ಈಕೆಗೆ ಸಿಎಂ ಸಿದ್ದುನೇ ಬಾಡಿಗೆ ಮನೆ ಕೊಡಿಸ್ಬೇಕಂತೆ
ಬೆಂಗಳೂರು, ಮೇ 5: ಇತ್ತೀಚಿನ ಬಿಜೆಪಿಯ ಮಾಜಿ ಸಚಿವ ರಾಮದಾಸ್ ಪ್ರೇಮ ರಾದ್ಧಾಂತ ಗೊತ್ತಲ್ಲಾ? ಅದರ ಮುಂದುವರಿದ ಭಾಗವನ್ನೂ ಕೇಳಿ.
ಏನಪ್ಪಾ ರಾಮದಾಸ್ ಪ್ರೇಮಪುರಾಣದ ಕಥಾನಾಯಕಿ ಪ್ರೇಮಕುಮಾರಿ ಅವರು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತನಗೆ ಮೈಸೂರಿನಲ್ಲಿ ಎಲ್ಲೂ ಬಾಡಿಗೆ ಮನೆ ಸಿಗುತ್ತಿಲ್ಲ. ಎಲ್ಲೇ ಹೋಗಿ ಕೇಳಲಿ ನನಗೆ ಮನೆ ಕೊಡೋಲ್ಲ ಅಂತ ಹೇಳ್ತಿದ್ದಾರೆ ಎಲ್ರೂ. ಇದಕ್ಕೆ ಕಾಣದ ಕೈಗಳು ಕಾರಣವಾಗಿವೆ ಎಂದು ಅಲವತ್ತುಕೊಂಡಿದ್ದಾರೆ.
(ರಿಯಲ್ ಎಸ್ಟೇಟ್ ಉದ್ಯಮಿ ರಾಮದಾಸ್ ಪರಿಚಯ)
'ತನಗಾಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಹೋರಾಟ ನಡೆಸಿದ ಏಕೈಕ ಕಾರಣಕ್ಕೆ ನನಗೆ ಮನೆ ಕೊಡದೆ ಸತಾಯಿಸುತ್ತಿದ್ದಾರೆ. ಇದೊಂದು ರೀತಿ ಸಾಮಾಜಿಕ ಬಹಿಷ್ಕಾರಕ್ಕೀಡಾಗಿದ್ದೇನೆ ಎಂದು ಪ್ರೇಮ ತಮಗಾಗುತ್ತಿರುವ ನೋವು/ಅನ್ಯಾಯವನ್ನು ಮನಮುಟ್ಟುವಂತೆ ಪತ್ರಕರ್ತರೆದುರು ವಿವರಿಸಿದರು.

'ಈ ಹಿಂದಿನಿಂದಲೂ ನಾನೊಂದು ಮನೆಯಲ್ಲಿ ಬಾಡಿಗೆಗೆ ಇದ್ದೇನೆ. ಆದರೆ ಆ ಮನೆಯ ಮಾಲೀಕರು ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. 2 ತಿಂಗಳಿಂದ ಬಾಡಿಗೆ ಮನೆಗಾಗಿ ನಾನು ಪಡುತ್ತಿರುವ ಬವಣೆ ಹೇಳತೀರದಾಗಿದೆ' ಎಂದು ಅವರು ಹೇಳಿದರು. (ಪ್ರೇಮ ಬಾಧಿತ ರಾಮದಾಸ್ ಗೆ ಮತ್ತೊಂದು ಸಂಕಟ)
'ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ನನ್ನ ಹಿಂದೆ ಬೇಹುಗಾರಿಕೆ ಪ್ರಾರಂಭವಾಯಿತು. ಅದು ಇಂದಿಗೂ ಮುಂದುವರಿದಿದೆ. ಇದರಿಂದ ನಾನು ಮಾನಸಿಕವಾಗಿ ಘಾಸಿಗೊಂಡಿದ್ದೇನೆ' ಎಂದು ಪ್ರೇಮ ಹೇಳಿದರು.
'ಈಗಿನ ಪರಿಸ್ಥಿತಿಯೂ ಭಿನ್ನವಾಗಿಲ್ಲ. ನನ್ನಂತಹ ಹೆಣ್ಣುಮಗಳಿಗೆ ಅನ್ಯಾಯವಾಗಿದೆ. ಇರೋಕ್ಕೆ ಮನೆಯೇ ಕೊಡೋಲ್ಲ ಅಂದ್ರೆ ನಾನೆಲ್ಲಿ ಹೋಗಬೇಕು. ಮಹಾರಾಜರ ನಾಡಿನಲ್ಲಿ ಹೆಣ್ಣುಮಗಳಿಗೆ ಇಂತಹ ದುಃಸ್ಥಿತಿಯೇ? ಅದೂ ನಿಮ್ಮದೇ ಜಿಲ್ಲೆಯಲ್ಲಿ ಒಬ್ಬ ಹೆಣ್ಣುಮಗಳಿಗೆ ಇಂತಹ ಅನ್ಯಾಯ ನಡೆದಿದೆ. ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳೇ ನೀವೇ ನನಗೊಂದು ಮನೆ ಬಾಡಿಗೆ ಕೊಡಿಬೇಕು ಎಂದು ನಾಡಿನ ದೊರೆಯನ್ನು ಪ್ರೇಮಕುಮಾರಿ ಕೋರಿದ್ದಾರೆ.
'ಇನ್ನೂ ಸ್ವಲ್ಪ ದಿನ ಟ್ರೈ ಮಾಡ್ತೀನಿ. ಇನ್ನೂ ಒಂದಷ್ಟು ಬ್ರೋಕರುಗಳಿಗೆ ಕೇಳಿ ನೋಡ್ತೀನಿ. ಸಿಗಲಿಲ್ಲಾಂದ್ರೆ. ಬೆಂಗಳೂರಿನಲ್ಲಿ ಸೀದಾ ನಿಮ್ಮಮ ಮನೆಯೆದುರಿಗೆ ಬಂದು ಧರಣಿ ಕುಳಿತುಕೊಳ್ಳುತ್ತೇನೆ. ಆಗ ನೀವೇ ಏನಾದರೊಂದು ವ್ಯವಸ್ಥೆ ಮಾಡಬೇಕು. ಅಂದರೆ ಸರಕಾರಿ ವಸತಿ ಸೌಲಭ್ಯ ಕಲ್ಪಿಸಬೇಕು' ಎಂದು ಪ್ರೇಮ ಗುಟುರು ಹಾಕಿದ್ದಾರೆ.












Click it and Unblock the Notifications