ಮಂಗಳೂರಿನಲ್ಲಿ ಮಗಳ ಮದುವೆ ಸಂಭ್ರಮದಲ್ಲಿ ಸಾವನ್ನಪ್ಪಿದ ತಾಯಿ
ಮಗಳ ಮದುವೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾ, ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಿನ್ನೆ (ಏಪ್ರಿಲ್ 20) ನಡೆದಿದೆ.
ಮಂಗಳೂರು, ಏಪ್ರಿಲ್ 21: ಮಗಳ ಮದುವೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾ, ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಿನ್ನೆ (ಏಪ್ರಿಲ್ 20) ನಡೆದಿದೆ.
ಬೆಳ್ತಂಡಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮಗಳ ಮದುವೆಯನ್ನು ಸಂಭ್ರಮದಿಂದ ನೋಡುತ್ತಿದ್ದ ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪ ಎನ್ನುವವರ ಪತ್ನಿ ವಾರಿಜಾ (50) ಸಂತಸ ತಾಳಲಾರದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.[ಗುದನಾಳದೊಳಗೆ ಚಿನ್ನವಿಟ್ಟುಕೊಂಡು ಸಾಗಿಸುತ್ತಿದ್ದವನ ಬಂಧನ]

ವಾರಿಜಾ ಅವರ ಮಗಳು ನವ್ಯ ವಿವಾಹ ಆನಂದ ಎಂಬುವವರೊಂದಿಗೆ ನೆರವೇರಿದ ಕೆಲ ಸಮಯದಲ್ಲೇ ವಾರಿಜಾ ಸಾವನ್ನಿಪ್ಪದ್ದರಿಂದ ಮದುವೆ ಮನೆಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗಿತ್ತು.












Click it and Unblock the Notifications