ಈ ಬಾರಿಯ ದಸರಾ ಜಂಬೂಸವಾರಿ ವೈಭವ ಹೇಗಿರುತ್ತದೆ?

ಮೈಸೂರು, ಅಕ್ಟೋಬರ್. 23: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಂಡಿದ್ದು ಕ್ಷಣಗಣನೆ ಆರಮಭವಾಗಿದೆ.

ಮೈಸೂರಿನಲ್ಲಿರುವ ಅಂಬಾವಿಲಾಸ ಅರಮನೆಯ ಉತ್ತರದಲ್ಲಿರುವ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 12.07ರಿಂದ 12.21ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. 12.30ರಿಂದ 2ರೊಳಗೆ ಸಲ್ಲುವ ಮಕರ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಮತ್ತು ಮೈಸೂರು ಅರಸರ ಅಧಿದೇವತೆ ಶ್ರೀ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.[ಮೈಸೂರು ಜಂಬೂಸವಾರಿಯ ಆಕರ್ಷಣೆ, ಅಶ್ವರೋಹಿ ದಳ]

dasara

ಸಚಿವ ಸಂಪುಟ ಸಹೋದ್ಯೋಗಿಗಳು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಸೇರಿ ಅನೇಕ ಪ್ರಮುಖರ ಉಪಸ್ಥಿತಿ ಇರಲಿದೆ. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಅರ್ಜುನ ನೇತೃತ್ವದ ಗಜಪಡೆ 5.5 ಕಿ.ಮೀ. ದೂರವನ್ನು ಕ್ರಮಿಸಿ ಬನ್ನಿಮಂಟಪ ತಲುಪಲಿದೆ. ಚಾಮುಂಡೇಶ್ವರಿ ಮೂರ್ತಿ ಹೊತ್ತ ಅರ್ಜುನನೊಂದಿಗೆ ಕುಮ್ಕಿ, ನಿಶಾನೆ ಹಾಗೂ ನೌಪತ್ ಆನೆಗಳು ಹೆಜ್ಜೆ ಹಾಕಲಿವೆ.[ಮೈಸೂರಿನ ಅರಮನೆಗಳ ಇತಿಹಾಸ ಗೊತ್ತಾ?]

ಅರಮನೆ ಉತ್ತರ ದ್ವಾರದಿಂದ ಹೊರಡುವ ಮೆರವಣಿಗೆ ಚಾಮರಾಜೇಂದ್ರ ಒಡೆಯರ್ ವೃತ್ತ, ಕೆ.ಆರ್.ವೃತ್ತ ಮೂಲಕ ಹಾದು ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಬನ್ನಿಮಂಟಪ ಸೇರಲಿದೆ. ಮೆರವಣಿಗೆ ಸಾಗುವ ರಾಜಮಾರ್ಗಗಳನ್ನು ಸ್ವಚ್ಛಗೊಳಿಸಿ ರಂಗೋಲಿಗಳಿಂದ ಸಿಂಗರಿಸಲಾಗಿದ್ದು, ರಸ್ತೆಬದಿಗಳಲ್ಲಿ ಕುಳಿತು ಜಂಬೂಸವಾರಿ ವೀಕ್ಷಿಸಲು ಅನುಕೂಲವಾಗುವಂತೆ ಅರಮನೆ ಆವರಣ ಹಾಗೂ ಕರ್ಜನ್ ಪಾರ್ಕ್, ಪುರಭವನದ ಬದಿಯಲ್ಲಿ ಪೆಂಡಾಲ್ ಅಳವಡಿಸಿ ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ.

ಅರಮನೆ ಆವರಣದಲ್ಲಿ ಕುಳಿತು ದಸರಾ ವೀಕ್ಷಿಸಲು 15 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ತಬ್ಧ ಚಿತ್ರಗಳು ಸಹ ಮೆರವಣಿಗೆಯಲ್ಲಿ ಸಾಗಲಿದ್ದು, ಸಂಜೆ ಆಲರ್ಷಕ ಪಂಜಿನ ಕವಾಯಿತಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+