ಮಂಗಳೂರು; ರಸ್ತೆಯಲ್ಲಿ ಸ್ಟಂಟ್‌, ಲೈಸೆನ್ಸ್‌ ರದ್ದು ಮಾಡಲು ಪತ್ರ

ಮಂಗಳೂರು, ಮಾರ್ಚ್ 12; ಮಂಗಳೂರಿನ ಬ್ಯುಸಿ ರಸ್ತೆಯಲ್ಲಿ ಸ್ಟಂಟ್ ಮಾಡಿ ಹೀರೋ ಆಗೋಕೆ ಹೋದ 8 ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿದ ಪೋಲಿ ಹುಡುಗರನ್ನು ಪೊಲೀಸರು ಹಿಡಿದಿದ್ದಾರೆ. ಅಲ್ಲದೇ ಜೀವನ ಪರ್ಯಂತವಾಗಿ ಇವರಿಗೆ ಡ್ರೈವಿಂಗ್ ಲೈಸೆನ್ಸ್ ದೊರಕದಂತೇ ಕ್ರಮ ಕೈಗೊಳ್ಳಲು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆರ್‌ಟಿಒ ಗೆ ಪತ್ರ ಬರೆದಿದ್ದಾರೆ.

ಸದಾ ವಾಹನಗಳ ಸಂಚಾರದಿಂದ ಬ್ಯುಸಿಯಾಗುವ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಾ, ಮತ್ತೊಬ್ಬರ ಜೀವಕ್ಕೆ ಅಪಾಯವಾಗುವಂತೆ ಸ್ಟಂಟ್ ಮಾಡಿದ ಎಂಟು ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರತ್ಯೇಕ ನಾಲ್ಕು ಪ್ರಕರಣಗಳು ದಾಖಲಾಗಿದೆ. ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಂಟು ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿ ಒರ್ವ ಅಪ್ರಾಪ್ತ. ವಶಕ್ಕೆ ಪಡೆದ ಯುವಕರನ್ನು ಅಬೂಬಕ್ಕರ್ ಸಿದ್ಧಿಕ್, ತೌಸಿಫ್ ಅಹಮ್ಮದ್, ಮಹಮ್ಮದ್ ಸಫ್ವಾನ್, ಮಹಮ್ಮದ್ ಅನೀಸ್, ಮಹಮ್ಮದ್ ಸೊಹಾಲಿ, ಇಲಿಯಾಸ್ ಮತ್ತು ಕಿಶನ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ 5 ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Motorcycle Stunts On Busy Road Letter To RTO For DL Cancel

ಈ ಯುವಕರು ಬೈಕ್ ಸ್ಟಂಟ್ ಮಾಡಿ ಆ ವಿಡಿಯೋ ಗಳನ್ನು ಸ್ಟಂಟ್ ವಾಟ್ಸಪ್ ಗ್ರೂಪ್ ಮಾಡಿ ಅದರಲ್ಲಿ ಹಂಚಿಕೊಳ್ಳುತ್ತಿದ್ದರು. ಇನ್ ಸ್ಟಾಗ್ರಾಂ ನಲ್ಲಿ ಸ್ಟಂಟ್ ವಿಡಿಯೋ ಮಾಡಿ ಅತೀ ಹೆಚ್ಚು ಲೈಕ್ಸ್ ಮತ್ತು ವೀವ್ಸ್ ಗಳಿಸುವ ಹುಚ್ಚು ಗೀಳನ್ನು ಹೊಂದಿದ್ದರು. ಈ ಯುವಕರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ವಿಡಿಯೋವನ್ನು ಗಮನಿಸಿ ಪೊಲೀಸರು ಸ್ವಯಂಪ್ರೇರಿತ ವಾಗಿ ಪ್ರಕರಣ ದಾಖಲಿಸಿದ್ದಾರೆ.

ಸಿಸಿ ಕ್ಯಾಮೆರಾಗಳ ಸಹಾಯದಿಂದ ಆರೋಪಿಗಳ ಸ್ಟಂಟ್ ವಿಡಿಯೋ ಆಧಾರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಆರೋಪಿ ಇಲಿಯಾಸ್ ಎಂಬಾತ ಮಗಳೂರು ನಗರ ಹೊರವಲಯದ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲಬೈಲ್ ವರೆಗೆ ಸ್ಟಂಟ್ ಮಾಡಿದ್ದಾನೆ. ಇಬ್ಬರು ಸಹಸವಾರರು ಸೇರಿದಂತೆ ಒಟ್ಟು ಮೂರು ಮಂದಿ ಹೆಲ್ಮೆಟ್ ರಹಿತವಾಗಿ ಒಂದೇ ಬೈಕ್ ನಲ್ಲಿ ಅತೀ ವೇಗವಾಗಿ ಚಲಿಸಿ ಸ್ಟಂಟ್ ಮಾಡಿದ್ದಾರೆ. ಇತರ ವಾಹನಗಳಿಗೆ, ರಸ್ತೆ ದಾಟುತ್ತಿದ್ದ ಪಾದಾಚಾರಿಗಳಿಗೆ ಅಪಾಯವಾಗುವಂತೆ ಸ್ಟಂಟ್ ಮಾಡಿದ್ದಾರೆ.

ಈ ಸ್ಟಂಟ್ ವಿಡಿಯೋವನ್ನು ಹಿಂಬಂದಿ ಬೈಕ್ ಚಲಾಯಿಸುತ್ತಿದ್ದ ಆತನ ಗೆಳೆಯ ಮೊಬೈಲ್ನಲ್ಲಿ ಶೂಟ್ ಮಾಡಿದ್ದಾನೆ. ಈ ಸ್ಟಂಟ್ ವಿಡಿಯೋವನ್ನು ಇಲಿಯಾಸ್ ತನ್ನ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಾಕಿದ್ದಾನೆ. ಇಲಿಯಾಸ್ ಜೊತೆಗೆ ವಿಡಿಯೋ ಮಾಡಿದವನು ಮತ್ತು ಆ ಬೈಕ್ ಮಾಲೀಕನ ಮೇಲೆಯೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ಈ ಯುವಕರು ಮತ್ತೊಬ್ಬರ ಜೀವಕ್ಕೆ ಅಪಾಯವಾಗುವಂತೆ ಸ್ಟಂಟ್ ಮಾಡಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ. ಅಲ್ಲದೇ ಇವರು ಶಾಶ್ವತವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯದಂತೆ ಮಾಡಲು ಆರ್‌ಟಿಒಗೆ ಪತ್ರ ಬರೆಯುತ್ತೇನೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+