Aadi Swaroopa : ಏಕಕಾಲದಲ್ಲಿ ಎರಡೂ ಕೈಗಳಿಂದ ಬರೆಯಬಲ್ಲ ಮಂಗಳೂರಿನ ಬಾಲಕಿ ಆದಿ ಸ್ವರೂಪಾ!
ಮಂಗಳೂರಿನ ಬಾಲಕಿ ಆದಿ ಸ್ವರೂಪಾ ತನ್ನ ಎಡ ಹಾಗೂ ಬಲಗೈ ಎರಡರಿಂದಲೂ ಏಕಕಾಲದಲ್ಲಿ ಬರೆಯುವ ಸಾಮರ್ಥ್ಯವನ್ನು ಹೊಂದಿದ್ದಾಳೆ.
ಸಾಮಾನ್ಯವಾಗಿ ಬಲಗೈಯಿಂದ ಅಥವಾ ಎಡಗೈಯಿಂದ ಬರೆಯುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಬಾಲಕಿ ಏಕಕಾಲದಲ್ಲಿ ಎರಡೂ ಕೈಗಳಿಂದ ಬರೆಯುವ ಅಪರೂಪದ ಸಾಮಾರ್ಥ್ಯವನ್ನು ಹೊಂದಿದ್ದಾಳೆ.
ಮಂಗಳೂರಿನ 17 ವರ್ಷದ ಬಾಲಕಿ ಆದಿ ಸ್ವರೂಪಾ ತನ್ನ ಎರಡು ಕೈಗಳನ್ನು ಏಕಕಾಲದಲ್ಲಿ ಬಳಸಿಕೊಂಡು ಬೋರ್ಡ್ ಮೇಲೆ ಬರೆಯುವ ಕೌಶಲ್ಯವನ್ನು ಹೊಂದಿದ್ದಾಳೆ. ಅಂಬಿಡೆಕ್ಸ್ಟೆರಿಟಿ ಎಂದು ಕರೆಯಲ್ಪಡುವ ಈ ಅಪರೂಪದ ಪ್ರತಿಭೆ ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದಾಳೆ. ಈಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಿಂದಕ್ಕೆ ಬರೆಯುವುದು ಸೇರಿದಂತೆ 11 ವಿಧಗಳಲ್ಲಿ ಬರೆಯಬಲ್ಲಳು.

ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಏಕಕಾಲದಲ್ಲಿ ಬರೆಯುವಾಗ ಒಂದು ನಿಮಿಷದಲ್ಲಿ ಏಕಮುಖವಾಗಿ 45 ಪದಗಳನ್ನು ಬರೆಯುವ ಸಾಮರ್ಥ್ಯಕ್ಕಾಗಿ ಅವರು ಲತಾ ಫೌಂಡೇಶನ್‌ನ ವಿಶೇಷ ವಿಶ್ವ ದಾಖಲೆಯಿಂದ ಗುರುತಿಸಲ್ಪಟ್ಟಿದ್ದಾರೆ.
She is 'Aadi Swaroopa' from Mangalore. She can WRITE in 11 different style. Both Parts of her BRAIN functions at the Same Time, one in a million. Amazing!
— Ravi Karkara (@ravikarkara) February 5, 2023
This Skill is Known as Ambidexterityhttps://t.co/n3p0LtLksT pic.twitter.com/31g58QrDlb
ಒಂದು ನಿಮಿಷದಲ್ಲಿ ಎರಡೂ ಕೈಗಳನ್ನು ಬಳಸಿ ಅತಿ ಹೆಚ್ಚು ಪದಗಳನ್ನು ಬರೆಯುವ ಜಾಗತಿಕ ದಾಖಲೆಯನ್ನು ಬರೆದಿದ್ದಾರೆ. ಆದಿ ಸ್ವರೂಪಾ ತನ್ನ ಅದ್ಭುತ ದೃಶ್ಯ ಸ್ಮರಣಶಕ್ತಿಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕೂಡ ಸ್ಥಾನ ಪಡೆದಿದ್ದಾಳೆ.

ಆಕೆಯ ಅಸಾಮಾನ್ಯತೆಯನ್ನು ಇತ್ತೀಚೆಗೆ ಟೆಕ್ ಉತ್ಸಾಹಿ ರವಿ ಕರ್ಕರ ಅವರು ಹಂಚಿಕೊಂಡಿದ್ದಾರೆ. ವಿಡಿಯೋ ಸಮೇತ ಟ್ವೀಟ್ ಮಾಡಿರುವ ಅವರು, "ಈಕೆ ಮಂಗಳೂರಿನ 'ಆದಿ ಸ್ವರೂಪಾ'. ಅವಳು 11 ವಿಭಿನ್ನ ಶೈಲಿಗಳಲ್ಲಿ ಬರೆಯಬಲ್ಲಳು. ಅವಳ ಮೆದುಳು ಎರಡೂ ಕೈಗಳನ್ನು ಒಂದೇ ಸಮಯದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇಂತವರು ಮಿಲಿಯನ್‌ನಲ್ಲಿ ಒಬ್ಬರು. ಈ ಅದ್ಭುತ ಕೌಶಲ್ಯವನ್ನು ಅಂಬಿಡೆಕ್ಸ್ಟೆರಿಟಿ (Ambidexterity) ಎಂದು ಕರೆಯಲಾಗುತ್ತದೆ'' ಎಂದು ಬರೆದಿದ್ದಾರೆ.












Click it and Unblock the Notifications