ಸಮುದ್ರಕ್ಕೆ ಹಾರಿದ ಪ್ರೇಯಸಿಯ ರಕ್ಷಣೆಗಾಗಿ ಜಿಗಿದ ಪ್ರೇಮಿ-ಪ್ರೇಯಸಿ ಬಚಾವ್, ಪ್ರೇಮಿ ಸಾವು

ಮಂಗಳೂರು, ಜ.29: ಪ್ರೇಯಸಿಯನ್ನು ರಕ್ಷಣೆ ಮಾಡಲು ಸಮುದ್ರಕ್ಕೆ ಹಾರಿದ ಪ್ರೇಮಿ ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರು ನಗರ ಹೊರವಲಯದ ಸೋಮೇಶ್ವರದಲ್ಲಿ ನಡೆದಿದೆ.‌

ಮಂಗಳೂರಿನ ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜಾ ಮೃತ ಯುವಕ. ಲಾಯ್ಡ್ ಡಿಸೋಜಾ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದು, ವಿಷಯ ಇಬ್ಬರಿಗೆ ಗೊತ್ತಾದಾಗ ಮಾತುಕತೆಗೆಂದು ಸೋಮೇಶ್ವರ ಕಡಲ ತೀರಕ್ಕೆ ಅಹ್ವಾನಿಸಿದ್ದಾನೆ. ಈ ವೇಳೆ ಇಬ್ಬರಲ್ಲಿ ಒಬ್ಬಳು ಬೇಸರದಿಂದ ಸಮುದ್ರಕ್ಕೆ ಹಾರಿದ್ದು, ಆಕೆಯನ್ನು ರಕ್ಷಣೆ ಮಾಡಲು ಲಾಯ್ಡ್ ಸಮುದ್ರಕ್ಕೆ ಹಾರಿದ್ದಾನೆ. ಆದರೆ ಯುವತಿ ರಕ್ಷಣೆಗೊಳಗಾಗಿದ್ದು,ಲಾಯ್ಡ್ ಮಾತ್ರ ದಾರುಣ ಸಾವು ಕಂಡಿದ್ದಾನೆ.

ಲಾಯ್ಡ್ ಈ ಹಿಂದೆ ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದ. ಲಾಕ್‌ಡೌನ್ ಹಿನ್ನಲೆ ಕಳೆದ ಒಂದು ವರ್ಷದ ಹಿಂದೆ ಊರಿಗೆ ಆಗಮಿಸಿದ್ದರು. ಮತ್ತೆ ವಿದೇಶಕ್ಕೆ ಹೋಗುವ ಯೋಚನೆಯಲ್ಲೂ ಇದ್ದರು. ಈ ನಡುವೆ ಲಾಯ್ಡ್ಗೆ ಕೋಟೆಕಾರ್ ನಿವಾಸಿ ಅಶ್ವಿತಾ ಫೆರಾವೋ ಎಂಬಾಕೆಯ ಪರಿಚಯವಾಗಿದ್ದು, ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಇಬ್ಬರು ಪ್ರೀತಿಯಲ್ಲಿರುವಾಗಲೇ ಲಾಯ್ಡಗೆ ಮತ್ತೊಬ್ಬಾಕೆಯ ಜೊತೆ ಸ್ನೇಹವಾಗಿದೆ. ಚೆಂಬುಗುಡ್ಡೆಯ ನಿವಾಸಿ ಡ್ಯಾಕ್ಲಿನ್ ವೇಗಸ್ ಎಂಬಾಕೆಯನ್ನೂ ಲಾಯ್ಡ್ ಪ್ರೀತಿಸೋಕೆ ಆರಂಭಿಸಿದ್ದಾನೆ.

Mangaluru: Youth Dies While Trying to Save Girlfriend From Drowning at Someshwara Beach
ಹಲವು ತಿಂಗಳ ಕಾಲ ಲಾಯ್ಡ್ ಇಬ್ಬರಲ್ಲೂ ಪ್ರೀತಿ ವಿಚಾರ ಗೊತ್ತಾಗದಂತೇ ಗೌಪ್ಯವಾಗಿ ಇಟ್ಟಿದ್ದ. ಆದರೆ ಕಳೆದ ಒಂದು ವಾರದ ಹಿಂದೆ ಅಶ್ವಿತಾ ಮತ್ತು ಡ್ಯಾಕ್ಲಿನ್ ಇಬ್ಬರಿಗೂ ಲಾಯ್ಡನ ಈ ತ್ರಿಕೋನ ಪ್ರೀತಿ ವಿಚಾರ ಗೊತ್ತಾಗಿದೆ. ಪ್ರತಿದಿನ ಮೂವರಲ್ಲೂ ಈ ಬಗ್ಗೆ ಗಲಾಟೆಯಾಗುತ್ತಿದ್ದು, ಮಾತುಕತೆಗೆಂದು ಶುಕ್ರವಾರ ಸಂಜೆ ಲಾಯ್ಡ್ ಇಬ್ಬರನ್ನೂ ಸೋಮೇಶ್ವರ ಕಡಲ ಕಿನಾರೆಗೆ ಅಹ್ವಾನಿಸಿದ್ದಾನೆ.

Mangaluru: Youth Dies While Trying to Save Girlfriend From Drowning at Someshwara Beach
ಮಾತುಕತೆಯ ವೇಳೆ ಆಶ್ವಿತಾ ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಜಿಗಿದಿದ್ದು, ನೀರಿನಲ್ಲಿ ಸಾವು-ಬದುಕಿನ ನಡುವೆ ಹೋರಾಡುವಾಗ ಆಕೆಯ ರಕ್ಷಣೆಗೆ ಲಾಯ್ಡ್ ಕೂಡಾ ಸಮುದ್ರಕ್ಕೆ ಹಾರಿದ್ದಾನೆ. ಅಶ್ವಿತಾಳನ್ನು ನೀರಿನಿಂದ ಎತ್ತಿದ ಲಾಯ್ಡ್, ಬಳಿಕ ತಾನು ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ ಸ್ಥಳೀಯರು ಲಾಯ್ಡನನ್ನು ರಕ್ಷಣೆ ಮಾಡಲು ಯತ್ನಿಸಿದರೂ, ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಲಾಯ್ಡನನ್ನು ನೀರಿನಿಂದ ಮೇಲಕ್ಕೆತ್ತಿ ತಕ್ಷಣ ಆಸ್ಪತ್ರೆ ಗೆ ಸಾಗಿಸಿದರೂ, ಅಷ್ಟರಲ್ಲಾಗಲೇ ಲಾಯ್ಡ್ ಸಾವನ್ನಪ್ಪಿದ್ದ.

Mangaluru: Youth Dies While Trying to Save Girlfriend From Drowning at Someshwara Beach
ತ್ರಿಕೋನ ಪ್ರೇಮ ಪ್ರಿಯಕನ ದುರಂತ ಸಾವಿನಿಂದ ಅಂತ್ಯವಾಗಿದೆ‌‌. ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ಲಾಯ್ಡ್ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದು, ಮೂವರ ನಡುವೆ ಕಳೆದ ಹಲವು ದಿನಗಳಿಂದ ಗಲಾಟೆಯಾಗುತಿತ್ತು. ಶುಕ್ರವಾರ ಸಂಜೆ ಈ ವಿಚಾರಕ್ಕೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಲಾಯ್ಡ್ ಇಬ್ಬರು ಪ್ರೇಯಸಿಯರನ್ನೂ ಸೋಮೇಶ್ವರ ರುದ್ರಪಾದೆಗೆ ಅಹ್ವಾನಿಸಿದ್ದಾನೆ. ಮಾತುಕತೆಯ ಸಂಧರ್ಭದಲ್ಲಿ ಅಶ್ವಿತಾ ಎಂಬಾಕೆ ಸಮುದ್ರಕ್ಕೆ ಹಾರಿದ್ದು, ಆಕೆಯನ್ನು ರಕ್ಷಣೆ ಮಾಡಲು ಲಾಯ್ಡ್ ಕೂಡಾ ಸಮುದ್ರಕ್ಕೆ ಹಾರಿದ್ದಾನೆ.‌ ಸ್ಥಳೀಯರು ಲಾಯ್ಡ್ ನನ್ನು ರಕ್ಷಣೆ ಮಾಡಿ ಆಸ್ಪತ್ರೆ ಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಮೃತನಾಗಿದ್ದಾನೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ'' ಎಂದು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+