ಮಂಗಳೂರು ಪಾಲಿಕೆ ಚುನಾವಣೆ; ನಳಿನ್ ಕುಮಾರ್ ಅಬ್ಬರದ ಪ್ರಚಾರ
ಮಂಗಳೂರು, ನವೆಂಬರ್ 7: ನ.12 ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಮಂಗಳೂರು ಪಾಲಿಕೆ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಸುರತ್ಕಲ್ ಪ್ರದೇಶದಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ, ಅಭೂತಪೂರ್ವ ಯಶಸ್ಸು ಕಾಣುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮನೆಮನೆಗೆ ತೆರಳಿ ಮತ ಯಾಚನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ನಳಿನ್ ಕುಮಾರ್, "ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅವರದ್ದೇ ನಾಯಕರೊಬ್ಬರು ಹಿಂದೆ ಸಿದ್ದರಾಮಯ್ಯ ಬಂದಾಗ ಹತ್ತು ಸೀಟ್ ಹೋಗಿದೆ ಅಂತ ಹೇಳಿದ್ರು. ಈ ಬಾರಿ ಇಪ್ಪತ್ತು ಸೀಟ್ ಹೋಗೋದು ಖಚಿತ. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಶನಿ ಎಂದು ನಾವ್ ಹೇಳಲ್ಲ, ಅವ್ರದ್ದೇ ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ" ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಉತ್ತರ ಶಾಸಕ ಭರತ್ ಶೆಟ್ಟಿ , ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಳಿನ್ ಕುಮಾರ್ ಗೆ ಸಾಥ್ ನೀಡಿದರು.












Click it and Unblock the Notifications