ಮಂಗಳೂರು: ಕಟ್ಟಡದಿಂದ ಹಾರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು, ಜುಲೈ.26: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಜುಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೃದಯಭಾಗದಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ಜಪ್ಪಿನಮೊಗರು ನಿವಾಸಿ ಮೋಹನ್ ಎಂಬವರ ಪುತ್ರ ಗುರುಪ್ರಸಾದ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ . ಈತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ.
ನಿನ್ನೆ ಬುಧವಾರ ಎಂದಿನಂತೆ ತಂದೆ ಮೋಹನ್ ಮಗ ಗುರುಪ್ರಸಾದ್ ನನ್ನು ನಗರದ ಕಂಕನಾಡಿ ಬಸ್ ನಿಲ್ದಾಣದ ಬಳಿ ಬಿಟ್ಟು ತೆರಳಿದ್ದಾರೆ.

ಗುರುಪ್ರಸಾದ್ ನೇರ ಕಾಲೇಜಿಗೆ ತೆರಳದೆ ಹಂಪನಕಟ್ಟದಲ್ಲಿ ಕುನಿಲ್ ಕಾಪ್ಲೆಕ್ಸ್ ತೆ ತೆರಳಿ ಸ್ವಲ್ಪ ಹೊತ್ತು ಅಲ್ಲಿ ಕಾಲಕಳೆದಿದ್ದಾನೆ. ನಂತರ ಕಟ್ಟಡದ 4 ನೇ ಮಹಡಿ ಗೆ ತೆರಳಿ ಅಲ್ಲಿಂದ ಕೆಳಕ್ಕೆ ಜಿಗಿದಿದ್ದಾನೆ. ನಾಲ್ಕನೆ ಮಹಡಿಯಿಂದ ಜಿಗಿದ ಗುರುಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದು ಅತನನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುಪ್ರಸಾದ್ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆಯ ಕುರಿತು ನಗರದ ಬಂದರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications