ತಿ.ನರಸೀಪುರದಲ್ಲಿ ಬೆನಕನಹಳ್ಳಿ ಪಟ್ಟದ ಮಠದ ಸ್ವಾಮೀಜಿ ಅನುಮಾನಾಸ್ಪದ ಸಾವು

ಮೈಸೂರು, ಮಾರ್ಚ್ 7: ಸ್ವಾಮೀಜಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆನಕನಹಳ್ಳಿ ಪಟ್ಟದ ಮಠದ ಪೀಠಾಧ್ಯಕ್ಷ ಮಹದೇವಸ್ವಾಮಿ (47) ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿ. ಸ್ವಾಮೀಜಿಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಜೊತೆಗೆ ಅವರ ಸಾವಿನ ಕುರಿತೂ ಅನುಮಾನಗಳು ವ್ಯಕ್ತಗೊಂಡಿವೆ.

ಸಾವಿನ ಸುತ್ತ ಅನುಮಾನ: ಈ ನಡುವೆ ಮಹದೇವಸ್ವಾಮೀಜಿ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ. ಸ್ವಾಮೀಜಿ ಸಾವಿನ ಬಗ್ಗೆ ಗ್ರಾಮದಲ್ಲಿ ಹಲವು ರೀತಿಯ ವದಂತಿ ಹರಡುತ್ತಿದೆ. ಸ್ವಾಮೀಜಿಯ ಮಠದಲ್ಲಿದ್ದವರು, ಮಠದಲ್ಲಿ ಸ್ವಾಮೀಜಿ ಮಲಗಿದ್ದ ವೇಳೆಯೇ ಹೃದಯಾಘಾತವಾಗಿದೆ ಎನ್ನುತ್ತಿದ್ದರೆ, ಕೆಲ ಗ್ರಾಮಸ್ಥರು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಜೊತೆಗೆ ಸ್ವಾಮೀಜಿ ನೇಣು ಹಾಕಿಕೊಂಡಿರುವ ಫೋಟೊ ಕೂಡ ವೈರಲ್ ಆಗಿದೆ.

Benakanahalli Mutt Swamiji Mahadeva Swamiji Suicide In T Narasipura

ಘಟನೆ ಕುರಿತು ತಿ. ನರಸೀಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ನಿರ್ಧರಿಸಿದ್ದಾರೆ. ಮಠದ ಆವರಣದಲ್ಲೇ ಸ್ವಾಮೀಜಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ‌.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+