ಪುತ್ತೂರು : ವಿದ್ಯುತ್ ಸಮಸ್ಯೆಗೆ ವಾಟ್ಸಪ್ ಮೂಲಕ ದೂರು ಕೊಡಿ
ಪುತ್ತೂರು, ಏ. 28 : ವಾಟ್ಸಪ್ ಸಾಮಾನ್ಯವಾಗಿ ಗೆಳೆಯರ ಹರಟೆಗೆ ಮಾತ್ರ ಸೀಮಿತ ಎಂದು ಅಂದುಕೊಳ್ಳಬೇಡಿ, ನೀವು ವಿದ್ಯುತ್ ಸಮಸ್ಯೆ ಬಗ್ಗೆ ವಾಟ್ಸಪ್ ಮೂಲಕವೇ ದೂರು ನೀಡಬಹುದಾಗಿದೆ. ಪುತ್ತೂರಿನಲ್ಲಿ ಜಾರಿಗೆ ತಂದಿರುವ ಈ ಯೋಜನೆ ಜನಪ್ರಿಯವಾಗಿದೆ.
ಪುತ್ತೂರು ಮೆಸ್ಕಾಂ ಘಟಕ ತನ್ನ ಗ್ರಾಹಕರ ಕುಂದುಕೊರತೆಗಳ ಬಗ್ಗೆ ತಿಳಿಯಲು ನೇರವಾಗುವಂತೆ 'ಪುತ್ತೂರು ಮೆಸ್ಕಾಂ ಕನ್ಸೂಮರ್' ಎಂಬ ವಾಟ್ಸಪ್ ಗ್ರೂಪ್ ಆರಂಭಿಸಿದೆ. ಈ ಗ್ರೂಪ್ ಮೂಲಕ ಗ್ರಾಹಕರು ನೇರವಾಗಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಬಹುದಾಗಿದೆ. [912 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಟಿಸಿಎಲ್]

ಈ ಗ್ರೂಪ್ ಅನ್ನು ನಿರ್ವಹಣೆ ಮಾಡುತ್ತಿರುವವರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಎಸ್. ಲೋಹಿತ್. ಈ ಗ್ರೂಪ್ ಅಧಿಕಾರಿಗಳು ಮತ್ತು ಗ್ರಾಹಕರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಮೆಸ್ಕಾಂ ಗ್ರಾಹಕರೊಂದಿಗೆ ನೇರವಾಗಿ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. [ಗೋಲ್ ಮಾಲ್ ಮೆಸೇಜ್ ನಂಬಿ ಉತ್ರ ಕೊಟ್ರೇ...!]
ಈಗ ಸರ್ಕಾರಿ ಅಧಿಕಾರಿಗಳ ಬಳಿ ಸ್ಮಾರ್ಟ್ ಫೋನ್‌ಗಳಿವೆ. ಅವರೆಲ್ಲರೂ ಈ ಗ್ರೂಪ್‌ನಲ್ಲಿದ್ದಾರೆ. ನಗರಸಭೆ ಸದಸ್ಯರನ್ನು ಸಹ ಗ್ರೂಪ್‌ಗೆ ಸೇರ್ಪಡೆ ಮಾಡಲಾಗಿದೆ ಎಂದು ಲೋಹಿತ್ ಮಾಹಿತಿ ನೀಡಿದ್ದಾರೆ. ಗ್ರಾಹಕರು ತಮ್ಮ ಪರಿಸರದಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ತಕ್ಷಣ ಅದರ ಫೋಟೋ ತೆಗೆದು ಈ ಗ್ರೂಪ್‌ನಲ್ಲಿ ಅಪ್‌ಲೋಡ್ ಮಾಡಿದರೆ ಸಾಕು, ತಕ್ಷಣ ಅದು ಗ್ರೂಪ್‌ನಲ್ಲಿರುವ ಅಧಿಕಾರಿಗಳಿಗೆ ತಿಳಿಯುತ್ತದೆ ಎಂದು ಲೋಹಿತ್ ವಿವರಣೆ ನೀಡಿದ್ದಾರೆ.
ಅಧಿಕಾರಿ ಗ್ರೂಪ್‌ನಲ್ಲಿ ಇಲ್ಲದೇ ಇದ್ದರೆ ತಕ್ಷಣ ಅವರಿಗೆ ಮಾಹಿತಿ ನೀಡಲಾಗುವುದು. ಕೂಡಲೇ ಸಂಬಂಧಿಸಿದವರನ್ನು ಕಳುಹಿಸಿ ಸಮಸ್ಯೆ ಪರಿಹರಿಸಲಾಗುತ್ತದೆ. ಕಚೇರಿಗೆ ನಿರಂತರವಾಗಿ ದೂರವಾಣಿ ಕರೆ ಮಾಡಿ ವಿದ್ಯುತ್ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಿರುವ ಗ್ರಾಹಕರ ಪಟ್ಟಿ ಮಾಡಿ ಈ ಗ್ರೂಪ್ ಆರಂಭಿಸಲಾಗಿದೆ. (ಗ್ರೂಪ್ ನಂ : 9448869746)












Click it and Unblock the Notifications