ನನ್ನ ಕೊಲೆಗೆ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ: ಪ್ರೊ.ನರೇಂದ್ರ ನಾಯಕ್
ಮಂಗಳೂರು, ಆಗಸ್ಟ್ 01: ಮಂಗಳೂರಿನ ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಹತ್ಯೆಗೆ ಸ್ಕೆಚ್ ಹಾಕಿರುವ ಬಗ್ಗೆ ಎಸ್‌ಐಟಿಯಿಂದ ಬಹಿರಂಗೊಂಡಿದೆ. ಇತ್ತೀಚೆಗೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಇದು ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರೊ. ನರೇಂದ್ರ ನಾಯಕ್ ಅವರ ಭದ್ರತೆ ಹೆಚ್ಚಿಸಲಾಗಿದೆ.
ತಮ್ಮ ಹತ್ಯೆಗೆ ಸ್ಕೆಚ್ ಹಾಕಲಾಗಿದ್ದ ವಿಚಾರ ಬಹಿರಂಗವಾದ ಹಿನ್ನೆಲೆಯಲ್ಲಿ ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರೊ.ನರೇಂದ್ರ ನಾಯಕ್ ' ನನ್ನನ್ನು ಕೊಲೆ ಮಾಡಲು ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ನನ್ನ ಧ್ವನಿ ಅಡಗಿಸಲು, ನನ್ನನ್ನು ಸೈಲೆಂಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ನಾನು ಸೈಲೆಂಟ್ ಆಗಬೇಕಾದರೆ ನನ್ನ ಹೆಣ ಮಲಗಬೇಕಷ್ಟೇ. ಒಂದು ವೇಳೆ ನನ್ನ ನಾಲಗೆ ಕತ್ತರಿಸಿದರೆ ಕೈಯಿಂದ ಬರೆಯುತ್ತೇನೆ. ನನ್ನ ಕೈ ಕತ್ತರಿಸಿದರೆ ಕಾಲಿನಿಂದ ಬರೆಯುತ್ತೇನೆ. ಆದರೆ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ನಾನು ಓಪನ್ ಚಾಲೆಂಜ್ ಹಾಕ್ತೇನೆ ಎಂದು ಅವರು ಕಿಡಿಕಾರಿದರು.

ನನ್ನ ಗೆಳೆಯರಾಗಿದ್ದ ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್, ಎಂ ಎಂ ಕಲ್ಬುರ್ಗಿ, ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಲಾಯ್ತು . ಅದಕ್ಕೆಲ್ಲ ಹೆದರಿ ಕುಳಿತು ಕೊಳ್ಳುವ ಜಾಯಮಾನ ನನ್ನ ದಲ್ಲ. ಏನೇ ಆದರೂ ಅನ್ಯಾಯದ ವಿರುದ್ಧ ನನ್ನ ಧ್ವನಿ ಅಡಗುವುದಿಲ್ಲ ಎಂದು ಅವರು ತಿಳಿಸಿದರು.












Click it and Unblock the Notifications