ನೌಕಾಪಡೆಗೆ ಬಲ ತಂದ ಯುದ್ಧನೌಕೆ ಐಎನ್‌ಎಸ್ ಕೊಚ್ಚಿ
ಮುಂಬೈ, ಸೆ.30: ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ವಿುಸಲಾಗಿರುವ ಯುದ್ಧನೌಕೆ ಐಎನ್‌ಎಸ್ ಕೊಚ್ಚಿ ಬುಧವಾರ ನೌಕಾಪಡೆಗೆ ಸೇರ್ಪಡೆಗೊಂಡಿದೆ. ಗುಪ್ತ ನಿರ್ದೇಶಿತ ಕ್ಷಿಪಣಿ ನಾಶಕ, ನೌಕಾದಳದ ಯುದ್ಧ ಹಡಗು ಐಎಎನ್ಎಸ್ ಕೊಚ್ಚಿಯನ್ನು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಸೆ.30ರಂದು ಮುಂಬೈಯ ಶಿಪ್ ಯಾರ್ಡ್ ನಲ್ಲಿ ನೌಕಪಡೆಗೆ ಸೇರಿಸಿದ್ದಾರೆ.
ಐಎನ್‌ಎಸ್ ಕೊಚ್ಚಿ, ಕೋಲ್ಕತಾ-ದರ್ಜೆಯ (ಯೋಜನೆ-15ಎ) ನಿರ್ದೇಶಿತ ಕ್ಷಿಪಣಿ ನಾಶಕಗಳ ಎರಡನೆಯ ಹಡಗಾಗಿದೆ. ಮೊದಲ ಯುದ್ಧನೌಕೆ ಐಎನ್ಎಸ್ ಕೋಲ್ಕತವನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಲೋಕಾರ್ಪಣೆ ಮಾಡಿದ್ದರು. ಐಎನ್ಎಸ್ ಚೆನ್ನೈ ಎಂಬ ಮತ್ತೊಂದು ಯುದ್ಧನೌಕೆ 2016ರಲ್ಲಿ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ. ['ಐಎನ್ಎಸ್ ಕೋಲ್ಕತ್ತಾ ಜೊತೆ ಮೋದಿ' ಚಿತ್ರಗಳು]

ದೆಹಲಿ ಕ್ಲಾಸ್ ಯುದ್ಧನೌಕೆಗೆ ಹೋಲಿಸಿದರೆ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿರುವ ಯುದ್ಧ ನೌಕೆ ಐಎನ್ ಎಸ್ ಕೊಚ್ಚಿ ಅತ್ಯಾಧುನಿಕ ಶಾಸ್ತ್ರಾಸ್ತ್ರಗಳು, ಸೆನ್ಸಾರ್ ಗಳನ್ನು ಹೊಂದಿದೆ. ಸ್ವದೇಶಿ ನಿರ್ವಿುತ ಖಂಡಾಂತರ ಕ್ಷಿಪಣಿ ಬ್ರಹ್ಮೋಸ್, 76ಎಂಎಂ ಸೂಪರ್ ರ್ಯಾಪಿಡ್ ಗನ್ ಮೌಂಟ್, ಎ.ಕೆ. 630, ಕ್ಲೋಸ್ ಇನ್ ವೆಪನ್ ಸಿಸ್ಟಮ್ ಬಳಸಬಹುದಾಗಿದೆ. ಸೂಕ್ಷ್ಮ ಸೆನ್ಸರ್, ಸ್ವದೇಶಿ ರಾಕೆಟ್ ಲಾಂಚರ್, ಯುದ್ಧ ವಿಮಾನ, ಹೆಲಿಕಾಪ್ಟರ್ ಗಳ ರನ್ ವೇ ಕೂಡಾ ಇದೆ.
ಆಕಾಶ, ಭೂಮಿ ಹಾಗೂ ಸಮುದ್ರ ಮೂರೂ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವುಳ್ಳ ವಿಶಿಷ್ಟ ಯುದ್ಧ ನೌಕೆ ಇದಾಗಿದೆ. ಸ್ವದೇಶಿ ನಿರ್ಮಿತವಾಗಿದ್ದು, ಇನ್ನೂ 200 ಯುದ್ಧನೌಕೆಗಳು, 600 ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ಗಳನ್ನು ಒದಗಿಸುವಂತೆ ನೌಕಾಪಡೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2027ರ ವೇಳೆಗೆ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಾಣಗೊಂಡ ಯುದ್ಧನೌಕೆಗಳೊಂದಿಗೆ ನೌಕಾಪಡೆ ಸಶಕ್ತಗೊಳ್ಳಲಿದೆ.












Click it and Unblock the Notifications