ಮಂಗಳೂರು-ಹರಿದ್ವಾರ ನಡುವೆ ವಿಶೇಷ ರೈಲು ಸಂಚಾರ
ಮಂಗಳೂರು, ಮಾ. 31 : ಭಾರತೀಯ ರೈಲ್ವೆ ಮಂಗಳೂರು ಸೆಂಟ್ರಲ್ ಮತ್ತು ಹರಿದ್ವಾರದ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸೇವೆಯನ್ನು ಒದಗಿಸಲಿದೆ. ಏ.2ರಂದು ರಾತ್ರಿ ಈ ರೈಲು ಮಂಗಳೂರಿನಿಂದ ಹೊರಡಲಿದೆ.
ಮಂಗಳೂರು ಸೆಂಟ್ರಲ್‌ನಿಂದ ಏ.2ರ ರಾತ್ರಿ 10.30ಕ್ಕೆ ಹೊರಡಲಿರುವ ರೈಲು ಏ.4ರ ಸಂಜೆ ಏಳು ಗಂಟೆಗೆ ಹರಿದ್ವಾರವನ್ನು ತಲುಪಲಿದೆ. ಏ.7ರಂದು ಹರಿದ್ವಾರದಿಂದ ಹೊರಡುವ ರೈಲು ಏ.9ರ ರಾತ್ರಿ ಹತ್ತುಗಂಟೆ ವೇಳೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸಲಿದೆ. [ಮಂಗಳೂರಲ್ಲಿ ಪೆಟ್ರೋಲ್ ಬಾಂಬ್ ಪತ್ತೆ]

ಮಂಗಳೂರು ಸೆಂಟ್ರಲ್-ಹರಿದ್ವಾರದ ನಡುವೆ ಸಂಚರಿಸುವ ಈ ವಿಶೇಷ ರೈಲು ಉಡುಪಿ, ಕುಂದಾಪುರ, ಭಟ್ಕಳ, ಕಾರವಾರ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.[ವಿಶೇಷ ರೈಲಿನ ಹೆಚ್ಚಿನ ಮಾಹಿತಿ ಇಲ್ಲಿದೆ]
ನರ್ಮ್ ಬಸ್ಸಿಗಾಗಿ ಬೇಡಿಕೆ ಸಲ್ಲಿಸಿ : ಮಂಗಳೂರು ನಗರದ 20 ಕಿ.ಮೀ ವ್ಯಾಪ್ತಿಯಲ್ಲಿ ನರ್ಮ್ ಯೋಜನೆಯಡಿ 35 ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. ಸಾರ್ವಜನಿಕರು ಅಗತ್ಯವಿರುವ ಮಾರ್ಗಗಳ ಬಗ್ಗೆ ಬೇಡಿಕೆ ಸಲ್ಲಿಸಬಹುದಾಗಿದೆ.
ಬಸ್ಸಿನ ಮಾರ್ಗದ ಕುರಿತ ಬೇಡಿಕೆಯನ್ನು ಏ.9ರೊಳಗೆ ಸಾರ್ವಜನಿಕರು ಕೆಎಸ್‌ಆರ್‌ಟಿಸಿ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಗೆ ಲಿಖಿತವಾಗಿ ಸಲ್ಲಿಸಬೇಕು. ಏ. 20ರಂದು ನಡೆಯುವ ಸಭೆಯಲ್ಲಿ ಮಾರ್ಗಗಳ ಅಂತಿಮ ಪಟ್ಟಿಯನ್ನು ಘೋಷಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಇಬ್ರಾಹಿಂ ಹೇಳಿದ್ದಾರೆ.












Click it and Unblock the Notifications