ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಸ್ಪರ್ಧಿಸಲ್ಲ, ಯಾರ ಪರ ಪ್ರಚಾರವೂ ಇಲ್ಲ: ಸಲ್ಮಾನ್

|
Google Oneindia Kannada News

ಮುಂಬೈ, ಮಾರ್ಚ್ 21: ಬಾಲಿವುಡ್ ನ ಜನಪ್ರಿಯ ತಾರೆ ಸಲ್ಮಾನ್ ಖಾನ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಸಲ್ಮಾನ್ ಖಾನ್ ಅವರು ಈ ಸುದ್ದಿಯನ್ನು ಅಲ್ಲಗೆಳೆದಿದ್ದು, 'ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಹಾಗೂ ಯಾರ ಪಕ್ಷದ ಪರ ಕೂಡಾ ಪ್ರಚಾರ ನಡೆಸುವುದಿಲ್ಲ ಎಂದು ಗುರುವಾರದಂದು ಸ್ಪಷ್ಟಪಡಿಸಿದ್ದಾರೆ.

ಸಲ್ಮಾನ್ ಖಾನ್ ಅವರು ತಮ್ಮ ಆಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸುದ್ದಿ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ, ನಾನು ಎಲೆಕ್ಷನ್ ನಲ್ಲಿ ಸ್ಪರ್ಧಿಸುತ್ತಿಲ್ಲ ಹಾಗೂ ರಾಜಕೀಯ ಪಕ್ಷದ ಪರ ಪ್ರಚಾರ ಮಾಡಲ್ಲ' ಎಂದಿದ್ದಾರೆ.

Not contesting elections nor campaigning for any political party: Salman Khan

ಸಲ್ಮಾನ್ ತಂದೆಯಿಂದ ಮೋದಿ ಉರ್ದು ವೆಬ್ಸೈಟಿಗೆ ಚಾಲನೆ ಸಲ್ಮಾನ್ ತಂದೆಯಿಂದ ಮೋದಿ ಉರ್ದು ವೆಬ್ಸೈಟಿಗೆ ಚಾಲನೆ

ಪಿಟಿಐ ವರದಿಗಳ ಪ್ರಕಾರ, ಮಧ್ಯಪ್ರದೇಶ ಕಾಂಗ್ರೆಸ್ ನಿಂದ ಸಲ್ಮಾನ್ ಖಾನ್ ಗೆ ಆಫರ್ ಬಂದಿತ್ತು. ಇಂದೋರ್ ನಲ್ಲಿ ಸಲ್ಮಾನ್ ಅವರು ಪಂಕಜ್ ಚತುರ್ವೇದಿ ಪರ ಪ್ರಚಾರ ಮಾಡಲು ಬರುತ್ತಿದ್ದಾರೆ ಎಂದು ಪಂಕಜ್ ಅವರ ವಕ್ತಾರರು ಹೇಳಿದ್ದರು.

ಮತದಾನದ ಅರಿವು ಮೂಡಿಸುವಂತೆ ಸಿನಿತಾರೆಯರಿಗೆ ಪ್ರಧಾನಿ ಮೋದಿ ಕರೆ

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಮತದಾನ ಕುರಿತಂತೆ ಟ್ವೀಟ್ ಮಾಡಿ ಸಲ್ಮಾನ್ ಖಾನ್ ಅವರ ಖಾತೆಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಎಲ್ಲರ ಹಕ್ಕು, ಅರ್ಹರಾದ ಎಲ್ಲಾ ಭಾರತೀಯರು ನಿಮ್ಮ ಹಕ್ಕನ್ನು ಚಲಾಯಿಸಿ, ಸರ್ಕಾರ ಆಯ್ಕೆ ಮಾಡಿ' ಎಂದಿದ್ದಾರೆ. ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು 2014ರಲ್ಲಿ ಮೋದಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿ ಉರ್ದು ವೆಬ್ ಸೈಟಿಗೆ ಚಾಲನೆ ನೀಡಿದ್ದರು. ನನ್ನ ಮೂಲಕ ಅಂತರ್ಜಾಲಕ್ಕೆ ಚಾಲನೆ ನೀಡಿ, ಮುಸ್ಲಿಂರನ್ನು ಓಲೈಸುವ ಉದ್ದೇಶ ಬಿಜೆಪಿಯವರಿಗೆ ಇಲ್ಲ ಎಂದು ಖುದ್ದು ಸಲೀಂ ಖಾನ್ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದರು.

English summary
Bollywood actor Salman Khan on Thursday dismissed reports of him contesting Lok Sabha election 2019. He said he wouldn't even campaign for any political party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X