'ಕಾಂಗ್ರೆಸ್ ಮುಖಂಡರು ಮರಳು ಮಾಫಿಯಾ ಜೊತೆ ಸೇರಿ ಹಣ ಮಾಡಿದ್ದಾರೆ'

ಮಂಗಳೂರು, ಅಕ್ಟೋಬರ್. 26: ಕಾಂಗ್ರೆಸ್ ಮುಖಂಡರು ಮರಳು ಮಾಫಿಯಾದವರೊಂದಿಗೆ ಸೇರಿ ಹಣ ಮಾಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರಳು ಕ್ಷಾಮ ಸೃಷ್ಟಿಯ ಹಿಂದೆ ಮರಳು ಮಾಫಿಯಾ ಕೈವಾಡವಿದೆ. ಈ ಜಿಲ್ಲೆಯಲ್ಲಿ ಮರಳು ನೀತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಮರಳು ಮಫಿಯಾ ದಕ್ಷಿಣಕನ್ನಡ ಜಿಲ್ಲಾಡಳಿತವನ್ನು ನಿಯಂತ್ರಿಸುತ್ತಿದೆ.

ಮರಳು ಅಭಾವದ ಬಗ್ಗೆ ರಾಜ್ಯ ಸರ್ಕಾರ ಇನ್ನೂ ತಲೆಕೆಡಿಸಿಕೊಂಡಿಲ್ಲ. ಕರಾವಳಿಯಾದ್ಯಂತ ಮರಳು ಕ್ಷಾಮ ತಲೆದೋರಿದ್ದು, ಜನಸಾಮಾನ್ಯರ ಮನೆ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ಮೊಟಕುಗೊಂಡಿವೆ. ಅದಲ್ಲದೇ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ.ರಾಜ್ಯ ಸರ್ಕಾರ ತಕ್ಷಣ ಮರಳು ಅಭಾವಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ನಳಿನ ಕುಮಾರ್ ಕಟೀಲ್ ಒತ್ತಾಯಿಸಿದರು.

Nalin Kumar Kateel says sand mafia controlling DK administration

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿಯೂ ಭ್ರಷ್ಟಾಚಾರದ ನಡೆದಿದೆ ಎಂದು ಆರೋಪಿಸಿರುವ ನಳಿನ್ ಕುಮಾರ್ ಕಟೀಲ್, ಸಭೆ ನಡೆಸದೆ ತರಾತುರಿಯಲ್ಲಿ ಯೋಜನೆಗಳ ಪ್ರಕಟ ಮಾಡಲಾಗಿದ್ದು, ಮೂರು ಯೋಜನೆಗಳಿಗೆ ತರಾತುರಿಯಲ್ಲಿ ಅನುಮೋದನೆ ನೀಡಲಾಗಿದೆ.

ಎ ಬಿ ಶೆಟ್ಟಿ ಸರ್ಕಲ್ ನಿಂದ ನೆಹರೂ ಮೈದಾನದ ರಸ್ತೆ , ಕ್ಲಾಕ್ ಟವರ್ ನಿರ್ಮಾಣ , ಬಸ್ ಸ್ಟ್ಯಾಂಡ್ ನಿರ್ಮಾಣ ಯೋಜನೆಯಲ್ಲಿ ಅವ್ಯವಹಾರ ನಡೆಸಲಾಗಿದೆ. ಸಭೆಯಲ್ಲಿ ಈ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡದೆ ಕೋಟಿ ಕೋಟಿ ರೂ.ಅನುದಾನ ಒದಗಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಿದ್ಧತೆ ನಡೆಸಿರುವುದಾಗಿ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+