ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲೊಂದು ಅಂದವಾದ ಅಂಗನವಾಡಿ, ಇದು ಚಿಣ್ಣರ ಅರಮನೆ

|
Google Oneindia Kannada News

ಮಂಗಳೂರು ಫೆಬ್ರವರಿ 23: ದೂರದಿಂದ ಆ ಕಟ್ಟಡವನ್ನು ನೋಡಿದರೆ ಯಾವುದೋ ಗೆಸ್ಟ್ ಹೌಸ್ , ಐಷಾರಾಮಿ ಕಾಟೇಜ್ ಅಂದ್ಕೋಳೋದು ಗ್ಯಾರಂಟಿ. ಆ ಸುಂದರ ಕಾಟೇಜ್ ನಲ್ಲಿ ರಜಾದಿನಗಳನ್ನು ಕಳೆಯುವ ಪ್ಲಾನ್ ಮಾಡಿ ಕೊಳ್ಳಲು ಶುರು ಮಾಡುತ್ತೀರಿ. ಆದರೆ ಹತ್ತಿರಕ್ಕೆ ಹೋಗ್ತಿದ್ದಂತೆ ಅಲ್ಲೊಂದು ಸಂದರವಾದ ಅಂಗನವಾಡಿಯ ದರ್ಶನವಾಗುತ್ತದೆ.

ಸರಕಾರಿ ಅಂಗನವಾಡಿಯೊಂದನ್ನು ಈ ರೀತಿಯಾಗಿಯೂ ಮಾಡಲು ಸಾಧ್ಯ ಅನ್ನೋದಕ್ಕೆ ಕಡಲನಗರಿಯ ಈ ಬಾಲಭವನವೇ ಸಾಕ್ಷಿ. ಇಂದಿನ ದಿನಗಳಲ್ಲಿ ಅಂಗನವಾಡಿ ಎಂದೊಡನೆ ಮೂಗು ಮುರಿಯುವವರೆ ಹೆಚ್ಚು . ಎಲ್ಲರೂ ಕಾನ್ವೆಂಟ್ , ಪ್ಲೇ ಸ್ಕೂಲ್ ಗೆ ತಮ್ಮ ಪುಟಾಣಿಗಳನ್ನು ಸೇರಿಸಲು ಇಷ್ಟ ಪಡುತ್ತಾರೆ . ಆದರೆ ಕಡಲ ತಡಿಯ ಈ ಚಿತ್ತಾಕರ್ಷಕ ದಿಂದ ಕಣ್ಮನ ಸೆಳೆಯುತ್ತೆ ಈ ಚಿಣ್ಣರ ಭವನ. ಅದು ಮದ್ದು ಮಕ್ಕಳ ಪಾಲಿಗೆ ಸುಂದರ ಕಲ್ಪನೆಯ ಅರಮನೆ.

ಆ ಅಂಗನವಾಡಿಯ ಗೋಡೆಯ ತುಂಬೆಲ್ಲಾ ಚಿತ್ತಾಕರ್ಷಕ ಚಿತ್ರಗಳು. ಮಕ್ಕಳ ಪಾಲಿಗಂತೂ ಇದು ಅಂಗನವಾಡಿ ಮಾತ್ರವಲ್ಲ, ಅರಮನೆ ಕೂಡಾ. ಈ ಚಿಣ್ಣರ ಭವನಕ್ಕೆ ಬರೋ ಮಕ್ಕಳಿಗೆ ಮನೆಗಿಂತಲೂ ಈ ಅಂಗನವಾಡಿಯೇ ಅಚ್ಚುಮೆಚ್ಚು.

ಲಸಿಕೆ ಬಗ್ಗೆ ಜಾಗೃತಿ ಅಭಿಯಾನಕ್ಕೆ ನಟಿ ಕರೀನಾ ಕಪೂರ್ ರಾಯಭಾರಿಲಸಿಕೆ ಬಗ್ಗೆ ಜಾಗೃತಿ ಅಭಿಯಾನಕ್ಕೆ ನಟಿ ಕರೀನಾ ಕಪೂರ್ ರಾಯಭಾರಿ

ಅಂದಹಾಗೆ ಈ ಅಂಗನವಾಡಿ ಇರುವುದು ಮಂಗಳೂರಿನ ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರಿಕಂಬ್ಳ ಎಂಬಲ್ಲಿ. ಇತ್ತೀಚೆಗಷ್ಟೇ ಉದ್ಗಾಟನೆಗೊಂಡಿರುವ ಈ ಅಂಗನವಾಡಿ ಕೇಂದ್ರ ಅದ್ಯಾವ ಖಾಸಗಿ ಕಾನ್ವೆಂಟ್ , ಪ್ಲೇ ಸ್ಕೂಲ್, ನರ್ಸರಿಗಿಂತಲೂ ಕಡಿಮೆ ಇಲ್ಲ ಅನ್ನೋದನ್ನು ತೋರಿಸಿಕೊಟ್ಟಿದೆ.

ಸಿರಾಜ್ ಹುಸೇನ್ ಶ್ರಮದಿಂದ ಅಂಗನವಾಡಿ

ಸಿರಾಜ್ ಹುಸೇನ್ ಶ್ರಮದಿಂದ ಅಂಗನವಾಡಿ

ಬಾಲವಿಕಾಸ ಸಮಿತಿ ಅಧ್ಯಕ್ಷ ಸಿರಾಜ್ ಹುಸೇನ್ ಎಂಬವರ ಅವಿರತ ಪ್ರಯತ್ನದ ಫಲವಾಗಿ ಈ ಬಾಲಭವನ ಇಂದು ತಲೆ ಎತ್ತಿ ನಿಂತಿದೆ. ಎಲ್ಲಾ ಮಕ್ಕಳಿನಂತೆ ಬಡಮಕ್ಕಳು ಹೋಗೋ ಅಂಗನವಾಡಿ ಕೂಡಾ ಆಕರ್ಷಕವಾಗಿರಬೇಕು ಅನ್ನೋ ಅವರ ಕನಸಿನ ಫಲವಾಗಿ ಈ ಬಾಲಭವನ ನಿರ್ಮಾಣವಾಗಿದೆ.

ಚಾಮರಾಜನಗರ ಬಾಲಮಂದಿರದ ಅವ್ಯವಸ್ಥೆ ವಿರುದ್ಧ ದಂಗೆಯೆದ್ದ ಮಕ್ಕಳುಚಾಮರಾಜನಗರ ಬಾಲಮಂದಿರದ ಅವ್ಯವಸ್ಥೆ ವಿರುದ್ಧ ದಂಗೆಯೆದ್ದ ಮಕ್ಕಳು

31 ಲಕ್ಷ ರೂಪಾಯಿ ವೆಚ್ಚ

31 ಲಕ್ಷ ರೂಪಾಯಿ ವೆಚ್ಚ

ಸರಕಾರ ಹಾಗೂ ಇನ್ನಿತರರ ಕೊಡುಗೆಯಿಂದ ಸುಮಾರು 31 ಲಕ್ಷ ರೂಪಾಯಿಯಲ್ಲಿ ಈ ಮಾದರಿ ಅಂಗನವಾಡಿ ನಿರ್ಮಿಸಲಾಗಿದೆ. ಅಂಗನವಾಡಿ ಅಷ್ಟಭುಜಾಕೃತಿಗಳನ್ನು ಹೊಂದಿದ್ದರೆ, ಇನ್ನು ಹೊರಭಾಗದಲ್ಲಿರುವ ಮಕ್ಕಳ ಆಟೋಟೋಪಗಳಿಗೆ ನಿರ್ಮಿಸಿರುವ ಚಿಣ್ಣರಭವನ ಷಟ್ಭುಜಗಳನ್ನು ಹೊಂದಿದೆ. ಅಂಗನಾಡಿ ಒಳಭಾಗದ ಗೋಡೆಗಳಲ್ಲಿ ಮಕ್ಕಳನ್ನು ಸೂಜಿಗಲ್ಲಿನಂತೆ ಆಕರ್ಷಿಸಲು ವರ್ಣಮಯ ಚಿತ್ರಗಳನ್ನು ಬಿಡಿಸಲಾಗಿದೆ.

ಕೊಪ್ಪಳ: ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ ಕೊಪ್ಪಳ: ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ

ಆಕರ್ಷಕ ಕಾಂಪೌಂಡ್

ಆಕರ್ಷಕ ಕಾಂಪೌಂಡ್

ಜೊತೆಗೆ ಅಂಗನವಾಡಿಯ ಕಂಪೌಂಡ್ ಗಳನ್ನು ಆಕರ್ಷಕವಾಗಿ ನಿರ್ಮಿಸಿ, ಹಲವಾರು ಗಿಡಗಳನ್ನು ನೆಡಲಾಗಿದೆ. ವಿಶೇಷ ಅಂದ್ರೆ ಇದೆಲ್ಲದರ ನೀಲನಕ್ಷೆಯನ್ನು ತಯಾರಿಸಿದ್ದೂ ಕೂಡಾ ಸಿರಾಜ್ ಹುಸೇನ್ ಅವರೇ. ಹಿಂದೆ ಹಳೇ ಕಟ್ಟಡದಲ್ಲಿದ್ದ ಅಂಗನವಾಡಿ ಹೊಸದಾಗಿ ನಿರ್ಮಾಣವಾಗುತ್ತಿದ್ದಂತೆ ಮಕ್ಕಳ ಸಂಖ್ಯೆಯೂ 40 ತಲುಪಿದೆ.

ಹೆಚ್ಚಿನ ಮಕ್ಕಳು ದಾಖಲಾಗುತ್ತಿಲ್ಲ

ಹೆಚ್ಚಿನ ಮಕ್ಕಳು ದಾಖಲಾಗುತ್ತಿಲ್ಲ

ಸದ್ಯ ಈ ಅಂಗನವಾಡಿಗೆ ಬಡಮಕ್ಕಳಲ್ಲದೇ ಸ್ಥಿತಿವಂತರ ಮಕ್ಕಳು ಕೂಡಾ ದಾಖಲಾಗುತ್ತಿದ್ದಾರೆ. ಆದ್ರೆ ಸರಕಾರಿ ನಿಯಮದಂತೆ ಓರ್ವ ಶಿಕ್ಷಕಿ ಹಾಗೂ ಓರ್ವ ಸಹಾಯಕಿ ಇರುವುದರಿಂದಹೆಚ್ಚಿನ ಮಕ್ಕಳ ದಾಖಲಾತಿ ಸಾಧ್ಯವಾಗುತ್ತಿಲ್ಲ . ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅನಿವಾರ್ಯವಾಗಿ 40 ಮಕ್ಕಳಿಗಷ್ಟೇ ದಾಖಲಾತಿಯನ್ನು ನಿಲ್ಲಿಸಲಾಗಿದೆ. ಒಟ್ಟಿನಲ್ಲಿ ಸರಕಾರಿ ಅಂಗನವಾಡಿಯೊಂದನ್ನು ಈ ರೀತಿಯಾಗಿಯೂ ಮಾಡಲು ಸಾಧ್ಯ ಅನ್ನೋದನ್ನು ಈ ಮಾದರಿ ಅಂಗನವಾಡಿ ತೋರಿಸಿಕೊಟ್ಟಿದೆ.

English summary
state of the art anganawadi center that is no par with any private playschool . This unique anganawadi center started in Tarikambla near Banjpe of Mangaluru.here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X