ಕಾರು ಚಲಿಸಿ ಜೀವ ಬಿಟ್ಟಿದ್ದ ಜೋಡಿ ಗಿಳಿಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಪಕ್ಷಿಪ್ರೇಮಿ
ಮೈಸೂರು, ಜುಲೈ 15: ಮೇಲ್ನೋಟಕ್ಕೆ ಸಣ್ಣ ಪುಟ್ಟ ಸಂಗತಿ ಎನಿಸುವಂಥದ್ದು ಆಳದಲ್ಲಿ ಹಲವರ ಮನಸ್ಸನ್ನು ಕಲುಕಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂಥ ಘಟನೆಯೊಂದು ಈ ವರದಿಯಲ್ಲಿ ಇದೆ. ಅಪಘಾತದಲ್ಲಿ ಸಾವಿಗೀಡಾಗಿದ್ದ ಜೋಡಿ ಗಿಳಿಗಳ ಅಂತ್ಯಸಂಸ್ಕಾರ ಮಾಡಿದ ಪಕ್ಷಪ್ರೇಮಿಯೊಬ್ಬರ ಮಾನವೀಯತೆ ಈಗ ಚರ್ಚೆ ಆಗುತ್ತಿದೆ.
ಅಂದಹಾಗೆ ಈ ಘಟನೆ ವರದಿ ಆಗಿರುವುದು ಶ್ರೀರಂಗಪಟ್ಟದಿಂದ. ಜೋಡಿ ಗಿಳಿಗಳಿಗೆ ಅಪಘಾತವಾಗಿ ರಸ್ತೆ ಮಧ್ಯದಲ್ಲೇ ಮೃತಪಟ್ಟಿದ್ದವು. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂಭಾಗದ ಸಂತೆ ಮೈದಾನದ ರಸ್ತೆಯಲ್ಲಿ ಕಾರೊಂದು ಏಕಾಏಕಿ ಗಿಳಿಗಳ ಮೇಲೆ ಚಲಿಸಿತ್ತು. ಪರಿಣಾಮವಾಗಿ ಜೋಡಿ ಪಕ್ಷಿಗಳು ಸ್ಥಳದಲ್ಲೇ ಮೃತಪಟ್ಟಿದ್ದವು.
ಬೆಳ್ಳಂಬೆಳಗ್ಗೆ ಆಹಾರ ಅರಸಿ ಗುಂಪಿನ ಜತೆಗೆ ಬಯಲಿಗೆ ತೆರಳಿದ್ದ ಈ ಗಿಳಿಗಳೆರಡು ಸಂಜೆ ಮರಳಿ ಶ್ರೀರಂಗನಾಥ ದೇವಾಲಯ ಗೋಪುರದ ಗೂಡಿಗೆ ಮರಳುವ ಸಮಯದಲ್ಲಿ ಈ ಅವಘಡ ಸಂಭವಿಸಿತ್ತು. ಇವೆರಡು ಗಿಳಿಗಳನ್ನು ಕಂಡ ವಾಯುವಿಹಾರಿಗಳು ಹಾಗೂ ಪಕ್ಷಿಪ್ರಿಯರು ಕೆಲಕಾಲ ಮಮ್ಮಲ ಮರುಗಿದರು. ಗಿಳಿಗಳನ್ನು ಬದುಕಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ.

ಆನಂತರ ಶ್ರೀರಂಗಪಟ್ಟಣದ ಪಕ್ಷಿಪ್ರೇಮಿ ರಮೇಶ್ ಈ ಮೃತ ಗಿಳಿಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದರು. ಅಂತ್ಯ ಸಂಸ್ಕಾರ ಅಂದರೆ, ರಸ್ತೆ ಮಧ್ಯೆ ಬಿದ್ದಿದ್ದ ಗಿಳಿಗಳನ್ನು ತೆಗೆದುಕೊಂಡು ಹೋಗಿ, ಸಣ್ಣದಾದ ಎರಡು ಗುಂಡಿ ತೋಡಿ, ಅಕ್ಕ ಪಕ್ಕ ಮಣ್ಣು ಮಾಡಿದರು. ಅಲ್ಲೇ ರಸ್ತೆಯಲ್ಲಿ ಬಿಟ್ಟಿದ್ದರೆ ಆ ಪುಟ್ಟ ಪಕ್ಷಿಗಳ ಮೇಲೆ ಇನ್ನಷ್ಟು ವಾಹನ ಹರಿಯುತ್ತಿತ್ತು. ಹಾಗಾಗದಂತೆ ಅಂತ್ಯಸಂಸ್ಕಾರ ನೆರವೇರಿಸಿದ ರಮೇಶ್ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications