India
  • search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ನಮ್ಮ ಸರ್ವ ಸಮ್ಮತಿಯ ನಾಯಕ; ಬಿಜೆಪಿ ರಾಜ್ಯಾಧ್ಯಕ್ಷ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 30; ರಾಜ್ಯ ಬಿಜೆಪಿ ಯಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆಯ ಮುಸುಕಿನ ಗುದ್ದಾಟದಲ್ಲಿ ಮಧ್ಯಪ್ರವೇಶಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಾ ಪ್ರಹಾರ ನಡೆಸಿದರು.

ಭಾನುವಾರ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿಯಲ್ಲಿ ನಾಯಕರ ಕೊರತೆ ಇಲ್ಲ. ಆದರೆ ನಮ್ಮ ಸರ್ವ ಸಮ್ಮತಿಯ ನಾಯಕ ಬಿ‌. ಎಸ್. ಯಡಿಯೂರಪ್ಪ" ಎಂದರು.

Breaking: ರಾಜ್ಯ ನಾಯಕತ್ವ ಬದಲಾವಣೆಗೆ ಕುರಿತು ಸಿಎಂ ಯಡಿಯೂರಪ್ಪ ಖಡಕ್ ಉತ್ತರ Breaking: ರಾಜ್ಯ ನಾಯಕತ್ವ ಬದಲಾವಣೆಗೆ ಕುರಿತು ಸಿಎಂ ಯಡಿಯೂರಪ್ಪ ಖಡಕ್ ಉತ್ತರ

"ಯಡಿಯೂರಪ್ಪ ಪಕ್ಷಾಂತರ ಮಾಡಿ ಯಾರು ಯಾರದ್ದೋ ಕಾಲನ್ನು ಹಿಡಿದು ಮುಖ್ಯಮಂತ್ರಿಯಾಗಿಲ್ಲ" ಎಂದು ಹೇಳಿದ ನಳಿನ್ ಕುಮಾರ್ ಕಟೀಲ್, "ಯಡಿಯೂರಪ್ಪ ಬಳಿಕ ಸಮರ್ಥ ನಾಯಕನಿಲ್ಲ" ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟರು.

ಯಡಿಯೂರಪ್ಪ ಸೂಚಿಸಿದ ವ್ಯಕ್ತಿಯೇ ರಾಜ್ಯದ ಮುಂದಿನ ಸಿಎಂ? ಯಡಿಯೂರಪ್ಪ ಸೂಚಿಸಿದ ವ್ಯಕ್ತಿಯೇ ರಾಜ್ಯದ ಮುಂದಿನ ಸಿಎಂ?

"ಸಿದ್ದರಾಮಯ್ಯ ಈ ಮಾತು ಹೇಳುವ ಮುಂಚೆ ಯೋಚಿಸಬೇಕಿತ್ತು. ಅವರು ಮುಂಚೆ ಎಲ್ಲಿದ್ದರು?, ಯಾರು ಅವರ ಗುರು ಆಗಿದ್ದರು?, ಕಾಂಗ್ರೆಸ್‌ಗೆ ಬೈದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದು ಮುಖ್ಯಮಂತ್ರಿ ಆಗಿದ್ದನ್ನು ಜಗತ್ತು ನೋಡಿದೆ‌. ಹಾಗಾಗಿ ಸಿದ್ಧರಾಮಯ್ಯ ಈ ಮಾತು ಹೇಳುವ ಮುಂಚೆ ಯೋಚಿಸಬೇಕಿತ್ತು" ಎಂದು ಕಟೀಲ್ ಟೀಕಿಸಿದರು.

ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ದೆಹಲಿಯಲ್ಲಿ ಶಾಸಕರ ರಹಸ್ಯ ಸಭೆಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ದೆಹಲಿಯಲ್ಲಿ ಶಾಸಕರ ರಹಸ್ಯ ಸಭೆ

"ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ. ಆವತ್ತು ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗ ರಾಹುಲ್ ಗಾಂಧಿಯವರು ಕುಮಾರಸ್ವಾಮಿ ಕೈ-ಕಾಲು ಹಿಡಿದು ಮುಖ್ಯಮಂತ್ರಿ ಮಾಡಿದರು. ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕ ಇಲ್ಲ ಅಂತಾ ಸೋನಿಯಾ ಗಾಂಧಿ ತೀರ್ಮಾನ ಅಲ್ವಾ ಅದು?" ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.

"ಸಿದ್ದರಾಮಯ್ಯ ಪಕ್ಷವನ್ನು ಮೊದಲು ನೋಡುವುದು ಒಳ್ಳೆಯದು. ಸೋನಿಯಾ ಗಾಂಧಿಯವರಿಗೆ ಗೊತ್ತಿದೆ. ಸಿದ್ದರಾಮಯ್ಯ ಸಮರ್ಥ ನಾಯಕ ಅಲ್ಲ ಅಂತಾ" ಎಂದು ನಳಿನ್ ಕುಮಾರ್ ವಾಗ್ದಾಳಿ ನಡೆಸಿದರು.

English summary
There are many leader's in BJP. B. S. Yediyurappa is our leader said BJP Karnataka president Nalin Kumar Kateel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X