Get Updates
Get notified of breaking news, exclusive insights, and must-see stories!

ಶಿವಸೇನಾದೊಳಗೆ ಬಂಡಾಯ, ಇದು ನಾಲ್ಕನೇ ಬಾರಿ

ಮುಂಬೈ, ಜೂನ್ 22: ಬಾಳಾ ಠಾಕ್ರೆ ಗರಡಿಯಲ್ಲಿ ರೂಪುಗೊಂಡ ಶಿವಸೇನಾ ಪಕ್ಷದಲ್ಲಿ ಬಂಡಾಯ ಸಾಧ್ಯವಾ ಎಂದನಿಸಬಹುದು. ಆದರೂ ಆ ಪರಿಸ್ಥಿತಿ ಉದ್ಭವಿಸಿದೆ. ಏಕನಾಥ್ ಶಿಂದೆ ಶಿವಸೇನೆಯೊಳಗೆ ದೊಡ್ಡ ಬಂಡಾಯದ ಬಾವುಟವನ್ನೇ ಹಾರಿಸಿದ್ದಾರೆ. ಮಹಾ ವಿಕಾಸ್ ಆಘಾಡಿ ಮೈತ್ರಿ ಸರಕಾರವನ್ನು ಉರುಳಿಸುವ ಸ್ಥಿತಿಯಲ್ಲಿದ್ಧಾರೆ. ತಮ್ಮ ಜೊತೆ ಹಲವು ಶಾಸಕರನ್ನು ಕರೆದುಕೊಂಡು ಹೋಗಿರುವ ಏಕನಾಥ್ ಶಿಂದೆ ಶಿವಸೇನೆಯಿಂದ ಸಿಡಿದು ಬಿಜೆಪಿಗೆ ಬೆಂಬಲ ಕೊಡುವ ಸನ್ನಾಹದಲ್ಲಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ 55 ಶಾಸಕರನ್ನು ಹೊಂದಿದೆ. ಏಕನಾಥ್ ಶಿಂದೆ ಬಳಿ 27 ಶಾಸಕರು ಇದ್ದಾರೆನ್ನಲಾಗಿದೆ. ಆದರೆ ತನ್ನ ಬಳಿ 46 ಶಾಸಕರು ಇದ್ದಾರೆ ಎಂದು ಶಿಂದೆ ಹೇಳಿಕೊಂಡಿದ್ಧಾರೆ.

ಪಕ್ಷಾಂತರ ನಿಷೇಧ ಕಾನೂನಿನ ಪ್ರಕಾರ ಪಕ್ಷಾಂತರಗೊಂಡ ಶಾಸಕರು ಅನರ್ಹ ಶಾಸಕರಾಗುತ್ತಾರೆ. ಆದರೆ, ಒಂದು ಪಕ್ಷದಿಂದ ಮೂರನೇ ಎರಡರಷ್ಟು ಸಂಖ್ಯೆಯ ಶಾಸಕರು ಒಟ್ಟಾಗಿ ಪಕ್ಷಾಂತರವಾದರೆ ಈ ಕಾನೂನು ಅನ್ವಯವಾಗುವುದಿಲ್ಲ. ಈಗ ಶಿವಸೇನೆಯಿಂದ 37 ಶಾಸಕರು ಹೊರಬಂದರೆ ಅನರ್ಹತೆಯ ಭೀತಿ ಇರುವುದಿಲ್ಲ. ಏಕನಾಥ್ ಶಿಂದೆ ತಮ್ಮ ಬಳಿ ಶಿವಸೇನೆಯ 40ಕ್ಕೂ ಹೆಚ್ಚು ಶಾಸಕರಿದ್ಧಾರೆ ಎಂದು ಹೇಳಿಕೊಂಡಿದ್ದಾರೆ.

ಶಿವಸೇನಾ ಬಂಡಾಯದ ಕಾರಣಕ್ಕೆ ಅಧಿಕಾರ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದು ಇದೇ ಮೊದಲು. ಆದರೆ, ಬಂಡಾಯದ ಬಾವುಟ ಶಿವಸೇನಾಗೆ ಹೊಸದಲ್ಲ. ಹಿಂದೆ ಮೂರು ಬಾರಿ ಇಂಥ ಘಟನೆಗಳನ್ನು ಶಿವಸೇನಾ ಕಂಡಿದ್ದಿದೆ.

 ಛಗನ್ ಭುಜಬಲ್- 1991

ಛಗನ್ ಭುಜಬಲ್- 1991

1956ರಲ್ಲಿ ಆರಂಭವಾದ ಶಿವಸೇನಾಗೆ ಮೊದಲ ಪ್ರಮುಖ ಬಂಡಾಯ ಎದುರಾಗಿದ್ದು 1991ರಲ್ಲಿ ಛಗನ್ ಭುಜಬಲ್ ಅವರಿಂದ. ಕಟ್ಟರ್ ಬಲಪಂಥೀಯ ಪಕ್ಷವಾಗಿದ್ದ ಶಿವಸೇನಾಗೆ ಆಗ ಛಗನ್ ಭುಜಬಲ್ ಒಬಿಸಿ ಸಮುದಾಯಗಳ ಮುಖವಾಗಿದ್ದರು. ಗ್ರಾಮೀಣ ಭಾಗದಲ್ಲಿ ಶಿವಸೇನಾ ಬೇರು ಬಿಡಲು ಭುಜಬಲ್ ಶ್ರಮ ಬಹಳ ಇತ್ತು.

ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಸಾಕಷ್ಟು ಸ್ಥಾನ ಗೆಲ್ಲಲು ಭುಜಬಲ್ ಕಾರಣರಾಗಿದ್ದರು. ಆದರೂ 1991ರಲ್ಲಿ ವಿಪಕ್ಷ ನಾಯಕ ಸ್ಥಾನವನ್ನು ಮನೋಹರ್ ಜೋಷಿಗೆ ಕೊಟ್ಟಿದ್ದು ಛಗನ್ ಬುಜಬಲ್‌ಗೆ ಬೇಸರ ಮೂಡಿಸಿತ್ತು. ಆಗ ಭುಜಬಲ್ ಬಂಡಾಯ ಎದ್ದರು. ತಮ್ಮ ಜೊತೆ ಶಿವಸೇನೆಯ 18 ಶಾಸಕರನ್ನು ಕರೆದುಕೊಂಡು ಪಕ್ಷ ತೊರೆದರು. ಆದರೆ, ಅದೇ ದಿನ 12 ಬಂಡಾಯ ಶಾಸಕರು ವಾಪಸ್ ಪಕ್ಷಕ್ಕೆ ಬಂದರು.

ಛಗನ್ ಭುಜಬಲ್ ಆಗ ಕಾಂಗ್ರೆಸ್ ಪಕ್ಷ ಸೇರಿ ನಂತರ ಎನ್‌ಸಿಪಿ ಪಾಳಯಕ್ಕೆ ಪ್ರವೇಶಿಸಿದರು. ಕುತೂಹಲವೆಂದರೆ ಭುಜಬಲ್ ಸದ್ಯ ಶಿವಸೇನಾ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದಾರೆ.

 ನಾರಾಯಣ ರಾಣೆ- 2005

ನಾರಾಯಣ ರಾಣೆ- 2005

ಭುಜಬಲ್ ಬಂಡಾಯ ಎದ್ದು ಹೊರಹೋದ 14 ವರ್ಷಗಳ ಬಳಿಕ ಶಿವಸೇನಾಗೆ ಮತ್ತೊಮ್ಮೆ ರೆಬೆಲ್ ಬಿಸಿ ತಾಕಿತು. ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ 2005ರಲ್ಲಿ ಶಿವಸೇನಾ ತೊರೆದು ಕಾಂಗ್ರೆಸ್ ಸೇರಿದರು.
ನಾರಾಯಣ ರಾಣೆ ನಂತರ ಕಾಂಗ್ರೆಸ್ಸನ್ನೂ ತೊರೆದು ಬಿಜೆಪಿ ಸೇರಿದರು. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಅವರು ಈಗ ಕೇಂದ್ರ ಸಚಿವರಾಗಿದ್ದಾರೆ.

 ರಾಜ್ ಠಾಕ್ರೆ- 2006

ರಾಜ್ ಠಾಕ್ರೆ- 2006

ದಾಯಾದಿ ಕಲಹ ಶಿವಸೇನಾಗೆ ಮತ್ತೆ ಮೂರನೇ ಬಾರಿ ಬಂಡಾಯದ ಬಿಸಿ ತಾಗಿಸಿತು. 2006ರಲ್ಲಿ ಉದ್ಧವ್ ಠಾಕ್ರೆಯ ಚಿಕ್ಕಪ್ಪನ ಮಗ ರಾಜ್ ಠಾಕ್ರೆ ಬಂಡಾಯ ಎದ್ದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷ ಸ್ಥಾಪಿಸಿದರು.

ತಾನು ಶಿವಸೇನಾ ನಾಯಕತ್ವ ವಿರುದ್ಧ ಎದ್ದ ಬಂಡಾಯವಲ್ಲ. ಆದರೆ, ನಾಯಕತ್ವದ ಸುತ್ತ ತುಂಬಿರುವ ಇತರರು ಬೇರೆಯವರಿಗೆ ಬೆಳೆಯಲು ಬಿಡುತ್ತಿಲ್ಲ. ಆದ್ದರಿಂದ ಪಕ್ಷದಿಂದ ಹೊರಬಂದೆ ಎಂದು ರಾಜ್ ಠಾಕ್ರೆ ಹೇಳಿದರು.

2009ರಲ್ಲಿ ನಡೆದ ಚುನಾವಣೆಯಲ್ಲಿ ಮುಂಬೈನಲ್ಲಿ ಶಿವಸೇನಾಗಿಂತ ಎಂಎನ್‌ಎಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದಿತು. ನಂತರದ ದಿನಗಳಲ್ಲಿ ಎಂಎನ್‌ಎಸ್ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ವಿಫಲವಾಗಿದೆ.

 ಈಗಿನ ಪರಿಸ್ಥಿತಿ

ಈಗಿನ ಪರಿಸ್ಥಿತಿ

ಮೇಲೆ ಹೇಳಿದ ಮೂರು ಬಂಡಾಯ ಪ್ರಸಂಗವೆಲ್ಲವೂ ಬಾಳಾ ಠಾಕ್ರೆ ಬದುಕಿದ್ದಾಗಲೇ ನಡೆದದ್ದು ಗಮನಾರ್ಹ. 2012ರಲ್ಲಿ ಠಾಕ್ರೆ ನಿಧನ ಹೊಂದಿದ ಬಳಿಕ ಮಹಾರಾಷ್ಟ್ರದಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗುತ್ತಾ ಹೋಗಿದೆ. ಕಳೆದ ವಿಧಾನಸಭೆ ಚುನಾವಣೆಯ ವೇಳೆ ಶಿವಸೇನಾಗೆ ಹೆಚ್ಚಿನ ಸ್ಥಾನ ಬಿಟ್ಟುಕೊಡಲು ಬಿಜೆಪಿ ನಿರಾಕರಿಸಿತು. ಇಲ್ಲಿಂದ ಈ ಎರಡು ಆಪ್ತಮಿತ್ರರ ನಡುವೆ ಒಡಕು ಆಗಿ ಕೊನೆಗೆ ಚುನಾವಣೆ ಬಳಿಕ ಶಿವಸೇನಾ ಪಕ್ಷ ತನ್ನ ಸಾಂಪ್ರದಾಯಿಕ ರಾಜಕೀಯ ವೈರಿಗಳೆನಿಸಿದ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸವ ಮಟ್ಟಕ್ಕೆ ಹೋಯಿತು.

ಅಲ್ಲದೇ, ಕಟ್ಟರ್ ಹಿಂದುತ್ವವಾದಿ ಪಕ್ಷವಾಗಿದ್ದ ಶಿವಸೇನಾ ತನ್ನ ಧೋರಣೆಯನ್ನು ಸಂಪೂರ್ಣವಾಗಿ ಬದಲಿಸಿಕೊಂಡು ಕಾಂಗ್ರೆಸ್-ಎನ್‌ಸಿಪಿ ಮಾದರಿಯ ಜಾತ್ಯತೀತ ನೀತಿ ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಏಕನಾಥ್ ಶಿಂದೆ ಬಂಡಾಯ ಎದ್ದಿದ್ದಾರೆ. ಶಿವಸೇನೆ ಹಿಂದುತ್ವದ ಹಾದಿ ಬಿಟ್ಟುಹೋಗಿದ್ದಕ್ಕೆ ಶಿಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎನ್‌ಸಿಪಿ-ಕಾಂಗ್ರೆಸ್ ಸಖ್ಯ ತೊರೆದು ಬಿಜೆಪಿಗೆ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳಬೇಕೆಂಬುದು ಏಕನಾಥ್ ಶಿಂದೆಯ ಪ್ರಮುಖ ಬೇಡಿಕೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+