Mangaluru Railway Station: ₹10.58 ಕೋಟಿ ವೆಚ್ಚದಲ್ಲಿ ಮಂಗಳೂರು ಜಂಕ್ಷನ್‌ಗೆ ಹೊಸ ರೂಪ, ಏನೆಲ್ಲ ಸೌಲಭ್ಯಗಳಿರಲಿವೆ ಗೊತ್ತಾ?

ಮಂಗಳೂರು, ಡಿಸೆಂಬರ್‌, 06: ಮಂಗಳೂರು ಜಂಕ್ಷನ್‌ನ ಪುನರಾಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದ್ದು, ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು ಫೆಬ್ರವರಿ ಅಂತ್ಯದ ವೇಳೆಗೆ ಈ ಕಾರ್ಯವನ್ನು ಮುಗಿಸುವ ಭರವಸೆಯನ್ನು ನೀಡಿದೆ.

ದಕ್ಷಿಣ ರೈಲ್ವೆಯು "ಅಮೃತ್ ಭಾರತ್ ಸ್ಟೇಷನ್" ಯೋಜನೆಯಡಿ ₹10.58 ಕೋಟಿ ಅಂದಾಜು ವೆಚ್ಚದಲ್ಲಿ ಈ ಪುನರಾಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಇದು ಮುಂದಿನ ವರ್ಷದ ಅಂದರೆ 2024 ಫೆಬ್ರವರಿ ವೇಳೆಗೆ ಸಂಪೂರ್ಣವಾಗಿದೆ ಮುಕ್ತಯಾವಾಗಲಿದೆ. ಈ ವಿಭಾಗದ ಅಡಿಯಲ್ಲಿ ಇನ್ನೂ 15 ನಿಲ್ದಾಣಗಳು ಪುನರಾಭಿವೃದ್ಧಿ ಪ್ರಕ್ರಿಯೆಯ ಹಂತದಲ್ಲಿದೆ ಎಂದು ತಿಳಿಸಿದೆ.

Mangaluru Railway Station: New look for Mangaluru Junction at cost of ₹10.58 crore, Know facilities

ಪುನರಾಭಿವೃದ್ಧಿ ಕಾರ್ಯದ ಸಮಯದಲ್ಲಿ, ಪಡೀಲ್-ಬಜಾಲ್ ರಸ್ತೆಯಿಂದ ನಿಲ್ದಾಣಕ್ಕೆ ಸರಿಯಾದ ಸಂಪರ್ಕ ರಸ್ತೆಯ ಬಾಕಿ ಉಳಿದಿರುವ ಬೇಡಿಕೆಯನ್ನು ಈಡೇರಿಸಲಿದೆ. ಇದರ ಪರಿಣಾಮವಾಗಿ, 5 ಮೀಟರ್ ಅಗಲದ ಕಾಂಕ್ರೀಟ್ ರಸ್ತೆಯ 350 ಮೀ ವಿಸ್ತರಣೆಯನ್ನು ಕಾಂಕ್ರೀಟ್ ಸುಸಜ್ಜಿತ ರಸ್ತೆಯಾಗಿ 9 ಮೀಟರ್‌ಗೆ ವಿಸ್ತರಿಸಲಾಗುತ್ತಿದೆ. ವಿಸ್ತರಣೆಗೊಂಡ ರಸ್ತೆಯಿಂದ ನಿಲ್ದಾಣದ ಆವರಣದಲ್ಲಿ ಬಸ್‌ಗಳು ಸಹ ಸುಲಭವಾಗಿ ಸಂಚಾರ ಮಾಡಬಹುದು ಎಂದು ತಿಳಿಸಿದೆ.

ಪ್ರಯಾಣಿಕರು ಸೇರಿದಂತೆ ಭೇಟಿ ನೀಡುವ ಸಾರ್ವಜನಿಕರಿಗೆ ಸಂಘಟಿತ ಸ್ಥಳದೊಂದಿಗೆ ಹೆಚ್ಚಿನ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸಲು ಪಾರ್ಕಿಂಗ್ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿಭಾಗವು ತಿಳಿಸಿದೆ. ಇನ್ನು ಪ್ಲಾಟ್‌ ಫಾರ್ಮ್ ಸಂಖ್ಯೆ 1 ಮತ್ತು 2ರಲ್ಲಿ ಪೂರ್ಣ ಉದ್ದದ ಪ್ಲಾಟ್‌ ಫಾರ್ಮ್‌ಗಳ ಶೆಲ್ಟರ್‌ಗಳು ನಿರ್ಮಾಣ ಹಂತದಲ್ಲಿವೆ.

ಈಗಿರುವ ಕಟ್ಟಡದ ಪಕ್ಕದಲ್ಲೇ ಹೊಸ ಪಾರ್ಸೆಲ್ ಕಚೇರಿ ಬರಲಿದೆ. ಪಾರ್ಸೆಲ್ ಕಚೇರಿ ಕಟ್ಟಡದ ಅಡಿಪಾಯಕ್ಕಾಗಿ ಭೂಮಿ ಉತ್ಖನನ ಪ್ರಗತಿಯಲ್ಲಿದೆ. ಪುನರಾಭಿವೃದ್ಧಿಯು ಸುಧಾರಿತ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಇರಲಿದೆ. ನಿಲ್ದಾಣದ ಮುಂಭಾಗವು ಪೂರ್ಣಗೊಂಡ ನಂತರ ಕರ್ನಾಟಕದ ಕರಾವಳಿ ನಿರ್ಮಾಣ ಶೈಲಿಯನ್ನು ಹೊಂದಿರಲಿದೆ.

ಶೋರನೂರು-ಮುಂಬೈ ಮತ್ತು ಹಾಸನ-ಮಂಗಳೂರು ಮಾರ್ಗಗಳಲ್ಲಿ ನೆಲೆಗೊಂಡಿರುವ ಮಂಗಳೂರು ಜಂಕ್ಷನ್ ಪಶ್ಚಿಮ ಕರಾವಳಿ ಪ್ರಮುಖ ನಿಲ್ದಾಣವಾದಾಗಿದೆ. ಇದು ಸುಮಾರು 85 ವಿವಿಧ ರೀತಿಯ ರೈಲುಗಳನ್ನು ಕಾರ್ಯನಿವಹಿಸುತ್ತವೆ.

ನೆಲಮಂಗಲದವರೆಗೆ ಮೆಟ್ರೋ ವಿಸ್ತರಣೆ ಬಗ್ಗೆ ಪ್ರಸ್ತಾಪ

ಮೆಟ್ರೋ ಸೇವೆಯನ್ನು ನೆಲಮಂಗಲದವರೆಗೆ ವಿಸ್ತರಿಸುವ ಬಗ್ಗೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ

ನೆಲಮಂಗಲದಲ್ಲಿ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಭಿವೃದ್ಧಿಪಡಿಸಿರುವ ಸಮುದಾಯ ಭವನ ಹಾಗೂ ಪ್ರಾರ್ಥನಾ ಮಂದಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಮೆಟ್ರೊ ಸೇವೆಯನ್ನು ನೆಲಮಂಗಲದವರೆಗೆ ವಿಸ್ತರಿಸಲು ಬೇಡಿಕೆಯಿದ್ದು, ಈ ಬಗ್ಗೆ ಸರಕಾರ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹಾಗೂ ಇತರೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಎತ್ತಿನಹೊಳೆ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಸರ್ಕಾರ ಜಾರಿಗೊಳಿಸಲಿದೆ. ನೆಲಮಂಗಲ ಹಾಗೂ ನೆಲಮಂಗಲದಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಿಸಲಾಗುವುದು ಎಂದು ಭರವಸೆ ನೀಡಿದರು

ನೆಲಮಂಗಲ ಸುತ್ತಮುತ್ತಲ ಪ್ರದೇಶಗಳ ಕೆರೆಗಳನ್ನು ತುಂಬುವ ವೃಷಭಾವತಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈ ಯೋಜನೆಯಿಂದ ನೀರಿನ ಅಂತರ್ಜಲ ಮಟ್ಟ ಹೆಚ್ಚಲಿದೆ. ಮೆಟ್ರೋ ಸಂಪರ್ಕವನ್ನು ನೆಲಮಂಗಲದವರೆಗೂ ವಿಸ್ತರಿಸುವ ಯೋಜನೆ ಸರ್ಕಾರ ಪರಿಶೀಲಿಸಲಿದೆ. ನೆಲಮಂಗಲದ ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+