ತಳ್ಳಾಡಿ- ಶರ್ಟಿನ ಗುಂಡಿ ಕಿತ್ತು, ಸ್ವಕ್ಷೇತ್ರದಲ್ಲೇ ಖಾದರ್ ಗೆ ಅವಮಾನ
Recommended Video

ಮಂಗಳೂರು, ಅಕ್ಟೋಬರ್ 6: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿ ಖಾದರ್ ಅವರಿಗೆ ತಮ್ಮ ಸ್ವ ಕ್ಷೇತ್ರದಲ್ಲಿಯೇ ಜನರು ಬಹಿಷ್ಕಾರ ಹಾಕಿ, ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ. ಉಳ್ಳಾಲದಲ್ಲಿ ಈಚೆಗೆ ಕೊಲೆಯಾದ ಜುಬೇರ್ ಮನೆಗೆ ಭೇಟಿ ನೀಡಲು ಸಚಿವ ಯು.ಟಿ. ಖಾದರ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಉಳ್ಳಾಲದ ಮುಕ್ಕಚ್ಚೇರಿಯ ಕಿಲೇರಿಯಾ ನಗರ ಎಂಬಲ್ಲಿರುವ ಜುಬೇರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವ ಯು.ಟಿ.ಖಾದರ್ ಶುಕ್ರವಾರ ಸಂಜೆ ತೆರಳಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯರು ಸಚಿವ ಯು.ಟಿ ಖಾದರ್ ಅವರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದರು. ಜುಬೇರ್ ಅಂತ್ಯಸಂಸ್ಕಾರಕ್ಕೂ ಬಾರದ ಸಚಿವ ಯು.ಟಿ.ಖಾದರ್ ಈಗ ಮನೆಗೆ ಭೇಟಿ ನೀಡಲು ಬಂದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳೀಯರಿಗೂ ಹಾಗೂ ಯು.ಟಿ ಖಾದರ್ ಬೆಂಬಲಿಗರಿಗೂ ಮಾತಿನ ಚಕಮಕಿ ನಡೆದು, ಘರ್ಷಣೆ ನಡೆಯಿತು.
ಉದ್ರಿಕ್ತರಲ್ಲಿ ಕೆಲವರು ಖಾದರ್ ಅವರನ್ನು ತಳ್ಳಿ, ಶರ್ಟಿನ ಗುಂಡಿಗಳನ್ನೂ ಕಿತ್ತು ಹಾಕಿದರು. ಸಚಿವರ ಕಾರಿಗೆ ಉದ್ರಿಕ್ತರು ಕಲ್ಲೆಸೆಯಲು ಮುಂದಾದಾಗ ಪೊಲೀಸರ ರಕ್ಷಣೆಯಲ್ಲಿ ಖಾದರ್ ಸ್ಥಳದಿಂದ ಹೊರಟರು.












Click it and Unblock the Notifications