ಪ್ರತಿಭಾ ಶೋಧದಲ್ಲಿ ಮಂಗಳೂರಿನ ವಿದ್ಯಾರ್ಥಿಗಳ ಸಾಧನೆ
ಮಂಗಳೂರು, ಆಗಸ್ಟ್, 13: ಮಂಗಳೂರಿನ ಮೂವರು ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಶನ್ ನಲ್ಲಿ(ರಾಷ್ಟ್ರೀಯ ಪ್ರತಿಭಾ ಪರೀಕ್ಷೆ) ಸಾಧನೆ ಮಾಡಿ ವಾರ್ಷಿಕ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಪಣೀತ್ ಡಿ ನಾಯಕ್, ಪ್ರಜ್ಞಾ ಹೆಬ್ಬಾರ್, ರಶ್ಮಿ ಬಿ ಕಸನ್ ಗೇರಿ ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಒಟ್ಟು 51 ವಿದ್ಯಾರ್ಥಿಗಳು ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಶನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ ಲರ್ನಿಂಗ್ ನಿಂದ ತರಬೇತಿ ಪಡೆದುಕೊಂಡಿದ್ದರು. (ವಿದೇಶದಲ್ಲಿ ವ್ಯಾಸಂಗ ಮಾಡಲು 10 ಲಕ್ಷ ಸಾಲ ಸೌಲಭ್ಯ)

ಆಯ್ಕೆಯಾಗಿರುವ ವಿದ್ಯಾರ್ಥಿಗಳು ಎನ್ ಟಿ ಎಸ್ ಸ್ಕಾಲರ್ಸ್ ಎಂದು ಕರೆಸಿಕೊಳ್ಳುತ್ತಾರೆ. ವರ್ಷಕ್ಕೆ 15 ಸಾವಿರ ರು. ಸ್ಕಾಲರ್ ಶಿಪ್ (ಪ್ರಥಮ ಪಿಯುಸಿ ಮತ್ತು ದ್ವೀತಿಯ ಪಿಯುಸಿ) ಪಡೆದುಕೊಳ್ಳುತ್ತಾರೆ.(ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ತೆರೆದುಕೊಂಡ ಪುಸ್ತಕ ಭಂಡಾರ)
ಪದವಿ ವೇಳೆ ವರ್ಷಕ್ಕೆ 24 ಸಾವಿರ ರು. ಸ್ಕಾಲರ್ ಶಿಪ್ ಪಡೆದುಕೊಳ್ಳುತ್ತಾರೆ. ಎನ್ ಟಿ ಎಸ್ ಇ ಅಡಿಯಲ್ಲಿ ವಿಜ್ಞಾನ, ಸಮಾಜ ವಿಜ್ಞಾನ, ಇಂಜಿನಿಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜ್ ಮೆಂಟ್ ಕೋರ್ಸ್ ಗಳು ಬರುತ್ತವೆ.












Click it and Unblock the Notifications