Breaking; ಬಿಜೆಪಿ ಕುಟುಂಬ ರಾಜಕಾರಣಕ್ಕೆ ತಡೆ ಹಾಕಬೇಕು; ವಿಶ್ವನಾಥ್
ಮೈಸೂರು, ಮೇ 02; "ಕುಟುಂಬ ರಾಜಕಾರಣಕ್ಕೆ ತಡೆ ಹಾಕಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದರು. ಇದೀಗ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಆ ಕೆಲಸ ಆಗಬೇಕು" ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಅವರು ಹೊಸ ಮುಖಕ್ಕೆ ಮಣೆ ಹಾಕುತ್ತೀವಿ ಎಂದು ಬಿ. ಎಲ್. ಸಂತೋಷ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದರು. "ಸಂತೋಷ್ ಅವರು ಸರಿಯಾಗಿಯೇ ಹೇಳಿದ್ದಾರೆ. ನಾಗ್ಪುರ ಕಾರ್ಯಕ್ರಮದಲ್ಲಿ ಕುಟುಂಬ ರಾಜಕಾರಣಕ್ಕೆ ತಡೆ ಹಾಕಬೇಕು ಎಂದು ಮೋದಿ ಹೇಳಿದ್ದರು. ಅದನ್ನು ಈಗ ಆರಂಭಿಸಬೇಕು" ಎಂದರು.
ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರ ಬಗ್ಗೆ ಮಾತನಾಡಿದ ಅವರು, "ಈ ಹಗರಣದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸರಿಯಾಗಿ ತನಿಖೆ ಮಾಡಬೇಕು. ಕೇವಲ ಕಲಬುರಗಿ ವ್ಯಾಪ್ತಿಗೆ ಮಾತ್ರ ತನಿಖೆ ಸೀಮಿತ ಆಗಬಾರದು" ಎಂದು ಹೇಳಿದರು.

"ಪಿಎಸ್‌ಐ ಹಗರಣದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಶಾಮೀಲು ಆಗಿದೆ. ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಈ ಹಗರಣದಲ್ಲಿ ಇದ್ದಾರೆ. ನಿಷ್ಪಕ್ಷಪಾತ ತನಿಖೆ ಆಗಬೇಕು" ಎಂದು ಆಗ್ರಹಿಸಿದರು.
ಸ್ಟ್ರಿಕ್ ಆಗಿ ಆಡಳಿತ ಮಾಡುತ್ತಿದ್ದೇನೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಹೆಚ್. ವಿಶ್ವನಾಥ್, "ಇದು ಒಬ್ಬ ಮುಖ್ಯಮಂತ್ರಿ ನೀಡುವ ಹೇಳಿಕೆಯಲ್ಲ. ಆಡಳಿತದಲ್ಲಿ ಸ್ಟ್ರಿಕ್ ಅಥವಾ ಹಾರ್ಡ್ ಅಂತ ಇಲ್ಲ. ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಬೇಕು ಅಷ್ಟೇ. ನಿಮ್ಮ ಹಾರ್ಡ್ ವೆಪನ್ ಅನ್ನು ಹಗರಣ ಮಾಡಿದವರ ಮೇಲೆ ಬಳಸಿ. ಶಾಂತಿ ಕದಡುವವ ಮೇಲೆ ಬಳಸಿ. ಸರ್ಕಾರಕ್ಕೆ ಪ್ರತಿದಿನ ಕೆಟ್ಟ ಹೆಸರು ಬರುತ್ತಿದೆ. ಪ್ರತಿದಿನ ಒಂದಲ್ಲ ಒಂದು ಹಗರಣ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವಿರುದ್ದ ವಾಗ್ದಾಳಿ ನಡೆಸಿದ ವಿಶ್ವನಾಥ್, "ಸಿ. ಟಿ. ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಾಯಿಗೆ ಬಂದ ಹಾಗೆ ಏನೇನೋ ಮಾತನಾಡುತ್ತಾರೆ. ಈ ರೀತಿ ಮಾತನಾಡಬಾರದು" ಎಂದು ಸಲಹೆ ನೀಡಿದರು.












Click it and Unblock the Notifications