ಮಂಗಳೂರು ಮಳೆ: ಎರ್ಮಾಯಿ ಜಲಪಾತಕ್ಕೆ ಬಿದ್ದು ನಿರ್ದೇಶಕ ಸಾವು
ಮಂಗಳೂರು, ಮೇ 30: ಮಂಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಕನ್ನಡ ಚಿತ್ರ ನಿರ್ದೇಶಕರೊಬ್ಬರು ಬಲಿಯಾದ ದುರ್ಘಟನೆ ಇಂದು(ಮೇ 30) ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಜಲಪಾತಕ್ಕೆ ಫೋಟೋ ಶೂಟ್ ಗೆಂದು ತೆರಳಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.
ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಅವರೊಂದಿಗೆ ನಾಲ್ವರು ಸ್ನೇಹಿತರ ತಂಡ ಫೋಟೋಶೂಟ್ ಗಾಗಿ ತೆರಳಿತ್ತು. ಅತಿಯಾಗಿ ಸುರಿದ ಮಳೆಯಿಂದ ತುಂಬಿ ಹರಿಯುತ್ತಿದ್ದ ಫಾಲ್ಸ್ ನಲ್ಲಿ ಅಚಾನಕ್ಕಾಗಿ ಬಿದ್ದು ಅವರು ಮೃತರಾಗಿದ್ದಾರೆ.

'ಕನಸು' ಚಿತ್ರದ ನಿರ್ದೇಶಕರಾಗಿದ್ದ ಸಂತೋಷ್ ಶೆಟ್ಟಿ ಮೂಲತಃ ಕಟಿಲಿನವರಾಗಿದ್ದರು.
ಈಗಾಗಲೇ ಅವರ ಮೃತದೇಹವನ್ನು ಪತ್ತೆಹಚ್ಚಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications