ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದೇಶ್ ಶ್ರೀವಾಸ್ತವ ನಿಧನಕ್ಕೆ ಮೊಸಳೆ ಕಣ್ಣೀರು ಸುರಿಸಬೇಡಿ ಪ್ಲೀಸ್

By Mahesh
|
Google Oneindia Kannada News

ಮುಂಬೈ, ಸೆ. 05: ಪ್ರತಿಭಾವಂತ ಗಾಯಕ, ಸಂಗೀತಗಾರ ಆದೇಶ್ ಶ್ರೀವಾಸ್ತವ ಅವರು ಕ್ಯಾನ್ಸರಿಗೆ ಬಲಿಯಾಗಿದ್ದಾರೆ. 49 ವರ್ಷ ವಯಸ್ಸಿನ ಆದೇಶ್ ಅವರ ಸಾವಿನ ಬಗ್ಗೆ ಮೊಸಳೆ ಕಣ್ಣೀರಿಡುತ್ತಿರುವವರ ಬಗ್ಗೆ ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

ಕ್ಯಾನ್ಸರ್ ಗೆ ತುತ್ತಾಗಿದ್ದ ಆದೇಶ್ ಅವರು ಮುಂಬೈನ ಕೋಕಿಲಬೇನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ನರಳುತ್ತಿದ್ದಾಗ ಸಾಂತ್ವನ ಹೇಳಲು ಬರದಿದ್ದ ಜನ ಈಗ ಟ್ವೀಟ್ ಮಾಡುತ್ತಿದ್ದಾರೆ ಎಂದು ಆದೇಶ್ ಅವರ ಫ್ಯಾನ್ಸ್ ಖಂಡಿಸಿದ್ದಾರೆ.

2010ರಿಂದಲೂ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಆದೇಶ್ ಅವರಿಗೆ 2015ರಲ್ಲಿ ಮತ್ತೊಮ್ಮೆ ಕ್ಯಾನ್ಸರ್ ಆವರಿಸಿಕೊಂಡಿತ್ತು. ಇತ್ತೀಚೆಗೆ ರೋಗ ಉಲ್ಬಣಗೊಂಡಿದ್ದರಿಂದ ಕೀಮೋಥೆರಪಿಯನ್ನು ವೈದ್ಯರು ನಿಲ್ಲಿಸಿದ್ದರು. ಸೆ.2ರಂದೇ ವೈದ್ಯರು ಕೈಚೆಲ್ಲಿದ್ದರು ಎಂದು ಆದೇಶ್ ಅವರ ಪತ್ನಿ ವಿಜಯತಾ ಪಂಡಿತ್ ನೊಂದು ನುಡಿದಿದ್ದಾರೆ.

ಆದೇಶ್ ಅವರು ಚಿಕಿತ್ಸೆಗಾಗಿ ನಾವು ಅಮೆರಿಕಕ್ಕೆ ತೆರಳಿ ಹಿಂತಿರುಗಿದ್ದರು. ಅದರೆ, ಆದೇಶ್ ಮೂಗಿನಿಂದ ರಕ್ತ ಸೋರಲು ಆರಂಭಿಸಿತು. ತಕ್ಷಣವೇ ಆಸ್ಪತ್ರೆಗೆ ಸೇರಿದೆವು. ಒಂದು ತಿಂಗಳ ನರಳಾಟವನ್ನು ನೋಡಿದರೆ ಕರಳು ಕಿತ್ತು ಬರುವಂತೆ ಇತ್ತು ಎಂದು ಆಪ್ತರು ಹೇಳಿದ್ದಾರೆ. ಆದರೆ, ಆದೇಶ್ ಅವರಿಗೆ ಚಿತ್ರರಂಗದ ನೆರವು ಸಿಕ್ಕಿದ್ದು, ತೀರಾ ತಡವಾಗಿ, ಮಾಧ್ಯಮಗಳಂತೂ ಆದೇಶ್ ಅವರನ್ನು ಮರೆತು ಬಿಟ್ಟಿತ್ತು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂರಾರು ಚಿತ್ರಕ್ಕೆ ಸಂಗೀತ ನೀಡಿರುವ ಆದೇಶ್

ನೂರಾರು ಚಿತ್ರಕ್ಕೆ ಸಂಗೀತ ನೀಡಿರುವ ಆದೇಶ್

ನೂರಾರು ಚಿತ್ರಕ್ಕೆ ಸಂಗೀತ ನೀಡಿರುವ ಆದೇಶ್ ಅವರು ಜಭಲ್ ಪುರ್ ಮೂಲದವರು. ಮೊದಲ ಸಂಯೋಜನೆಯನ್ನು ಮೇರು ಗಾಯಕಿ ಲತಾ ಮಂಗೇಷ್ಕರ್ ಅವರು ಹಾಡಿದ್ದು ವಿಶೇಷ. 2010ರ ರಾಜ್ ನೀತಿ, ರೆಹನಾ ಹೇ ತೇರೆ ದಿಲ್ ಮೇ, ಚಲ್ತೆ ಚಲ್ತೆ ಸಂಗೀತ ಹಾಗೂ ಬಾರ್ಡರ್ ಚಿತ್ರದ ಹಿನ್ನೆಲೆ ಸಂಗೀತಗಾರರಾಗಿ ಜನಪ್ರಿಯತೆ ಗಳಿಸಿದ್ದರು.

ಇದ್ದಾಗ ನೆರವಾಗದ ಮಂದಿ, ಸತ್ತಾಗ ಅಳುತ್ತಿದ್ದಾರೆ

ಇದ್ದಾಗ ನೆರವಾಗದ ಮಂದಿ, ಸತ್ತಾಗ ಅಳುತ್ತಿದ್ದಾರೆ, ಸಂತಾಪ ಸಂದೇಶ ಇಟ್ಟುಕೊಂಡು ಏನು ಮಾಡೋಣ.

ಚಿಕಿತ್ಸೆಗಾಗಿ ದುಬಾರಿ ಕಾರು ಮಾರಿದ್ದ ಆದೇಶ್

ಕ್ಯಾನ್ಸರ್ ಚಿಕಿತ್ಸೆಗಾಗಿ ಹಮ್ಮರ್ ಕಾರು ಮಾರಿದ್ದ ಆದೇಶ್ ಗೆ ಜೀವಿಸುವ ಆಸೆ ಹೆಚ್ಚಾಗಿತ್ತು.

ಮಾಧ್ಯಮಗಳಿಗೆ ಈ ಸುದ್ದಿ ಬೇಡವಾಯಿತೆ

ಮಾಧ್ಯಮಗಳಿಗೆ ಈ ಸುದ್ದಿ ಬೇಡವಾಯಿತೆ, ಆದೇಶ್ ಅವರ ಮಕ್ಕಳ ಮುಖ ನೋಡಿಯಾದರೂ ಸುದ್ದಿ ಮಾಡಬಹುದಾಗಿತ್ತು.

ಆದೇಶ್ ಅವರ ಸಂಗೀತ ಸದಾ ಸ್ಮರಣೀಯ

ಆದೇಶ್ ಅವರ ಸಂಗೀತ ಸದಾ ಸ್ಮರಣೀಯ, ಮೋರಾ ಪಿಯಾ.. ಸುನೋ ನಾ ಸುನೋ ನಾ ನನ್ನ ನೆಚ್ಚಿನ ಹಾಡು

English summary
Singer and music composer Aadesh Shrivastava who was battling a relapsed cancer, passed away on Friday at age of 49 at Kokilaben Dhirubhai Ambani hospital in Mumbai. Here are the twitter reactions from his fans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X