ಮೈಸೂರಿನಲ್ಲಿ ವಿಷಕಾರಿ ಅನಿಲ ಸೋರಿಕೆ: 20 ಮಂದಿ ಅಸ್ವಸ್ಥ, ಇಬ್ಬರ ಸ್ಥಿತಿ ಗಂಭೀರ
ಮೈಸೂರು: ಗ್ಯಾಸ್ ಸೋರಿಕೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮೈಸೂರಿನ ಹಳೇ ಕೆಸರಿಯ ಗುಜರಿ ಅಂಗಡಿಯೊಂದರಲ್ಲಿ ನಿರುಪಯುಕ್ತ ಸಿಲಿಂಡರ್‌ನಲ್ಲಿದ್ದ ಕ್ಲೋರಿನ್ ಸೋರಿಕೆಯಿಂದ 20 ಜನರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಾನಿಲ ಗಾಳಿಯಲ್ಲಿ ಹರಡಿ ಅಕ್ಕಪಕ್ಕದ ನಿವಾಸಿಗಳೂ ಕೂಡ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಡಾವಣೆಯ ರಿಗಾ ಸ್ಟೀಲ್ ಟ್ರೇಡರ್ ಎಂಬ ಗುಜರಿ ಅಂಗಡಿಯಲ್ಲಿ ಶುಕ್ರವಾರ ಸಂಜೆ 5 ಗಂಟೆ ವೇಳೆ ಈ ಘಟನೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಸಿಲಿಂಡರ್‌ನಿಂದ ಸೋರಿಕೆಯಾಗುತ್ತಿದ್ದ ಕ್ಲೋರಿನ್ ಅನಿಲದ ಟ್ಯಾಪ್ ಅನ್ನು ಬಂದ್ ಮಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.
ಗುಜರಿ ಪಕ್ಕದ ಹಳೆ ಕೆಸರೆ ಗ್ರಾಮಸ್ಥರಲ್ಲೂ ಉಸಿರಾಟದ ತೊಂದರೆ, ಕೆಮ್ಮು ಕಾಣಿಸಿಕೊಂಡು ಪರದಾಡಿದ್ದಾರೆ. ಪುರುಷರು, ಮಹಿಳೆಯರು, ಮಕ್ಕಳು ಸೇರಿ ಐದು ಮಂದಿ ಜನರು ಅಸ್ವಸ್ಥರಾಗಿದ್ದಾರೆ. ಎನ್.ಆರ್. ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದಾವಣಗೆರೆಯಿಂದ ಕ್ಲೋರಿನ್ ಗ್ಯಾಸ್ ತುಂಬುವ ಸಿಲಿಂಡರ್ ಅನ್ನು ಮೈಸೂರಿನ ಈ ಗುಜರಿಗೆ ತರಲಾಗಿತ್ತು. ಅದನ್ನು ಕ್ರಶ್ ಮಾಡಲು ಸಿಲಿಂಡರ್‌ನ ವಾಲ್ ಅನ್ನು ತೆರೆಯಲಾಯಿತು. ಆದರೆ, ಈ ಸಿಲಿಂಡರ್ ಸಂಪೂರ್ಣವಾಗಿ ಖಾಲಿಯಾಗದೇ ಸ್ವಲ್ಪ ಪ್ರಮಾಣದಲ್ಲಿ ಕ್ಲೋರಿನ್ ಅನಿಲ ಉಳಿದುಕೊಂಡಿತ್ತು. ಅದು ಸೋರಿಕೆಯಾಗಿ ಗಾಳಿಯೊಂದಿಗೆ ಸೇರಿಕೊಂಡು 10 ನಿವಾಸಿಗಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು.












Click it and Unblock the Notifications