50% ಫೈನ್: ಮೈಸೂರಿನಲ್ಲಿ ಎರಡೇ ದಿನಗಳಲ್ಲಿ ₹46.56 ಲಕ್ಷ ಸಂಗ್ರಹ, ವಿವರ ಇಲ್ಲಿದೆ
ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿಗೆ ಸರ್ಕಾರ 50% ರಿಯಾಯಿತಿ ನೀಡಿದ್ದು, ಈ ಸಂಬಂಧ ಮೈಸೂರಿನಲ್ಲಿ ಎರಡೇ ದಿನದಲ್ಲಿ ಸಂಗ್ರಹವಾದ ಮೊತ್ತದ ವಿವರನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮೈಸೂರು, ಫೆಬ್ರವರಿ, 07: ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿಗೆ ಸರ್ಕಾರ 50% ರಿಯಾಯಿತಿ ನೀಡಿ ಆದೇಶ ಹೊರಡಿಸಿತ್ತು. ಇದೀಗ ಈ ನಿಯಮಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಹಾಗೆಯೇ ಮೈಸೂರಿನಲ್ಲಿ ಈ ನಿಯಮಕ್ಕೆ ಯಾವ ರೀತಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಅನ್ನುವುದನ್ನು ನೋಡೋಣ ಬನ್ನಿ.
ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಗಳು ಬಾಕಿ ದಂಡ ಪಾವತಿಗೆ ಶೇಕಡ 50ರಷ್ಟು ರಿಯಾಯಿತಿ ಘೋಷಿಸಿತ್ತು. ಇದರ ಬೆನ್ನಲ್ಲೆ ಮೈಸೂರಿನಲ್ಲಿ ಈ ನಿಯಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಯಾಯಿತಿ ಘೋಷಿಸಿದ ಕೇವಲ ಎರಡೇ ದಿನಗಳಲ್ಲಿ ಮೈಸೂರು ನಗರದಲ್ಲಿ 46.56 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದ್ದು, 21,842 ಪ್ರಕರಣಗಳು ಇತ್ಯರ್ಥಗೊಂಡಿವೆ. ದಂಡ ಪಾವತಿಯಲ್ಲಿ ಶೇಕಡಾ 50ರಷ್ಟು ರಿಯಾಯಿತಿಯ ಸದ್ಭಳಕೆ ಮಾಡಿಕೊಳ್ಳುತ್ತಿರುವ ವಾಹನ ಸವಾರರು, ದಂಡ ಪಾವತಿಸುವ ಮೂಲಕ ತಮ್ಮ ವಾಹನಗಳ ಮೇಲಿದ್ದ 22,362 ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದಾರೆ.
ದಂಡ ಸಂಗ್ರಹದ ವಿವರ
"28,59,744 ಪ್ರಕರಣಗಳಿಂದ ಬಾಕಿ ಇರುವ 143.48 ಕೋಟಿ ರೂಪಾಯಿ ದಂಡದಲ್ಲಿ ಶೇಕಡಾ 50ರಷ್ಟು ಅಂದರೆ 71.74 ಕೋಟಿ ರೂಪಾಯಿ ವಸೂಲಿ ಆಗಬೇಕಿದೆ. ಮೈಸೂರು ನಗರದ ವಾಹನ ಸವಾರರು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು," ಎಂದು ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ ತಿಳಿಸಿದರು.

ದಂಡ ಪಾವತಿಗೆ ರಿಯಾಯಿತಿ
ಕಳೆದ ಐದು ವರ್ಷಗಳಿಂದ ಮೈಸೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದನ್ನು ನಿಯಂತ್ರಿಸಲು ಹರ ಸಾಹಸ ಪಡುತ್ತಿರುವ ಮೈಸೂರು ನಗರ ಸಂಚಾರ ಪೊಲೀಸರಿಗೆ ದಂಡ ಪಾವತಿಗೆ ಶೇಕಡಾ 50ರಷ್ಟು ಡಿಸ್ಕೌಂಟ್ ಆರ್ ವರದಾನವಾಗಿದೆ. 44 ಬಗೆಯ ಎಲ್ಲಾ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ರಿಯಾಯಿತಿ ಇದೆ. ಹಾಗಾಗಿ ಎರಡು ದಿನಗಳಿಂದ ವಾಹನ ಸವಾರರು ತಮ್ಮ ವಾಹನಗಳ ಮೇಲೆ ದಾಖಲಾಗಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೇ ಖುದ್ದು ಶಾಸಕ ನಾಗೇಂದ್ರ ಅವರೇ ತಮ್ಮ ಖಾಸಗಿ ವಾಹನದ ದಂಡ ಪಾವತಿ ಮಾಡಿರುವುದು ಕೆಲವರಿಗೆ ಪ್ರೇರಣೆಯಾಗಿದೆ. ಆಗಿನಿಂದ ಜನರು ದಂಡ ಪಾವತಿಗೆ ಬರುತ್ತಲೇ ಇದ್ದಾರೆ. ಮೈಸೂರಿನಲ್ಲಿ ದಂಡ ವಸೂಲಿ ಸಂಬಂಧ 143.48 ಕೋಟಿ ರೂಪಾಯಿ ಆದಾಯ ಬರಬೇಕಿದೆ. ಒಟು 28,59,744 ಪ್ರಕರಣಗಳು ಬಾಕಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಗರದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳು, ವಾಹನ ತಪಾಸಣೆ ಮಾಡುವ ಪೊಲೀಸರ ಬಳಿ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ದಂಡವನ್ನು ಪಾವತಿ ಮಾಡಿದ್ದಾರೆ.












Click it and Unblock the Notifications