ಗಂಟೆಗಳಲ್ಲೇ ಕಳುವಾಯ್ತು ಮಹಿಳೆಯರ 8 ಬಂಗಾರ ಸರ

ಮೈಸೂರು, ಜುಲೈ, 22 : ಬಂಗಾರವೆಂದರೆ ತುಂಬಾ ಇಷ್ಟವೇ? ಬಂಗಾರ ಒಡವೆಗಳನ್ನು ಹಾಕಿಕೊಂಡು ಒಬ್ಬರೇ ಹೊರಗೆ ಹೋಗುತ್ತೀರಾ? ಅಥವಾ ಯಾರಾದರೂ ವಿಳಾಸ ಕೇಳಿದಾಗ ವಿಳಾಸ ತೋರಿಸುತ್ತೀರಾ? ಹಾಗಾದರೆ ಈ ಸುದ್ದಿ ಓದಿ...ಮುಂದಿನದನ್ನು ನಿರ್ಧರಿಸಿ..

ಬಂಗಾರ ಅಪಹರಿಸುವ ದೊಡ್ಡ ಕಳ್ಳರ ಗುಂಪೊಂದು ಹುಟ್ಟಿಕೊಂಡಿದ್ದು, ಕೇವಲ 3 ಗಂಟೆಯಲ್ಲಿ 8 ಬಂಗಾರ ಸರಗಳನ್ನು ಅಪಹರಿಸಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.[ಸಾವಿತ್ರಮ್ನೋರೇ, ಮತ್ತೆ ಮಾಂಗಲ್ಯ ಸರ ಕಳಕೊಂಡೀರಿ ಎಚ್ಚರಿಕೆ!]

Bikers rob 8 women of gold chains in 3 hours in mysuru

ಬಂಗಾರ ಕಳುವಿನ ಜಾಲದಲ್ಲಿ ಮೊದಲ ಟಾರ್ಗೆಟ್ ಮಧ್ಯ ವಯಸ್ಕ ಹಾಗೂ ವಯಸ್ಸಾದ ಮಹಿಳೆಯರು. ಮಹಿಳೆಯರು ಒಬ್ಬರೇ ವಿಹರಿಸುವುದನ್ನು, ಮನೆಯಲ್ಲಿ ಒಬ್ಬರೇ ಇರುವುದನ್ನು ಗೊತ್ತು ಮಾಡಿಕೊಂಡ ಕೆಲವು ಯುವಕರು ವಿಳಾಸ ಕೇಳುವ ನೆಪದಲ್ಲಿ ಅವರ ಬಳಿ ಸಾಗುತ್ತಾರೆ.

ವಿಳಾಸದ ದಾರಿಯನ್ನು ತೋರಿಸುತ್ತಿರುವ ಸಮಯದಲ್ಲಿ ಬಜಾಜ್ ಪಲ್ಸರ್ ಬೈಕಿನಲ್ಲಿ ಬಂದ ಅದೇ ಗುಂಪಿನ ವ್ಯಕ್ತಿ ಸರವನ್ನು ಕಿತ್ತುಕೊಂಡು ಮಾಯವಾಗುತ್ತಾನೆ. ಈ ರೀತಿಯಾಗಿ ಕಾರ್ಯಪ್ರವೃತ್ತವಾದ ಕದೀಮರ ಗುಂಪೊಂದು ಬರೋಬ್ಬರಿ 10 ಮಹಿಳೆಯರ ಮೇಲೆ ಆಕ್ರಮಣ ಮಾಡಿದ್ದು 8 ಬಂಗಾರ ಸರವನ್ನು ದೋಚಿದ್ದಾರೆ.

ಒಂದು ವಾರದಲ್ಲಿ ಸುಮಾರು 13 ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕದೀಮರ ಜಾಲ ಹುಡುಕುವ ಎಲ್ಲಾ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮೀಷನರ್ ಬಿ. ದಯಾನಂದ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+