Nanjangud: ನಂಜನಗೂಡಿನಲ್ಲಿ ತಾರಕಕ್ಕೇರಿದ ಅಂಧಕಾಸುರ ಸಂಹಾರ ವಿವಾದ: ಶಾಂತಿಸಭೆ ವಿಫಲ
ಮೈಸೂರು, ಜನವರಿ 10: ಪ್ರತಿ ವರ್ಷದಂತೆ ನಂಜನಗೂಡಿನಲ್ಲಿ ನಡೆದುಕೊಂಡು ಬರುತ್ತಿದ್ದ ಅಂಧಕಾಸುರ ಸಂಹಾರಕ್ಕೆ ಈ ಬಾರಿಯೂ ವಿಘ್ನ ಎದುರಾಗಿದೆ. ಕಳೆದ ಬಾರಿ ಕಳೆದ ವರ್ಷ ಅಂಧಕಾಸುರ ಸಂಹಾರದ ವೇಳೆ ಮಹಿಷಾಸುರನ ಚಿತ್ರ ಹೋಲುವ ಪಟ ಹಾಕಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಗಲಭೆ ನಡೆಸಲಾಗಿತ್ತಲ್ಲದೆ, ನಂಜುಂಡೇಶ್ವರನ ವಿಗ್ರಹದ ಮೇಲೆ ಎಂಜಲು ನೀರು ಎರಚಿ ಅಪಮಾನಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಬಾರಿ ಯಾವುದೇ ಗೊಂದಲ ನಿರ್ಮಾಣವಾಗದಂತೆ ಆಚರಣೆ ನಡೆಸುವ ಸಂಬಂಧ ತಾಲೂಕು ಆಡಳಿತ ಶಾಂತಿ ಸಭೆ ಕರೆದಿತ್ತಾರೂ ಸಭೆಯಲ್ಲಿ ಒಮ್ಮತ ಮೂಡದ ಕಾರಣ ವಿಫಲವಾಗಿದೆ.

ಈ ಬಾರಿ ಜನವರಿ 12ರಂದು ಅಂಧಕಾಸುರ ಸಂಹಾರ ಕಾರ್ಯಕ್ರಮ ನಡೆಯಲಿದ್ದು, ಈ ಸಂಬಂಧ ತಾಲೂಕು ಕಛೇರಿಯಲ್ಲಿ ಶಾಂತಿ ಸಭೆ ಕರೆಯಲಾಗಿತ್ತು. ನಂಜುಂಡೇಶ್ವರನ ಭಕ್ತರು ಹಾಗೂ ಅಂಧಕಾಸುರ ಸಂಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಉಭಯ ತಂಡಗಳ ಮುಖಂಡರನ್ನು ಕರೆದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಡಿವೈಎಸ್ ಪಿ ರಘು ಅವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿದ್ದರು.
ಈ ಸಭೆಯಲ್ಲಿ ಕಳೆದ ಬಾರಿಯಂತೆ ಸಮಸ್ಯೆ ಆಗ ಬಾರದು ಎನ್ನುವ ಕಾರಣಕ್ಕೆ ಆಕ್ಷೇಪಾರ್ಹವಾದ ಅಂಧಕಾಸುರನ ಚಿತ್ರ ಬದಲಿಸಿ ರಾಜ್ಯ ಆಗಮ ಶಾಸ್ತ್ರ ಪಂಡಿತರ ಜೊತೆ ಚರ್ಚಿಸಿ ಶಿವ ಪುರಾಣದಲ್ಲಿ ಬರುವ ಅಂಧಕಾಸುರನ ವರ್ಣನೆಗೆ ತಕ್ಕಹಾಗೆ ಚಿತ್ರ ಬರೆಸಲಾಗಿದೆ ಎಂದು ನೂತನ ಚಿತ್ರ ಪಟವನ್ನು ತಹಶೀಲ್ದಾರ್ ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಪ್ರದರ್ಶನ ಮಾಡಿದರು. ಈ ವೇಳೆ ನೂತನ ಚಿತ್ರಕ್ಕೆ ಉಭಯ ತಂಡದ ಮುಖಂಡರು ಒಪ್ಪಿಗೆ ಸೂಚಿಸಿದರು ಸಮಸ್ಯೆ ಬಗೆಹರಿಯಿತು ಎನ್ನುವಷ್ಟರಲ್ಲೇ, ದಲಿತ ಸಂಘರ್ಷ ಸಮಿತಿಯ ಮಲ್ಲಳ್ಳಿ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು.
ಇದೊಂದು ಮಾನವೀಯತೆ ಇಲ್ಲದ ಆಚರಣೆಯಾಗಿದ್ದು, ಇದು ನಿಲ್ಲಬೇಕು. ಈ ಆಚರಣೆ ನಿಲ್ಲಿಸಬೇಕು ಎಂದು ನಾವು ಸರ್ಕಾರಕ್ಕೆ ಪತ್ರ ಬರೆದ್ದಿದ್ದೇವೆ. ಈ ಆಚರಣೆ ನಿಲ್ಲಿಸುವ ಕುರಿತು ಕಾನೂನು ಹೋರಾಟವನ್ನು ಮಾಡುತ್ತಿದ್ದೇವೆ. ಕಾನೂನು ತಡೆ ಬರುವವರೆಗೂ ನಡೆಯಲಿ, ಆದರೆ ಅಂಧಕಾಸುರನ ಚಿತ್ರವನ್ನು ಯಾರು ತುಳಿಯ ಬಾರದು ಹಾಗೂ ಅಂಧಕಾಸುರನ ಚಿತ್ರವನ್ನು ಚಿಕ್ಕದಾಗಿ ಬರೆದುಕೊಂಡು ಆಚರಣೆ ಮಾಡಿಕೊಳ್ಳಬೇಕು ಎಂದು ಹೊಸ ಕ್ಯಾತೆ ತೆಗೆದರು.

ನಾರಾಯಣ್ ಅವರ ಮಾತಿಗೆ ಅಸಮ್ಮತಿಸಿ, ಆಕ್ಷೇಪ ವ್ಯಕ್ತಪಡಿಸದ ನಂಜುಂಡೇಶ್ವರನ ಭಕ್ತರು, ಮಹಿಷಾಸುರನ ಹೋಲುವ ಚಿತ್ರ ತೆಗೆಯುವುದು ಅವರ ಬೇಡಿಕೆಯಾಗಿತ್ತು. ಈಗ ಅದನ್ನು ದೇವಾಲಯದ ಆಡಳಿತ ಮಂಡಳಿ ಬದಲಿಸಿ ಸಮಸ್ಯೆಗೆ ಪರಿಹಾರ ತಂದಿದೆ. ಆದರೆ ಈಗ ಅಂಧಕಾಸುರನ ಚಿತ್ರವನ್ನು ತುಳಿಯಬಾರದು, ಚಿಕ್ಕದಾಗಿ ಚಿತ್ರ ಬರೆಯಬೇಕು ಇಷ್ಟೇ ಇರಬೇಕು ಎಂಬ ಷರತ್ತು ಹಾಕುತ್ತಾ ಬೇರೆ ವರಸೆ ತೆಗೆಯುತ್ತಿರುವುದು ಸರಿಯಲ್ಲ. ಇದು ನಂಜನಗೂಡಿನ ಶಾಂತಿ ಕದಡುವ ಹುನ್ನಾರವಲ್ಲದೇ ಮತ್ತೇನು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ನಡೆ ಏನಿರಬಹುದು?
ಇವರ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಸರ್ಕಾರದ ಕೈಪಿಡಿಯಲ್ಲಿ ಇರುವಂತೆ ಪರಂಪರಾಗತವಾಗಿ ಏನು ನಡೆದುಕೊಂಡು ಬಂದಿದೆಯೋ ಅದೇ ನಡೆಯಬೇಕು. ಇವರು ಹೇಳಿದಂತೆ ಬದಲಾವಣೆ ಒಪ್ಪಲು ಸಾಧ್ಯವಿಲ್ಲ. ಇದು ನಮ್ಮ ಧಾರ್ಮಿಕ ಆಚರಣೆ ಅದನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಇದೊಂದು ಸಂವಿಧಾನ ವಿರೋಧಿ ನಡೆ. ಈ ಕುರಿತು ನಂಜುಂಡೇಶ್ವರನ ಭಕ್ತರೆಲ್ಲರೂ ಸೇರಿ ಮುಂದೆ ಏನು ಮಾಡಬೇಕೆಂದು ತೀರ್ಮಾನ ತೆಗೆದುಕೊಳ್ಳಲ್ಲಿದ್ದೇವೆ ಎಂದು ನಂಜುಂಡೇಶ್ವರನ ಭಕ್ತರು ಹೊರ ನಡೆದಿದ್ದರಿಂದ ಸದ್ಯಕ್ಕೆ ಸಭೆ ವಿಫಲಗೊಂಡಂತಾಗಿದೆ. ಹೀಗಾಗಿ ಮುಂದೆ ಯಾವ ರೀತಿಯ ಕ್ರಮಕೈಗೊಳ್ಳುತ್ತಾರೆ? ಭಾನುವಾರ (ಜ.12) ನಡೆಯಲಿರುವ ಅಂಧಕಾರಸುರ ಸಂಹಾರದ ಆಚರಣೆ ಹೇಗಿರಲಿದೆ ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications