲ್ಲ. ಮುಂದಿನ ಬಾರಿ ಅದನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಬಲರಾಮ ಮತ್ತೆ ಬರ್ತಾನೆ : ಜಂಬೂ ಸವಾರಿಗೆ ಎರಡು ದಿನ ಮೊದಲು ತಾಲೀಮಿನ ವೇಳೆ ಅರ್ಧಕ್ಕೆ ಹಿಂದಿರುಗಿದ್ದ ಬಲರಾಮ ಆನೆ ಆರೋಗ್ಯಕರವಾಗಿದೆ. ಮುಂದಿನ ದಸರಾ ಉತ್ಸವದಲ್ಲೂ ಬಲರಾಮ ಪಾಲ್ಗೊಳ್ಳುತ್ತಾನೆ ಎಂದು ಭರವಸೆ ವ್ಯಕ್ತಪಡಿಸಿದರು. (ಮೈಸೂರಿನಲ್ಲಿ ಅ.18ರಿಂದ ವೈನ್ ಮೇಳ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+