Get Updates
Get notified of breaking news, exclusive insights, and must-see stories!

ಮೂಡಬಿದಿರೆ; ಭಾವೈಕ್ಯತೆಯ ಸಂದೇಶ ಸಾರಿದ ಪುಟ್ಟ ಆ್ಯಂಬುಲೆನ್ಸ್‌ನ ಮಹಾಯಾನ

ಮಂಗಳೂರು, ಸೆಪ್ಟೆಂಬರ್‌, 19: ಮೂಡಬಿದಿರೆಯ ಮಾಸ್ತಿಕಟ್ಟೆಯ ಅಡಿಕೆ ಗೋದಾಮಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಯುವಕನೊಬ್ಬ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದ. ತಲೆಗೆ ಗಂಭೀರ ಏಟು ಬಿದ್ದ ಪರಿಣಾಮ ಯುವಕ ತೀವ್ರವಾಗಿ ಗಾಯಗೊಂಡಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ಮಂಗಳೂರಿನಿಂದ ಉತ್ತರ ಪ್ರದೇಶದ ಮೊರಾದಾಬಾದ್‌ಗೆ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿದ್ದಾರೆ.

ಹತ್ತಿರದಲ್ಲಿರುವ ಆಸ್ಪತ್ರೆಗಳಿಗೆ ರೋಗಿಯನ್ನು ದಾಖಲಿಸುವುದು, ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವುದು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಆದರೆ ಮಂಗಳೂರಿನ ಮೂಡಬಿದಿರೆಯಿಂದ ಉತ್ತರ ಪ್ರದೇಶದ ಮೊರದಾಬಾದ್​ಗೆ ಸುಮಾರು 2,700 ಕಿಲೋ ಮೀಟರ್‌ ದೂರದವರೆಗೆ ರೋಗಿಯನ್ನು ಆ್ಯಂಬುಲೆನ್ಸ್ ಮೂಲಕ ಸ್ಥಳಾಂತರ ಮಾಡಿದ್ದು, ಅಪರೂಪದ ಸಾಧನೆ ಆಗಿದೆ.

ಉತ್ತರ ಪ್ರದೇಶದ ಮೊರದಾಬಾದ್ ನಿವಾಸಿಯಾದ ಮಹಾಂದಿ ಹಸನ್ ಎಂಬುವರು ಮೂಡಬಿದಿರೆಯ ಮಾಸ್ತಿಕಟ್ಟೆಯ ಅಡಿಕೆ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುವ ವೇಳೆ ಬಿದ್ದು ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನರಾಗಿ ಮೂಡಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಕುಟುಂಬ ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ನೆಲೆಸಿದ್ದು, ಆಸ್ಪತ್ರೆ ವೈದ್ಯರ ಒಪ್ಪಿಗೆ ಪಡೆದು ಮೊರದಾಬಾದ್​ಗೆ ಸ್ಥಳಾಂತರಿಸಲು ನಿರ್ಧರಿಸಿದ್ದರು.

ಅದರಂತೆ ಶುಕ್ರವಾರ ಸಂಜೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಹೋಗಲು ನಿರ್ಧರಿಸಲಾಗಿತ್ತು. ಮಹಾಂದಿ ಹಸನ್ ಅವರ ತಂದೆ ಮೂಡಬಿದಿರೆಯ ಐರಾವತ ಆಂಬ್ಯುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ ಅವರನ್ನು ಆಸ್ಪತ್ರೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿಸುವಂತೆ ಕೋರಿಕೊಂಡಿದ್ದರು. ಆ್ಯಂಬುಲೆನ್ಸ್‌ನ ಚಾಲಕ ಅಶ್ವತ್ಥ್ ಶುಕ್ರವಾರ ರೋಗಿಯನ್ನು ವಿಮಾನ ನಿಲ್ದಾಣಕ್ಕೆ ಕೊಂಡೊಯ್ದಿದ್ದರು.

ಈ ವೇಳೆ ವಿಮಾನಯಾನ ಸಂಸ್ಥೆ ವೈದ್ಯರು ಮತ್ತು ದಾದಿಯರಿಲ್ಲದೆ ವಿಮಾನದಲ್ಲಿ ಕೊಂಡೊಯ್ಯಲು ನಿರಾಕರಿಸಿತು. ಬಳಿಕ ರೋಗಿಯನ್ನು ಮೂಡಬಿದಿರೆಯ ಆಸ್ಪತ್ರೆಗೆ ಮತ್ತೆ ದಾಖಲಿಸಲಾಯಿತು. ರೋಗಿ ಮೆಹಂದಿ ಹಸನ್ ತಂದೆ ಬಬ್ಬು ಶನಿವಾರ ಬೆಳಗ್ಗೆ ಅನಿಲ್ ರೂಬನ್ ಮೆಂಡೋನ್ಸಾ ಅವರಿಗೆ ಫೋನ್ ಮಾಡಿ, ಆಂಬ್ಯುಲೆನ್ಸ್​ನಲ್ಲಿ ಮೊರದಾಬಾದ್​ಗೆ ತಲುಪಿಸಲು ಕೋರಿದ್ದರು. ಬಳಿಕ ಆ್ಯಂಬುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ ಅವರು ಪೊಲೀಸರಿಗೆ ಮಾಹಿತಿ ನೀಡಿ, ಮೂಡಬಿದಿರೆಯಿಂದ ಮೊರದಾಬಾದ್​ಗೆ ರೋಗಿಯ ಹಸ್ತಾಂತರಕ್ಕೆ ಒಪ್ಪಿದ್ದಾರೆ.

ಸೆ.12ರಂದು ಮೊರದಾಬಾದ್ ತಲುಪಿದ ಆ್ಯಂಬುಲೆನ್ಸ್

ಸೆ.12ರಂದು ಮೊರದಾಬಾದ್ ತಲುಪಿದ ಆ್ಯಂಬುಲೆನ್ಸ್

ಅಶ್ವತ್ಥ್​ ಅವರೊಂದಿಗೆ ಅನಿಲ್ ರೂಬನ್ ಮೆಂಡೋನ್ಸಾ ಕುಳಿತು ರೋಗಿ ಮಹಾಂದಿ ಹಸ್ಸನ್ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಕೊಂಡೊಯ್ದರು. ಈ ಸಂದರ್ಭದಲ್ಲಿ ಮಹಾಂದಿ ಹಸನ್ ಅವರ ತಂದೆ ಮತ್ತು ಸ್ನೇಹಿತರು ಜೊತೆಗಿದ್ದರು. ಸೆಪ್ಟೆಂಬರ್‌ 10ರಂದು ಮೂಡಬಿದಿರೆಯಿಂದ ಹೊರಟ ಆ್ಯಂಬುಲೆನ್ಸ್ ಸೋಮವಾರ ಸೆಪ್ಟೆಂಬರ್‌ 12ರ ಬೆಳಗ್ಗೆ ಮೊರದಾಬಾದ್ ತಲುಪಿದೆ.

ಗಂಟೆಗೆ 120 ಕೀಲೋ ಮೀಟರ್‌ ವೇಗದಲ್ಲಿ ಚಾಲನೆ

ಗಂಟೆಗೆ 120 ಕೀಲೋ ಮೀಟರ್‌ ವೇಗದಲ್ಲಿ ಚಾಲನೆ

41 ಗಂಟೆಗಳಲ್ಲಿ ಈ ಆ್ಯಂಬುಲೆನ್ಸ್ ಗುರಿ ಮುಟ್ಟಿದ್ದು, ಹೈವೇಗಳಲ್ಲಿ ಗಂಟೆಗೆ 120 ಕೀಲೋ ಮೀಟರ್‌ ವೇಗದಲ್ಲಿ ಚಲಿಸಿದೆ. ಈ ಬಗ್ಗೆ ಮಾತನಾಡಿದ ಆ್ಯಂಬುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ ಅವರು, ಮೂಡಬಿದಿರೆಯಿಂದ ಮೊರದಾಬಾದ್​ಗೆ ತಲುಪಿಸುವಂತೆ ಮಹಾಂದಿ ಹಸನ್ ಅವರ ತಂದೆಯ ಒತ್ತಾಯಕ್ಕೆ ಮಣಿದು ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆಸ್ಪತ್ರೆ ವೈದ್ಯರು ನಿಮ್ಮ ರಿಸ್ಕ್​​ನಲ್ಲಿ ಕೊಂಡೊಯ್ಯಬಹುದೆಂದು ತಿಳಿಸಿದ್ದರು. ಸುಮಾರು 2,700 ಕಿಲೋ ಮೀಟರ್‌ ದೂರ ಹೋಗಿ ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇವೆ. ಡೀಸೆಲ್ ಹಾಕಲು ನಿಲ್ಲಿಸಿದ್ದು ಬಿಟ್ಟರೆ ಎಲ್ಲಿಯೂ ವಿಶ್ರಾಂತಿ ಪಡೆಯದೆ ನಿರಂತರವಾಗಿ ಚಲಿಸಿ ಗುರಿ ‌ಮುಟ್ಟಿದ್ದಾರೆ. ಚಾಲಕ ಸೇರಿದಂತೆ ಯಾರು ಊಟ, ತಿಂಡಿಗೂ ವಾಹನವನ್ನು ನಿಲ್ಲಿಸಿಲ್ಲ.

ಚಾಲಕನಿಗೆ ಅಭಿನಂದನೆಗಳ ಮಹಾಪೂರ

ಚಾಲಕನಿಗೆ ಅಭಿನಂದನೆಗಳ ಮಹಾಪೂರ

ರೋಗಿಗೆ ಮೂರು ಗಂಟೆಗೊಮ್ಮೆ ದ್ರವ ಆಹಾರ ನೀಡಬೇಕಿದ್ದು, ಈ ಸಂದರ್ಭದಲ್ಲಿ ವಾಹನ ಚಾಲಕ ಹತ್ತಿರದಲ್ಲಿ ಸಿಗುವ ಜ್ಯೂಸ್ ಕುಡಿದು ವಾಹನ ಚಾಲನೆಗೆ ಸಜ್ಜಾಗುತ್ತಿದ್ದರು. ನಾವು ಮೊರದಾಬಾದ್ ತಲುಪಿದಾಗ ನೀವು ವೈದ್ಯರಿಲ್ಲದೆ ಇಷ್ಟು ದೂರ ಹೇಗೆ ಬಂದಿದ್ದೀರಿ ಎಂದು ಅಲ್ಲಿನ ವೈದ್ಯರು ಆಶ್ಚರ್ಯ ಚಕಿತರಾದರು. ಈ ರೋಗಿ ಕುಟುಂಬ ಸಂಪರ್ಕದಲ್ಲಿದ್ದು, ಇದೀಗ ಆತನಿಗೆ ಪ್ರಜ್ಞೆ ಬಂದು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ ಎಂದು ಹೇಳಿದರು. ಮಧ್ಯಪ್ರದೇಶದಲ್ಲಿ ಆ್ಯಂಬುಲೆನ್ಸ್ ಹೋಗುತ್ತಿದ್ದ ವೇಳೆ ರೋಗಿಗೆ ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿತ್ತು. ಸಣ್ಣ ಮಟ್ಟಿಗೆ ಆರೋಗ್ಯ ಚಿಕಿತ್ಸೆ ಕಲಿತಿದ್ದ ಮೆಂಡೋನ್ಸಾ ಅವರು ಆಕ್ಸಿಜನ್ ಪ್ರಮಾಣ ಹೆಚ್ಚು ಮಾಡಿ ಸರಿಪಡಿಸಿದ್ದರು.

​ಮಾರ್ಗದರ್ಶಕನಾಗಿದ್ದ ಆ್ಯಂಬುಲೆನ್ಸ್ ಮಾಲಿಕ

​ಮಾರ್ಗದರ್ಶಕನಾಗಿದ್ದ ಆ್ಯಂಬುಲೆನ್ಸ್ ಮಾಲಿಕ

ಚಾಲಕ ಅಶ್ವತ್ಥ್​ ಅವರು ವಾಹನ ಚಲಾಯಿಸಿದರೆ, ಅನಿಲ್ ಅವರು ರೋಗಿಯನ್ನು ಉಪಚರಿಸಿ ಗೂಗಲ್ ಮ್ಯಾಪ್ ಮೂಲಕ ರಸ್ತೆಯ ಮಾರ್ಗವನ್ನು ತೋರಿಸುತ್ತಿದ್ದರು. ಒಟ್ಟಿನಲ್ಲಿ ಆ್ಯಂಬುಲೆನ್ಸ್ ಮೂಲಕ ರೋಗಿಯನ್ನು 2,700 ಕಿಲೋ ಮಿಟರ್ ದೂರಕ್ಕೆ ಸ್ಥಳಾಂತರಿಸುವ ಪ್ರಯತ್ನದಲ್ಲಿ ಯಶಸ್ವಿ ಆಗಿದ್ದಾರೆ. ಮೂಡಬಿದಿರೆಯಿಂದ‌ ಮೊರಾದಾಬಾದ್‌ಗೆ ಇಂಧನ ವೆಚ್ಚವೇ 49 ಸಾವಿರ ಆಗಿದ್ದು, ರೋಗಿಯ ಕುಟುಂಬ ನೀಡಿದ ಸ್ವಲ್ಪ ಹಣ ಪಡೆದು ಹಿಂದುರುಗಿದ್ದಾರೆ. ಹೀಗೆ ಚಿಕ್ಕ ಆ್ಯಂಬುಲೆನ್ಸ್‌ನ ಮಹಾಯಾನ ಭಾವೈಕ್ಯತೆಗೂ ಸಾಕ್ಷಿ ಆಗಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಅನಿಲ್ ಎಂಬುವವರ ಅಂಬುಲೆನ್ಸ್‌ನಲ್ಲಿ ಅಶ್ವತ್ಥ್‌ ಎಂಬ ಹಿಂದೂ ಡ್ರೈವರ್ ಹಸನ್ ಎಂಬ ಮುಸ್ಲಿಂ ರೋಗಿಯನ್ನು 2,700 ಕೀಲೋ ಮೀಟರ್‌ ದೂರ ತೆಗೆದುಕೊಂಡು ಹೋಗಿದ್ದು ಭಾವೈಕ್ಯತೆಯನ್ನು ಸಾರಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+