ಪ್ರಿಯತಮೆಯೊಂದಿಗಿನ ನಗ್ನ ವಿಡಿಯೋ ವೈರಲ್: ಯುವಕ ಆತ್ಮಹತ್ಯೆ
ಮೈಸೂರು, ಮೇ 25 : ತನ್ನ ಗೆಳತಿಯೊಂದಿಗೆ ತೆಗೆದುಕೊಂಡಿದ್ದ ನಗ್ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಇದರಿಂದ ಅವಮಾನಕ್ಕೆ ಹೆದರಿದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ನಂಜನಗೂಡು ತಾಲ್ಲೂಕು ಮಲ್ಲೂಪುರ ಗ್ರಾಮದ ನಿವಾಸಿ ಗಿರೀಶ್ ಆತ್ಮಹತ್ಯೆಗೆ ಶರಣಾದ ಯುವಕ. ಟಿವಿಎಸ್ ನಲ್ಲಿ ಉದ್ಯೋಗಿಯಾಗಿದ್ದ ಗಿರೀಶ್, ಕಾರ್ಯ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು,
ಈ ಇಬ್ಬರು ಪ್ರೇಮಿಗಳು ತಾವೇ ತಮ್ಮ ಮೊಬೈಲ್ನಲ್ಲಿ ನಗ್ನವಾಗಿ ಸೆಲ್ಫಿಗಳನ್ನು ಹಿಡಿದುಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯೊಂದಿಗಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿ ವೈರಲ್ ಆಗುತ್ತಿದ್ದಂತೆ, ಹೆದರಿದ ಗಿರೀಶ್ ಮಾತ್ರೆ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಮೃತ ಗಿರೀಶನ ಪಾಲಕರು, ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಇದರಿಂದ ಗಿರೀಶ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಗಿರೀಶ್ ಸಾವಿನ ನಂತರ ಕಾರ್ಯ ಗ್ರಾಮದಿಂದ ಯುವತಿಯೂ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications