ಬಹು ನಿರೀಕ್ಷಿತ ತುಳು ಚಿತ್ರ ಪತ್ತೀಸ್ ಗ್ಯಾಂಗ್ ಆಗಸ್ಟ್ 10ಕ್ಕೆ ತೆರೆಗೆ

ಮಂಗಳೂರು, ಆಗಸ್ಟ್ 03: ಮತ್ತೊಂದು ಬಹು ನಿರೀಕ್ಷಿತ ತುಳು ಚಲನಚಿತ್ರ 'ಪತ್ತೀಸ್ ಗ್ಯಾಂಗ್' ಆಗಸ್ಟ್ 10 ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ. ಆನಂದ್ ಬೋಳಾರ್ ನಿರ್ಮಾಣದಲ್ಲಿ ಹಾಗೂ ಪ್ರೀತಂ ಎಂ ಎನ್ ಅವರ ನೇತೃತ್ವದಲ್ಲಿ ಈ ಪತ್ತೀಸ್ ಗ್ಯಾಂಗ್ ಸಿದ್ಧವಾಗಿದೆ. ಮನೋಜ್ ಕುಮಾರ್ ಅವರು ಈ ಸಿನಿಮಾವನ್ನು ಪ್ರಸ್ತುತ ಪಡಿಸಿದ್ದಾರೆ.

ವಿಶೇಷವೆಂದರೆ ತುಳು ರಂಗಭೂಮಿಯ ಹಾಗೂ ತುಳು ಚಲನಚಿತ್ರ ಕ್ಷೇತ್ರದ ಅತ್ಯಂತ ಬೇಡಿಕೆ ಹಾಗೂ ಹಿರಿಯ ನಟ ಆನಂದ್ ಬೌಲರ್ ಅವರಿಗೆ ಈ ಸಿನಿಮಾ ಸಮರ್ಪಣೆಯಾಗಿಸುವ ನಿಟ್ಟಿನಲ್ಲಿ ಈ ಸಿನೆಮಾ ಸಿದ್ಧಗೊಂಡಿದೆ.

ತುಳು ಭಾಷೆಯಲ್ಲಿ 'ಪತ್ತೀಸ್ ' ಅಂದರೆ ವಂಚನೆ ಎಂದರ್ಥ. ಈ ಹಿನ್ನೆಲೆಯಲ್ಲಿ ಈ ಚಲನ ಚಿತ್ರದ ಕಥಾವಸ್ತು ವಂಚನೆಯ ಸುತ್ತ ಸುತ್ತುತ್ತದೆ ಎಂದು ಹೇಳಲಾಗಿದೆ. ದೇಶದಲ್ಲಿ ನಡೆದ ನೈಜ ಘಟನೆಗಳನ್ನೇ ಮುಖ್ಯವಾಗಿರಿಸಿಕೊಂಡು ಈ ಸಿನಿಮಾ ಮಾಡಲಾಗಿದೆ.

Tulu movie Pathis Gang to release on August 10

ತಮಿಳುನಾಡು, ಆಂಧ್ರ ಹೀಗೆ ಬೇರೆ ಬೇರೆ ಭಾಗದಲ್ಲಿ ನಡೆದ ನೈಜ ಘಟನೆಗಳ ಕಥಾನಕವನ್ನೇ ಸಿನಿಮಾ ಕತೆಯಾಗಿಸಿಕೊಳ್ಳಲಾಗಿದೆ .

ಈ ಸಿನಿಮಾದ ಇನ್ನೊಂದು ವಿಶೇಷವೆಂದರೆ ಈ ಸಿನಿಮಾದಲ್ಲೆಲ್ಲೂ ಕುಡಿತ, ಸಿಗರೇಟ್ ಸೇದುವ ಅಥವಾ ಐಟಂ ಸಾಂಗ್ ಕೂಡ ಇಲ್ಲ. ಹೀಗಾಗಿ ಕರಾವಳಿಯ ಎಲ್ಲ ಜನರು ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಚಿತ್ರ ಇದಾಗಿದೆ.

Tulu movie Pathis Gang to release on August 10

ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು ಮೋಹನ್ ಶಣೈ, ಅಜಯ್ ರಾಜ್ , ವಿಶ್ಮಯ ವಿನಾಯಕ್ , ಚಂದ್ರಹಾಸ್ ಉಳ್ಳಾಲ್ ನವ್ಯತಾರೈ ಚಿತ್ರದ ಪ್ರಮುಖ ಮುಖ್ಯ ಭೂಮಿಕೆಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+