ಫೇಸ್ಬುಕ್ ನಲ್ಲಿ ಅವಹೇಳನಕಾರಿ ಚಿತ್ರ: ಸಿಕ್ಕಿಬಿದ್ದ ಹುಣಸೂರಿನ ಯುವಕ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಹುಣಸೂರು, ಫೆಬ್ರವರಿ 2: ಫೇಸ್ ಬುಕ್ಕಿನಲ್ಲಿ ಅನ್ಯಧರ್ಮದ ಬಗ್ಗೆ ಅವಹೇಳನಾಕಾರಿಯಾಗಿ ಚಿತ್ರ ಬಿತ್ತರಿಸಿದ ಆರೋಪದ ಮೇಲೆ ಹುಣಸೂರಿನ ಯುವಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹುಣಸೂರಿನ ಮಾರಿಗಡಿ ಬೀದಿಯ ಆಕಾಶ್ ಪವಾರ್ ಬಂಧಿತ ಆರೋಪಿ. ಮಂಗಳವಾರ ಈತ ತನ್ನ ಫೇಸ್ ಬುಕ್ ನಲ್ಲಿ ಅನ್ಯಧರ್ಮ ಕುರಿತು ಚಿತ್ರವೊಂದನ್ನು ಪ್ರಕಟಿಸಿದ್ದ ಅದು ವೈರಲ್ ಆಗಿತ್ತು. ಇದನ್ನು ವೀಕ್ಷಿಸಿದ ಆ ಧರ್ಮದವರು ಬುಧವಾರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆತ ಫೇಸ್ ಬುಕ್ಕಿನ ಗೋಡೆಯ ಮೇಲೆ ಈ ಚಿತ್ರ ಚಿತ್ತಿರಿಸಿರುವುದಾಗಿ ತಿಳಿಸಿದ್ದಾನೆ. ಆರೋಪಿ ವಿರುದ್ದ ಐಟಿ ಕಾಯ್ದೆಯಡಿ ದೂರು ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಎಎಸ್ ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

The police arrested youth: posting an obscene photo on facebook

ಇನ್ನು ಸ್ಥಳಕ್ಕೆ ಎಸ್ ಪಿ ರವಿ. ಡಿ. ಚನ್ನಣ್ಣನವರ್ . ಎಎಸ್ ಪಿ ಕಲಾಕೃಷ್ಣ ಆರೋಪಿಯನ್ನು ವಿಚಾರಣೆಗೊಳಪಡಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಮಾರಿಗುಡಿ ಬೀದಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸಪ್ ಗಳಲ್ಲಿ ಧರ್ಮ ಅವಹೇಳನಾಕಾರಿ ಘೋಷಣೆ, ಚಿತ್ರ, ಧಾರ್ಮಿಕ ನಿಂಧನೆ, ಸಾರ್ವಜನಿಕರಿಗೆ ತೊಂದರೆಯಾಗುವಂತಹ ಕೃತ್ಯವೆಸಗುವುದ ಅಪರಾಧವಾಗಿದ್ದರೂ. ಮತಾಂಧತೆ, ಮೌಢ್ಯದಿಂದ ಮತ್ತೆ ಮತ್ತೆ ಕೃತ್ಯ ವೆಸಗಿ ಯುವಕರು ಸೆರೆಯಾಗುತ್ತಿರುವುದ ಶೋಚನೀಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The hunasur police arrested a 28-year-old youth on wednesday for allegedly posting an obscene photo of different religion on social media. According to ASP Harish Pande, Akash Pawar had uploaded a photo on Facebook of the different religion obscene.
Please Wait while comments are loading...