ಜಿಲ್ಲಾಡಳಿತದ ನೆರವಿನೊಂದಿಗೆ ಮೈಸೂರಿನಿಂದ ಬೆಂಗಳೂರಿಗೆ ಬಂದ ನಟಿ ಭಾರತಿ ವಿಷ್ಣುವರ್ಧನ್
ಮೈಸೂರು, ಏಪ್ರಿಲ್ 16: ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ಲಾಕ್ ಡೌನ್ ಅನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ಆದರೆ ಲಾಕ್ ಡೌನ್ ಆರಂಭವಾಗುವುದಕ್ಕೂ ಮೊದಲೇ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಮೈಸೂರಿಗೆ ಬಂದಿದ್ದು, ಇಂದು ಆರೋಗ್ಯದ ಕಾರಣದಿಂದಾಗಿ ಬೆಂಗಳೂರಿಗೆ ಅವರು ವಾಪಸ್ಸಾಗಿದ್ದಾರೆ.
ಭಾರತಿ ವಿಷ್ಣುವರ್ಧನ್ ಅವರು ಮೈಸೂರಿಗೆ ತೆರಳಿದ ನಂತರ ಲಾಕ್ ಡೌನ್ ವಿಧಿಸಲಾಗಿದೆ. ನಂತರ ಅವರಿಗೆ ವಾಪಸ್ ಬೆಂಗಳೂರಿಗೆ ಬರಲು ಸಾಧ್ಯವಾಗಿರಲಿಲ್ಲ. ವಾಹನ ಬೆಂಗಳೂರಲ್ಲೇ ಬಿಟ್ಟು ಬಂದಿದ್ದರಿಂದ ವಾಪಸ್ ಬರಲು ಸಾಧ್ಯವಾಗಿರಲಿಲ್ಲ.

ಅವರ ಬಳಿ ಅಗತ್ಯ ಔಷಧಿಗಳು ಖಾಲಿಯಾಗುತ್ತಾ ಬಂದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಗಮನಕ್ಕೆ ತಂದರು. ಮಾನವೀಯತೆಯ ದೃಷ್ಟಿಯಿಂದ ತಕ್ಷಣವೇ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು ಅಗತ್ಯ ಪಾಸ್, ವಾಹನ ವ್ಯವಸ್ಥೆ ಮಾಡಿಸಿ ಡಾ. ಭಾರತಿ ವಿಷ್ಣುವರ್ಧನ್ ಅವರು ಬೆಂಗಳೂರಿಗೆ ಬರಲು ನೆರವಾಗಿದ್ದಾರೆ.












Click it and Unblock the Notifications