ಶೀಘ್ರದಲ್ಲಿಯೇ ಜೋಕಟ್ಟೆ ರೈಲ್ವೆ ನಿಲ್ದಾಣ ಪ್ರಯಾಣಿಕರಿಗೆ ಮುಕ್ತ
ಮಂಗಳೂರು, ಫೆಬ್ರವರಿ. 21 : ನಗರದ ಜೋಕಟ್ಟೆ ಬಳಿ ನಿರ್ಮಿಸಲಾಗಿರುವ ನೂತನ ರೈಲ್ವೆ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಾರ್ಯಾರಂಭವಾಗಲಿದೆ.
ದಕ್ಷಿಣ ರೈಲ್ವೆ ಪಾಲಕ್ಕಾಡ್ ವ್ಯಾಪ್ತಿಗೊಳಪಡುವ ಜೋಕಟ್ಟೆಯಲ್ಲಿ ಈ ನೂತನ ರೈಲು ನಿಲ್ದಾಣ ನಿರ್ಮಾಣವಾಗುವುದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಾಗಿ ಬರುವ ಪ್ರಯಾಣಿಕರಿಗೂ ಬಹಳಷ್ಟು ಅನುಕೂಲಕರವಾಗಲಿದೆ.

ಈ ರೈಲ್ವೆ ನಿಲ್ದಾಣ ಕಾಮಗಾರಿಯನ್ನು ಮುಖ್ಯವಾಗಿ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿನ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಗೆ 2012ರಲ್ಲಿ ರೂಪುರೇಷೆ ಸಿದ್ದಪಡಿಸಲಾಗಿತ್ತು.
ಇದಲ್ಲದೆ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ನಿರ್ಮಿಸಲಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಕೇವಲ 4 ಕಿಮೀ ದೂರದ ಜೋಕಟ್ಟೆಯಲ್ಲಿ ಈ ರೈಲು ನಿಲ್ದಾಣವಿದೆ.
ನೂತನ ರೈಲ್ವೆ ನಿಲ್ದಾಣವು ಎರಡು ಫ್ಲಾಟ್ ಫಾರ್ಮ್ ನೊಂದಿಗೆ ಸಬ್ವೆ ಸಂಪರ್ಕ ಕೂಡಾ ಹೊಂದಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಈ ನಿಲ್ದಾಣ ಹೊಂದಿದೆ.
ಇದರೊಂದಿಗೆ ಪ್ರಯಾಣಿಕರ ಕಾಯುವ ಕೊಠಡಿ, ಬುಕ್ಕಿಂಗ್ ಆಫೀಸ್ ಕೂಡಾ ಇದೆ. ಏರ್ಪೋರ್ಟಿನ ಸನಿಹದಲ್ಲಿರುವ ರಾಜ್ಯದ ಮೊದಲ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.












Click it and Unblock the Notifications