ಮೂಡಬಿದ್ರೆಯಲ್ಲಿ ಮದುವೆಗೂ ಮುಂಚೆ ರಾತ್ರೋ ರಾತ್ರಿ ವಧು ಪರಾರಿ
ಮಂಗಳೂರು, ಡಿಸೆಂಬರ್ 10: ಸೋಮವಾರ (ಡಿ. 11) ಹಸೆಮಣೆಗೆ ಏರಬೇಕಾಗಿದ್ದ ನವವಧು ಶನಿವಾರ (ಡಿ. 9) ರಾತ್ರಿ ಮನೆಯಿಂದಲೇ ಪರಾರಿಯಾದ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ. ಇಲ್ಲಿನ ದರೆಗುಡ್ಡೆ ಎಂಬಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಯುವತಿ ನಾಪತ್ತೆಯಾಗಿರುವ ಈ ಪ್ರಕರಣ 'ಲವ್ ಜಿಹಾದ್' ಎಂದು ಆರೋಪಿಸಲಾಗಿದೆ.
ದರೆಗುಡ್ಡೆ ನಿವಾಸಿ ಪ್ರಿಯಾಂಕ ಅವರಿಗೆ ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ಮದುವೆ ನಿಶ್ಚಯವಾಗಿದ್ದು, ಮದುವೆಗೆ ಮುನ್ನವೇ ವಧು ಪರಾರಿಯಾಗಿದ್ದಾಳೆ. ದರೆಗುಡ್ಡೆಯಲ್ಲಿರುವ ತನ್ನ ಮನೆಯಿಂದ 10 ಪವನ್ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್, ವಸ್ತ್ರದೊಂದಿಗೆ ಪ್ರಿಯಾಂಕ ಪರಾರಿಯಾಗಿದ್ದು ಮನೆ ಮಂದಿ ಕಂಗಾಲಾಗಿದ್ದಾರೆ.

ಪ್ರಿಯಾಂಕ ಅವರ ತಂದೆ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು ಮಗಳನ್ನು ತಾಯಿ ಕಷ್ಟಪಟ್ಟು ಸಾಕಿದ್ದರು. ಈಗ ಮಗಳು ಏಕಾ ಏಕಿ ಮನೆಯಿಂದ ನಾಪತ್ತೆಯಾಗಿರುವುದರಿಂದ ತಾಯಿ ಕಂಗಾಲಾಗಿದ್ದಾರೆ. ಇದೆಲ್ಲದರ ನಡುವೆ ಪ್ರಕರಣ ಲವ್ ಜಿಹಾದ್ ತಿರುವನ್ನು ಪಡೆಯುತ್ತಿದೆ.

ಪ್ರಿಯಾಂಕ ಕೆಲ ತಿಂಗಳ ಹಿಂದೆಯಿಂದ ಮಂಗಳೂರು ಹೊರವಲಯದ ಫರಂಗಿಪೇಟೆಯ ಹೈದರ್ ಎಂಬವರೊಂದಿಗೆ ಸಂಪರ್ಕದಲ್ಲಿದ್ದಳು. ಹೀಗಾಗಿ ಆತನೊಂದಿಗೆ ಪರಾರಿಯಾಗಿದ್ದಾಳೆಂಬ ಶಂಕೆ ವ್ಯಕ್ತವಾಗಿದೆ.
ಮೂಡುಬಿದ್ರೆ ಠಾಣೆಯಲ್ಲಿ ಈ ಕುರಿತು ಪರಾರಿ ಪ್ರಕರಣ ದಾಖಲಾಗಿದೆ. ಹಿಂದು ಸಂಘಟನೆಗಳ ಮುಖಂಡರು ಪ್ರಿಯಾಂಕ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದು ಪ್ರತಿಭಟನೆಗೆ ಸಿದ್ಧತೆ ನಡೆದಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications