ಪ್ರೇಮ ವೈಫಲ್ಯದಿಂದ ಸಾಯಲು ಹೋದ ಯುವಕನಿಗೆ ಕೊನೆ ಕ್ಷಣದಲ್ಲಿ ಜ್ಞಾನೋದಯ!
ಮಂಗಳೂರು, ಮಾರ್ಚ್ 07: ಪ್ರೇಮ ವೈಫಲ್ಯದಿಂದ ಹತಾಶನಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ. ಆದರೆ ಆತನಿಗೆ ಕೊನೆ ಕ್ಷಣದಲ್ಲಿ ಜ್ಞಾನೋದಯವಾಗಿ ಈಜಾಡಿ ದಡ ಸೇರಿದ ಪ್ರಸಂಗ ಮಂಗಳೂರಿನಲ್ಲಿ ನಿನ್ನೆ ಸಂಜೆ ಬುಧವಾರ (ಮಾ.06) ನಡೆದಿದೆ.
ಸಾವಿನ ಕದ ತಟ್ಟುತ್ತಿರುವಾಗ ಜ್ಞಾನೋದಯಗೊಂಡ ಯುವಕನನ್ನು ನೌಫಲ್ ಎಂದು ಗುರುತಿಸಲಾಗಿದೆ. ಪ್ರೇಮ ವೈಫಲ್ಯದಿಂದ ಮನನೊಂದ ಮಂಜೇಶ್ವರದ ತೂಮಿನಾಡು ನಿವಾಸಿ ನೌಫಲ್ ನಿನ್ನೆ ಸಂಜೆ ನೇತ್ರಾವತಿ ನದಿಗೆ ಹಾರಿದ್ದ.

ಸೇತುವೆ ಮೇಲಿಂದ ನೇತ್ರಾವತಿ ನದಿಗೆ ಹಾರಿದ್ದ ನೌಫಲ್ ನೀರಿನಿಂದ ಮೇಲಕ್ಕೆ ಬಂದ ತಕ್ಷಣ ಈಜಿ ಸೇತುವೆಯ ಪಿಲ್ಲರ್ ಬಳಿಗೆ ತೆರಳಿ ಪಿಲ್ಲರ್ ನ ಸ್ಲ್ಯಾಬ್ ಮೇಲೆ ಕುಳಿತಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನೌಫಲ್ ನನ್ನು ಮೇಲ್ಗಡೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆದರೆ ಪ್ರೇಮ ವೈಫಲ್ಯಗೊಂಡ ಕಾರಣ ಸಾಯಲು ನಿರ್ಧರಿಸಿ ನದಿಗೆ ಹಾರಿದ್ದೆ. ಆದರೆ ಕೊನೆ ಕ್ಷಣದಲ್ಲಿ ಸಾಯಲು ಮನಸ್ಸಾಗಲಿಲ್ಲ. ಬದುಕಿ ತೋರಿಸಬೇಕು ಅಂತ ಅನಿಸಿತು ಎಂದು ಹೇಳಿಕೆ ನೀಡಿದ್ದಾನೆ.












Click it and Unblock the Notifications