• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾಗೆ ಬಲಿಯಾದ ಸರ್ಕಾರಿ ಅಧಿಕಾರಿ: 50 ಲಕ್ಷ ಪರಿಹಾರ

|

ಮುಂಬೈ, ಜೂನ್ 10: ಮುಂಬೈ ಮಹಾನಾಗರ ಪಾಲಿಕೆಯ ಉಪ ಆಯುಕ್ತ ಶಿರೀಶ್ ದೀಕ್ಷಿತ್ ಕೊರೊನಾ ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

   June is going to be a menacing month in terms of Corona | Oneindia Kannada

   55 ವರ್ಷದ ಶಿರೀಶ್ ದೀಕ್ಷಿತ್ ನೀರು ಸರಬರಾಜು ವಿಭಾಗದ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

   ಕೊರೊನಾ ಸೋಂಕಿನಿಂದ ದೆಹಲಿ ಪೊಲೀಸ್ ಅಧಿಕಾರಿ ಸಾವು

   ಕೊರೊನಾ ವೈರಸ್ ರೋಗದ ನಡುವೆಯೂ ಶಿರೀಶ್ ದೀಕ್ಷಿತ್ ಕೆಲಸ ಮಾಡುತ್ತಿದ್ದರು. ಅವರಿಗೆ ಸೋಂಕಿನ ಲಕ್ಷಣಗಳು ಇರಲಿಲ್ಲ. ಮಂಗಳವಾರ ಬೆಳಿಗ್ಗೆ ಅವರಿಗೆ ಅನಾರೋಗ್ಯ ಕಾಡಿದೆ. ನಂತರ ಮನೆಯವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಮನೆಯ ಬಳಿ ಹೋಗುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ತಿಳಿದಿದೆ.

   ಕೊವಿಡ್ ಸೋಂಕಿನಿಂದ ಮೃತಪಟ್ಟರೆ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವುದಾಗಿ ಬಿಎಂಸಿ ಘೋಷಿಸಿತ್ತು. ಬಳಿಕ 10 ಲಕ್ಷದಿಂದ 50 ಲಕ್ಷಕ್ಕೆ ಏರಿಕೆಯಾಗಿದೆ. ಈ ಮೂಲಕ ಅಧಿಕಾರಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲಾಗುತ್ತಿದೆ. ಅದರ ಅನ್ವಯ ಈ ನಿಯಮವನ್ನು ಜಾರಿಗೆ ತಂದ ಮೊದಲ ಪುರಸಭೆ ಬಿಎಂಸಿ ಆಗಿದೆ ಎಂದು ಮಾಹಿತಿ ಸಿಕ್ಕಿದೆ.

   ಮಹಾರಾಷ್ಟ್ರದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 90 ಸಾವಿರ ಗಡಿ ದಾಟಿದೆ. ಮುಂಬೈ ನಗರದಲ್ಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಈವರೆಗೂ ಮಹಾರಾಷ್ಟ್ರದಲ್ಲಿ 3289 ಜನರು ಬಲಿಯಾಗಿದ್ದಾರೆ.

   English summary
   BMC's Deputy Municipal Commissioner Shirish Dixit on Tuesday has died of the coronavirus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X