ಮೈಸೂರು: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಚಾಲೆಂಜಿಂಗ್ ಸ್ಟಾರ್
ಮೈಸೂರು, ಜುಲೈ 20 : ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ನಟ ದರ್ಶನ ಭೇಟಿ ನೀಡಿ, ಚಾಮುಂಡೇಶ್ವರಿ ದರ್ಶನ ಪಡೆದರು.
ದೇವಿಯ ಆಶೀರ್ವಾದ ಪಡೆಯಲು ಸ್ನೇಹಿತರೊಂದಿಗೆ ಬಂದು ನಟನನ್ನು ಕಂಡು ಅಭಿಮಾನಿಗಳು ಸುತ್ತುವರೆದರು. ಹರ್ಷ ವ್ಯಕ್ತಪಡಿಸಿದರು. ನಟನನ್ನು ಒಳಗಡೆ ಬಿಡಲು ಹಾಗೂ ಅಭಿಮಾನಿಗಳನ್ನು ನಿಯಂತ್ರಿಸಲು ನೂಕು ನುಗ್ಗಲು ಉಂಟಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು.
ಆ ನಂತರ ಚಾಮುಂಡಿ ದೇವಿ ಆಶೀರ್ವಾದ ಪಡೆದು ದರ್ಶನ್ ವಾಪಸಾದರು.

ಸರ್ಕಾರಿ ಬಸ್ ನಲ್ಲಿ ಆಗಮಿಸಿದ ಶಾಸಕ
ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ವಾಹನಗಳಿಗೆ ನಿಷೇಧ ಹಿನ್ನೆಲೆಯಲ್ಲಿ KSRTC ಬಸ್ ನಲ್ಲಿ ಶಾಸಕ ರಾಮ್ ದಾಸ್ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು.
ಕೆ.ಆರ್.ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಎಸ್.ಎ.ರಾಮದಾಸ್, ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಚಾಮುಂಡಿ ಬೆಟ್ಟಕ್ಕೆ ಜಿಲ್ಲಾಡಳಿತದಿಂದ ವತಿಯಿಂದ ಏರ್ಪಡಿಸಿರುವ ಉಚಿತ ಪ್ರಯಾಣದ ವ್ಯವಸ್ಥೆ ಅಂಗವಾಗಿ ಸಾರಿಗೆ ಬಸ್ನಲ್ಲಿ ಪ್ರಯಾಣಿಸಿದರು. ನಂತರ ಬಸ್ ನಲ್ಲೇ ಹಿಂದಿರುಗಿದರು.












Click it and Unblock the Notifications