ಮೈಸೂರಿನ ಗ್ರಾಮವೊಂದರಲ್ಲಿ 25 ಕೋಳಿಗಳ ಸಾವು; ಹೆಚ್ಚಾದ ಹಕ್ಕಿ ಜ್ವರ ಭೀತಿ
ಮೈಸೂರು, ಮಾರ್ಚ್ 26: ಇಲ್ಲಿಗೆ ಸಮೀಪದ ಹನಸೋಗೆ ಪಕ್ಕದ ತಂದ್ರೆ ಗ್ರಾಮದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಈ ಪುಟ್ಟ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿರುವುದು ಭೀತಿ ಹೆಚ್ಚಲು ಕಾರಣವಾಗಿದೆ.
ಆರೋಗ್ಯವಾಗಿದ್ದ ಕೋಳಿಗಳು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿವೆ ಎಂದು ಗ್ರಾಮದ ಮಹಿಳೆ ಪುಟ್ಟ ನಂಜಮ್ಮ ತಿಳಿಸಿದರು. ಈ ಕುರಿತು ಕೆ.ಆರ್. ಪೇಟೆಯ ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದೇವೆ. ಇನ್ನೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಈ ರೀತಿ ಕೊಳಿ ಸತ್ತುಬಿದ್ದಿರುವುದು ಆತಂಕ ತಂದಿದೆ. ಕನಿಷ್ಠ ಪಕ್ಷ ಪಶು ವೈದ್ಯರನ್ನೂ ಕಳಿಸಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಮೊದಲೇ ಕೊರೊನಾ ಭೀತಿಯಿಂದಾಗಿ ಇಡೀ ದೇಶವೇ ತತ್ತರಿಸುತ್ತಿರುವಾಗ ಹಕ್ಕಿ ಜ್ವರದ ಭೀತಿಯೂ ಅವರಿಸಿದೆ. ಹೀಗಾಗಿ ಗ್ರಾಮಸ್ಥರು ಕೋಳಿಗಳನ್ನು ತಾವೇ ಕೊಲ್ಲುತ್ತಿದ್ದಾರೆ.












Click it and Unblock the Notifications