ಮೈಸೂರು ರೈತನ ಮನೆಯೊಂದರಲ್ಲಿ ತ್ರಿವಳಿ ಕರುಗಳು
ಮೈಸೂರು, ಡಿಸೆಂಬರ್, 15 : ಸಾಮಾನ್ಯವಾಗಿ ಹಸುಗಳು ಒಂದು ಕರುವಿಗೋ ಅಥವಾ ಅವಳಿ ಕರುಗಳಿಗೋ ಜನ್ಮ ನೀಡಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬರ ರೈತನ ಮನೆಯಲ್ಲಿ ಹಸು ತ್ರಿವಳಿ ಕರುಗಳಿಗೆ ಜನ್ಮ ನೀಡಿದೆ. ಹಸು, ಕರುವಿನ ಆರೈಕೆಯಲ್ಲಿ ಮನೆಯವರು ತೊಡಗಿದ್ದಾರೆ.
ಹುಣಸೂರು ತಾಲೂಕಿನ ಶೀರೇನಹಳ್ಳಿ ಗ್ರಾಮದ ರೈತ ದೊಡ್ಡಸ್ವಾಮಿಗೌಡರ ಪುತ್ರ ನಳರಾಜ್ ಎಂಬುವರು ಸಾಕಿದ ಹೆಚ್‍ಎಫ್ ತಳಿಯ ಹಸು ತ್ರಿವಳಿ ಕರುಗಳಿಗೆ ಜನ್ಮ ಕೊಟ್ಟಿದೆ. ಈ ಹಸು ಮತ್ತು ಕರುವನ್ನು ನೋಡಲು ಸಾಕಷ್ಟು ಮಂದಿ ಆಗಮಿಸುತ್ತಿದ್ದು, ಹಸು ಕರುಗಳು ಆರೋಗ್ಯವಾಗಿವೆ ಎಂದು ಹಿರೀಕ್ಯಾತನಹಳ್ಳಿ ಪಶು ಆರೋಗ್ಯ ಕೇಂದ್ರದ ವೈದ್ಯರಾದ ಮಹೇಶ್ ತಿಳಿಸಿದ್ದಾರೆ.[ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿ]

ಒಂದು ಹಸು ಮೂರು ಕರುಗಳಿಗೆ ಜನ್ಮ ನೀಡಿರುವುದು ಗ್ರಾಮದ ಜನರಿಗೆ ಸಂತಸ, ಅಚ್ಚರಿಯಾದರೆ ಹಸುವಿನ ಮಾಲೀಕ ನಳರಾಜ್ ಅವರಿಗೆ ಮೂರು ಕರುಗಳನ್ನು ಸಾಕುವ ಜವಾಬ್ದಾರಿ ಹೆಗಲಿಗೇರಿದೆ.[ಗೋವಿನ ಹಾಡು : ಪುಣ್ಯಕೋಟಿಯ ಕಥೆಯಿದು]
ಈ ಕರುಗಳು ಆರೋಗ್ಯವಾಗಿ ಬೆಳೆಯಬೇಕಾದರೆ ತಾಯಿಯ ಹಾಲನ್ನು ನೀಡಲೇ ಬೇಕು. ಎಲ್ಲಾ ಹಾಲು ಕರು ಕುಡಿದರೆ ಮನೆ ನಿರ್ವಹಣೆಗೆ ಹಾಲು ಇಲ್ಲದಂತಾಗುತ್ತದೆ. ಇದೀಗ ಇಬ್ಬಂದಿ ಸ್ಥಿತಿಯಲ್ಲಿರುವ ರೈತ, ಕರುಗಳು ಕುಡಿದು ಉಳಿದ ಹಾಲನ್ನು ಮಾತ್ರ ಉಪಯೋಗಿಸುವುದು ಅನಿವಾರ್ಯವಾಗಿದೆ.












Click it and Unblock the Notifications