ದುಷ್ಕರ್ಮಿಗಳಿಂದ ದಾಳಿ, ಮನೆ ಮಂದಿಯ ಮೇಲೆ ಮಾರಣಾಂತಿಕ ಹಲ್ಲೆ
ಮಂಗಳೂರು, ಸೆಪ್ಟಂಬರ್ 3: ತಡ ರಾತ್ರಿ ಲಾಂಗು ಮಚ್ಚುಗಳಿಂದ ದುಷ್ಕರ್ಮಿಗಳ ತಂಡ ಮನೆಯೊಂದರ ಮೇಲೆ ದಾಳಿ ನಡೆಸಿ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರು ಹೊರ ವಲಯದ ಉಳ್ಳಾಲ ದಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನ ಉಳ್ಳಾಲ ದರ್ಗಾ ಬಳಿಯ ಖಾಸಿಮ್ ಎಂಬವರ ಮನೆ ಮೇಲೆ ಕಳೆದ ತಡ ರಾತ್ರಿ ರೌಡಿಗಳನ್ನೊಳಗೊಂಡ 15 ಜನರ ತಂಡ ದಾಳಿ ನಡೆಸಿದೆ.

ಈ ಘಟನೆ ಯಲ್ಲಿ ಮನೆ ಮಾಲೀಕ ಖಾಸಿಮ್, ಪತ್ನಿ ಮೈಮುನಾ ಮಕ್ಕಳಾದ ಸೋಯಲ್, ಅಮಿನ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಖಾಸಿಮ್ ಅವರ ಮತ್ತೂರ್ವ ಮಗ ಹಂಝ್ ನನ್ನು ಕೊಲೆ ಮಾಡಲು ಬಂದಿದ್ದಾಗಿ ಹೇಳಿದ ಹಲ್ಲೆಕೋರರು , ಹಂಝ ಮನೆಯಲ್ಲಿ ಇಲ್ಲದ ಕಾರಣ ಮನೆಯಲ್ಲಿದ್ದ ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಹಂಝಾ ಎಲ್ಲಿ ಹೇಳು ಎನ್ನುತ್ತಲೇ ತಂಡ ಹಲ್ಲೆ ನಡೆಸಿ ಮನೆಯ ಕಿಟಕಿ, ಬಾಗಿಲುಗಳನ್ನು ಪುಡಿಗೈದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಗಾಯಾಗೊಂಡವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.













Click it and Unblock the Notifications