ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ
ಮಂಗಳೂರು, ಸೆ. 14 : ಬಜಪೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆ. 13 ತಡರಾತ್ರಿ ಸ್ಫೋಟಕ ತಯಾರಿಕೆ ಸಾಮಗ್ರಿ ಪತ್ತೆಯಾಗಿದೆ. ದುಬೈಗೆ ತೆರಳಲಿದ್ದ ಪ್ರಯಾಣಿಕರೊಬ್ಬರ ಲಗೇಜ್ ಪರೀಕ್ಷಿಸಿದಾಗ ಬಾಂಬ್ ತಯಾರಿಕೆ ಸಾಮಗ್ರಿಳು ಪತ್ತೆಯಾಗಿದೆ.
ಕಾಸರಗೋಡು ಜಿಲ್ಲೆ ಉಪ್ಪಾಳದ ನಿವಾಸಿ ಅಬ್ದುಲ್ ಖಾದರ್‌ನನ್ನು ಬಂಧಿಸಲಾಗಿದ್ದು ಈತ ಕಳೆದ 5 ವರ್ಷಗಳಿಂದ ದುಬೈನ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. (ಮಂಗಳೂರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್)

ರಾತ್ರಿ 11.30ಕ್ಕೆ ಮಂಗಳೂರಿನಿಂದ ದುಬೈಗೆ ನಿರ್ಗಮಿಸುವ ಜೆಟ್‌ಏರ್‌ವೇಸ್‌ವಿಮಾನದಲ್ಲಿ ಪ್ರಯಾಣಿಸಲು ಖಾದರ್ ಆಗಮಿಸಿದ್ದು, ನಿಲ್ದಾಣದ ಸಿಐಎಸ್‌ಎಫ್ಸಿಬಂದಿ ಆತನ ಲಗೇಜನ್ನು ತಪಾಸಣೆ ಮಾಡಿದಾಗ ಸಾಮಗ್ರಿಗಳು ಪತ್ತೆಯಾಗಿವೆ. ಒಂದು ಟೇಪ್‌ರೇಕಾರ್ಡ್‌ರ್, ಅದಕ್ಕೆ ಜೋಡಿಸಿದ ಕೆಲವು ವೈರ್‌ಗಳು, ಒಂದು ಬ್ಯಾಟರಿ ಮತ್ತು ಅಮೋನಿಯಂ ನೈಟ್ರೇಟ್ ಅತನ ಬಳಿ ಪತ್ತೆಯಾಗಿದೆ.(ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಬೋಲಾ ತಪಾಸಣೆ)
ವ್ಯಕ್ತಿಯ ಬಳಿ ಸ್ಫೋಟಕಗಳಿಗೆ ಬಳಸುವ ವಸ್ತುಗಳು ಪತ್ತೆಯಾದ ಕೂಡಲೇ ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಶ್ವಾನ ದಳವನ್ನು ವಿಮಾನ ನಿಲ್ದಾಣಕ್ಕೆ ಕರೆಸಲಾಗಿತ್ತು. ಪೊಲೀಸ್ ಆಯುಕ್ತರಾದ ಆರ್. ಹಿತೇಂದ್ರ, ಡಿಸಿಪಿ ಡಾ.ಕೆ. ವಿ.ಜಗದೀಶ್, ಅಪರಾಧ ವಿಭಾಗದ ಡಿಸಿಪಿ ವಿಷ್ಣುವರ್ಧನ್, ಪಣಂಬೂರು ಎಸಿಪಿ ರವಿಕುಮಾರ್ ಮತ್ತಿತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಉಗ್ರರೊಂದಿಗೆ ಸಂಪರ್ಕವಿಲ್ಲ
ಬಂಧಿತ ಖಾದರ್ ಗೆ ಉಗ್ರರೊಂದಿಗೆ ಯಾವುದೇ ಸಂಪರ್ಕವಿಲ್ಲ. ಪಕ್ಕದಮನೆಯವರು ದುರಸ್ತಿಗೆ ಎಂದು ನೀಡಿದ್ದ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಎಂದು ಖಾದರ್ ಪಾಲಕರು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications