ಮಂಗಳೂರು : ಹಾವು ಹಿಡಿಯಲು ಹೋಗಿ ಸಾವು ತಂದುಕೊಂಡ

ಮಂಗಳೂರು, ಫೆ. 19 : ಹಾವು ಹಿಡಿಯಲು ಹೋದ ವ್ಯಕ್ತಿ ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಜೆರಾಲ್ಡ್ ರೋಡ್ರಿಗಸ್ ಎಂದು ಗುರುತಿಸಲಾಗಿದೆ.

ಪುಂಜಾಲಕಟ್ಟೆಯಲ್ಲಿನ ವ್ಯಾಪಾರಿಯೊಬ್ಬರ ಮನೆಗೆ ಮಂಗಳವಾರ ರಾತ್ರಿ ಹಾವು ಬಂದಿತ್ತು. ಕೂಲಿಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜೆರಾಲ್ಡ್ ಅವರು ಹಾವನ್ನು ಹಿಡಿಯುವುದಾಗಿ ಮನೆಗೆ ಬಂದಿದ್ದರು. ಮನೆಯವರು ಹಾವನ್ನು ಹಿಡಿಯುವುದು ಬೇಡವೆಂದರೂ ಕೇಳದ ಜೆರಾಲ್ಡ್ ಅದನ್ನು ಹಿಡಿಯಲು ಪ್ರಯತ್ನ ನಡೆಸಿದ್ದರು.

snake

ಮನೆಗೆ ಬಂದಿದ್ದ ಹಾವನ್ನು ಹೆಬ್ಬಾವು ಎಂದು ಜೆರಾಲ್ಡ್ ಹಿಡಿದಿದ್ದರು. ಆದರೆ, ಅದು ಕನ್ನಡಿ ಹಾವಾಗಿತ್ತು. ಹಾವು ಜೆರಾಲ್ಡ್ ಅವರ ಕೈಗೆ ಕಚ್ಚಿತ್ತು. ಸ್ಥಳಕ್ಕೆ ಆಗಮಿಸಿದ್ದ ಸ್ಥಳೀಯರು ಅದು ಕನ್ನಡಿ ಹಾವೆಂದು ತಿಳಿದ ನಂತರ ಅದನ್ನು ಕೊಂದು ಹಾಕಿದ್ದರು. [ಕೆನಡಾ : ಹೆಬ್ಬಾವಿಗೆ ಸಹೋದರರು ಬಲಿ]

ಹಾವಿನಿಂದ ಕಚ್ಚಿಕೊಂಡ ಜೆರಾಲ್ಡ್ ನಾಟಿ ಔಷಧಿ ಪಡೆದು ಮನೆಗೆ ಮರಳಿದ್ದರು. ಬುಧವಾರ ಬೆಳಗ್ಗೆ ಅವರ ಸ್ಥಿತಿ ಹದಗೆಟ್ಟಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾರೆ.

ಮಂಗಳೂರು : ಆಟೋರಿಕ್ಷಾ ಪ್ರಯಾಣದರವನ್ನು ಕಡಿಮೆ ಮಾಡಿ ಆಟೋ ಚಾಲಕರಿಗೆ ಜಿಲ್ಲಾಡಳಿತ ನಷ್ಟ ಉಂಟಯಮಾಡುತ್ತಿದೆ ಎಂದು ಆರೋಪಿಸಿ ಆರೋ ಚಾಲಕರು ಬುಧವಾರ ಮಂಗಳೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.[ಮಂಗಳೂರು : ಆಟೋ ರಿಕ್ಷಾ ದರ 25 ರೂ.ಇರಲಿ]

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್‍ನ ಜಿಲ್ಲಾಧ್ಯಕ್ಷರಾದ ಸುನಿಲ್ ಕುಮಾರ್ ಅವರು, ಕಳೆದ ಒಂದೂವರೆ ತಿಂಗಳಿನಿಂದ ಆಟೋರಿಕ್ಷಾ ಪ್ರಯಾಣದರದ ಪರಿಷ್ಕರಣೆಗೆ ಸಂಬಂಧಿಸಿ ವಿವಾದವಿದ್ದರೂ, ಅದನ್ನು ಸೌಹಾರ್ದಯುತವಾಗಿ ಬಗೆಹರಿಸಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+