ಅಂಧ ಕಲಾವಿದೆಗೆ ಧನಸಹಾಯ ಮಾಡಿ ಮಾನವೀಯತೆ ಮೆರೆದ ಸಿದ್ಧರಾಮಯ್ಯ
ಮೈಸೂರು, ಜೂನ್ 01 : ಇಂದು (ಗುರುವಾರ) ನಗರದಲ್ಲಿ ನಡೆದ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಧ ಕಲಾವಿದೆಯೊಬ್ಬರಿಗೆ ಸ್ಥಳದಲ್ಲೇ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.
ಮೈಸೂರಿನ ಶಾರದಾದೇವಿ ನಗರದ ನಿವಾಸದ ಎದುರು ಎಂದಿನಂತೆ ಮಾಧ್ಯಮ ಪ್ರತಿನಿಧಿಗಳನ್ನ ಭೇಟಿಯಾದ ಬಳಿಕ ಸಿಎಂ ಸಿದ್ದರಾಮಯ್ಯ ಸಾರ್ವಜನಿಕರ ಅಹವಾಲು ಸ್ವೀಕರಿಸುವುದು ಮಾಮೂಲಿ. ಅದರಂತೆ ಇಂದು ಕೂಡ ಹಲವರ ಅಹವಾಲು ಸ್ವೀಕರಿಸಿದರು. [ದೆಹಲಿಗೆ ಬಂದ ವೃದ್ಧೆ ಮುನಿಯಮ್ಮಳ ಕಥೆಗೆ ಕಣ್ಣೀರಾದ ಸಿಎಂ]

ಅದರಲ್ಲಿ ಆರ್ಕೆಸ್ಟ್ರಾದಲ್ಲಿ ಗಾಯಕಿಯಗಿರುವ ಶೃಂಗೇರಿಯ ಪೂರ್ಣಿಮಾ ಹಾಗೂ ಅವರ ಪತಿ ಕೃಷ್ಣ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸಿದ್ದರು.
ಈ ವೇಳೆ ಪೂರ್ಣಿಮಾ ಅವರು ಆರ್ಕೆಸ್ಟ್ರಾದಲ್ಲಿ ಹಾಡಲು ವಾದ್ಯಗಳ ಕೊಳ್ಳಬೇಕಾಗಿದ್ದು ಆರ್ಥಿಕ ಸಹಾಯ ಬೇಕಾಗಿದೆ ಎಂದು ಸಿಎಂಗೆ ಮನವಿ ಮಾಡಿದರು.
ಅದಕ್ಕೆ ಸಿಎಂ ಎಷ್ಟು ಹಣ ಬೇಕಾಗಬಹುದು ಎಂದಿದ್ದಕ್ಕೆ ಐದು ಸಾವಿರ ಅಂತ ಹೇಳಿದ್ರು. ಆಗ ಸಿಎಂ ತಮ್ಮ ಜೇಬಿನಿಂದ ಪರ್ಸ್ ತೆಗೆದು ಆರು ಸಾವಿರ ಕೊಟ್ಟು. ತೆಗೆದುಕೊ, ಇದರಲ್ಲಿ ಆರು ಸಾವಿರ ಇದೆ. ನಿನ್ನ ಭವಿಷ್ಯ ಉಜ್ವಲವಾಗಲಿ ಅಂತ ಹಾರೈಸಿದರು.
ಕೊಟ್ಟ ಹಣವನ್ನು ಸ್ವೀಕರಿಸಿದ ಅಂಧ ದಂಪತಿ ಸಿಎಂಗೆ ಕೃತಜ್ಞತೆ ಸಲ್ಲಿಸಿದರು. ನಂತರ ಸಾರ್ವಜನಿಕರಿಂದ ಅಹವಾಲುಗಳನ್ನ ಸ್ವೀಕರಿಸಿದ ಸಿದ್ದರಾಮಯ್ಯ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರ ಕೆಲ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಉಳಿದ ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.












Click it and Unblock the Notifications