ಬಾಗಿಲು ಮುಚ್ಚಲಿದೆ ಮಂಗಳೂರಿನ ಪ್ರಪ್ರಥಮ ಎಸ್ ಆರ್ ಭಂಡಾರಿ ಆಮ್ಲೆಟ್ ಅಂಗಡಿ

ಮಂಗಳೂರು, ಡಿಸೆಂಬರ್ 23: ಬರೋಬ್ಬರಿ 52 ವರ್ಷ ಮಂಗಳೂರಿನ ಜನರಿಗೆ ಬಿಸಿ ಬಿಸಿ ಆಮ್ಲೆಟ್ ಸವಿ ಉಣಬಡಿಸಿದ ಮಣ್ಣಗುಡ್ಡೆ ಗುರ್ಜಿ ಸಮೀಪದ ಎಸ್.ಆರ್.ಭಂಡಾರಿ ತಮ್ಮ ವ್ಯಾಪಾರದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ. ಒಂದು ಆಮ್ಲೆಟ್ ಅಂಗಡಿ ಬಂದ್ ಆದರೆ ಅದೇನು ಮಹಾ ವಿಷಯವೇ ಎಂದು ಯೋಚಿಸುತ್ತಿದ್ದಿರಾ? ಅದಕ್ಕೆ ಕಾರಣವೂ ಇದೆ.

ಒಂದು ಕಾಲದಲ್ಲಿ ಈಗಿನ ಘಟಾನುಘಟಿ ರಾಜಕಾರಣಿಗಳು, ಅಧಿಕಾರಿಗಳು ಇವರ ಅಂಗಡಿಗೆ ಬಂದು ಅಮ್ಲೆಟ್ ಸವಿಯುತ್ತಿದ್ದರು. ಮಂಗಳೂರಿನಲ್ಲಿ ಆಮ್ಲೆಟ್ ಭಂಡಾರಿ ಎಂದೇ ಪ್ರಸಿದ್ಧರಾಗಿದ್ದರು ಎಸ್ ಆರ್ ಭಂಡಾರಿ.

ಮಂಗಳೂರಿನಲ್ಲಿ ಅಂಗಡಿಗಳೆಲ್ಲ ಮುಚ್ಚಿದ್ದರೂ ಇವರ ಆಮ್ಲೆಟ್ ಅಂಗಡಿ ರಾತ್ರಿ 11ರವರೆಗೂ ತೆರೆದುಕೊಂಡಿರುತ್ತದೆ. ದಕ್ಷಿಣದ ಆರ್ಎಸ್ಎಸ್ ಶಕ್ತಿ ಕೇಂದ್ರ ಮಣ್ಣಗುಡ್ಡದ ಸಂಘನಿಕೇತನದವರು ಹಲವು ವರ್ಷಗಳ ಹಿಂದೆ ರಾತ್ರಿ ಇವರ ಅಂಗಡಿಗೆ ಬಂದು ಹಸಿವು ನೀಗಿಸಿಕೊಳ್ಳುತ್ತಿದ್ದರು.

ಕೇಂದ್ರ ಸಚಿವ ಸದಾನಂದ ಗೌಡ, ಮಾಜಿ ಸಚಿವರಾಗಿದ್ದ ಧನಂಜಯ ಕುಮಾರ್, ಇತ್ತೀಚೆಗೆ ನಿಧನರಾದ ಸಚಿವ ಅನಂತ ಕುಮಾರ್, ಮಾಜಿ ಸಚಿವ ದಿವಂಗತ ವಿ.ಎಸ್.ಆಚಾರ್ಯ ಮೊದಲಾದವರು ಭಂಡಾರಿಯವರು ಆಪ್ತರಾಗಿದ್ದು, ಅಂಗಡಿಗೆ ಭೇಟಿ ನೀಡಿ ರಾತ್ರಿ ಗಂಟೆಗಟ್ಟಲೆ ಕೂತು ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು. ಮುಂದೆ ಓದಿ...

ಹೀಗೆ ಶುರುವಾಯಿತು

ಹೀಗೆ ಶುರುವಾಯಿತು

ಭಂಡಾರಿಯವರು ಆಮ್ಲೆಟ್ ವ್ಯವಹಾರ ಆರಂಭಿಸಿದ್ದು ಗೆಳೆಯನ ಕೋಳಿ ಮೊಟ್ಟೆಯ ವ್ಯಾಪಾರ ವೃದ್ಧಿಗೆಂದು. ಗೆಳೆಯನಲ್ಲಿ ಮೊಟ್ಟೆ ಖರೀದಿಸಿ ಭಂಡಾರಿ ಅವರು ಆಮ್ಲೆಟ್ ಮಾಡುತ್ತಾ ವ್ಯವಹಾರ ಶುರು ಮಾಡಿದರು. ಇದರೊಂದಿಗೆ ಗೆಳೆಯನಿಗೆ ಆದಾಯದ ಜತೆಗೆ ತನ್ನ ವ್ಯವಹಾರವನ್ನೂ ವೃದ್ಧಿಸಿಕೊಂಡರು.

ಸಮಾಜ ಸೇವೆಯಲ್ಲೂ ಸಕ್ರೀಯರು

ಸಮಾಜ ಸೇವೆಯಲ್ಲೂ ಸಕ್ರೀಯರು

ಎಸ್.ಆರ್. ಭಂಡಾರಿಯವರು ಕೇವಲ ಆಮ್ಲೆಟ್ ವ್ಯಾಪಾರ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ಸಕ್ರೀಯರು. 72 ವರ್ಷದ ಭಂಡಾರಿಯವರು ಈವರೆಗೆ 42ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ್ದಾರೆ. ಅಂಗಡಿ ಮುಚ್ಚಿದ ಬಳಿಕ ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ಆಮ್ಲೆಟ್ ಭಂಡಾರಿ ಎಂದೇ ಪರಿಚಿತರು

ಆಮ್ಲೆಟ್ ಭಂಡಾರಿ ಎಂದೇ ಪರಿಚಿತರು

ಎಸ್.ಆರ್.ಭಂಡಾರಿ ಅವರ ತಂದೆ ಸುಮಾರು 30 ವರ್ಷಗಳ ಹಿಂದೆ ಅಂಗಡಿ ನಡೆಸುತ್ತಿದ್ದರು. ತಂದೆಯ ನಿಧನ ಬಳಿಕ 1966ರಲ್ಲಿ ರಾಮಚಂದ್ರ ಭಂಡಾರಿ ಅವರು ಉದ್ಯಮ ಮುಂದುವರಿಸಿದ್ದರು.

ಇವರು ಜವಾಬ್ದಾರಿ ತೆಗೆದುಕೊಳ್ಳುವ ಹೊತ್ತಿಗೆ ಅಂಗಡಿಯೊಂದಿಗೆ ಆಮ್ಲೆಟ್ ವ್ಯವಹಾರ ಆರಂಭಿಸಿದ್ದರು. ಹೀಗಾಗಿ 'ಆಮ್ಲೆಟ್ ಭಂಡಾರಿ' ಎಂದೇ ಮಂಗಳೂರಿನ ಜನರಿಗೆ ಪರಿಚಿತರಾದರು.

ವರ್ಷಾಂತ್ಯಕ್ಕೆ ವ್ಯವಹಾರ ನಿಲ್ಲಿಸಲಿದ್ದಾರೆ!

ವರ್ಷಾಂತ್ಯಕ್ಕೆ ವ್ಯವಹಾರ ನಿಲ್ಲಿಸಲಿದ್ದಾರೆ!

5 ದಶಕಗಳ ಕಾಲ ಆಮ್ಲೆಟ್ ಅಂಗಡಿ ನಡೆಸಿದ 72 ವರ್ಷ ಪ್ರಾಯದ ರಾಮಚಂದ್ರ ಭಂಡಾರಿಯವರು ಇಂದು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರಪ್ರಥಮ ಆಮ್ಲೆಟ್ ಅಂಗಡಿ ಆರಂಭಿಸಿದ 'ಆಮ್ಲೆಟ್ ಭಂಡಾರಿ' ಈ ವರ್ಷಾಂತ್ಯಕ್ಕೆ ವ್ಯವಹಾರ ನಿಲ್ಲಿಸಲಿದ್ದಾರೆ. ಡಿಸೆಂಬರ್ 31ರಂದು ಭಂಡಾರಿ ಅವರ ಆಮ್ಲೆಟ್ ಅಂಗಡಿ ಬಾಗಿಲು ಮುಚ್ಚಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+