ಮಹಾರಾಷ್ಟ್ರ; ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆ ಆರೋಪಿ ಬಂಧನ

ಮುಂಬೈ, ಮೇ 25 : ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಕರ್ನಾಟಕ ಮೂಲದ ಸ್ವಾಮೀಜಿಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ತೆಲಂಗಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿ ಮೃತದೇಹವನ್ನು ಕಾರಿನಲ್ಲಿ ಸಾಗಣೆ ಮಾಡಲು ಆರೋಪಿ ಪ್ರಯತ್ನ ನಡೆಸಿದ್ದು ತನಿಖೆ ವೇಳೆ ಬಹಿರಂಗವಾಗಿದೆ.

Recommended Video

      ನಾವೇನ್ ಪಾಕಿಸ್ಥಾನದವ್ರಾ? ವಿದೇಶದಲ್ಲಿರೋರು ಬರಬಹುದು ನಾವು ಬರೋ ಹಾಗಿಲ್ವಾ? | Mumbai | Karnataka

      ನಾಂದೇಡ್‌ ಜಿಲ್ಲೆಯ ಉಮ್ರಿಯಲ್ಲಿರುವ ಆಶ್ರಮದಲ್ಲಿ ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ (33), ಅವರ ಸೇವಕ ಭಗವಾನ್ ಶಿಂಧೆ (55) ಎಂಬುವವರನ್ನು ಶನಿವಾರ ರಾತ್ರಿ ಹತ್ಯೆ ಮಾಡಲಾಗಿತ್ತು.

      ಹತ್ಯೆ ಆರೋಪಿ ಸಾಯಿನಾಥ್ ಲಿಂಗಾಡೆಯನ್ನು ತೆಲಂಗಾಣ ಗಡಿಯಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಲ್ಯಾಪ್ ಟಾಪ್ ಮತ್ತು 70 ಸಾವಿರ ಹಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಹಲವು ಕೊಲೆಯತ್ನ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಸಹ ದಾಖಲಾಗಿದ್ದವು.4

      Swamiji Killed In Maharashtra Accused Arrested

      ಶನಿವಾರ ರಾತ್ರಿ ಆಶ್ರಮದ ಬಳಿಯ ಶಾಲೆಯಲ್ಲಿ ಸಾಯಿನಾಥ್ ಲಿಂಗಾಡೆ ಸ್ವಾಮೀಜಿಯ ಸೇವಕ ಭಗವಾನ್ ಶಿಂಧೆ ಭೇಟಿಯಾಗಿದ್ದ. ಅಲ್ಲಿ ಆತನನ್ನು ಹತ್ಯೆ ಮಾಡಿ ಶವವನ್ನು ಆಶ್ರಮದ ಶೌಚಾಲಯದೊಳಗೆ ಎಸೆದು ಆಶ್ರಮಕ್ಕೆ ಬಂದಿದ್ದ.

      ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಹತ್ಯೆ ಮಾಡಿ ಲ್ಯಾಪ್ ಟಾಪ್ ಮತ್ತು 70 ಸಾವಿರ ಹಣ ದೋಚಿದ್ದ. ಕಾರಿನಲ್ಲಿ ಸ್ವಾಮೀಜಿ ಶವವನ್ನು ಹಾಕಿಕೊಂಡು ಹೊರಟಾಗ ಆಶ್ರಮದ ಗೇಟ್ ಬಳಿ ಅಪಘಾತವಾಗಿತ್ತು. ಆದ್ದರಿಂದ, ಕಾರು ಅಲ್ಲಿಯೇ ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದ.

      ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಕರ್ನಾಟಕದ ಬಳ್ಳಾರಿ ಮೂಲದವರು. ಆಶ್ರಮಕ್ಕೆ ಕದಿಯಲು ಬಂದ ಸಾಯಿನಾಥ್ ಲಿಂಗಾಡೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+