ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂ ಕದ್ದು ಲಕ್ಷಾಂತರ ಹಣ ಲಪಟಾಯಿಸಿದ್ದ ಇಬ್ಬರ ಬಂಧನ

|
Google Oneindia Kannada News

ಮಂಗಳೂರು, ಜುಲೈ 05: ನಗರದ ಪಳ್ನೀರ್ ನ ವೃದ್ಧ ಮಹಿಳೆಯೊಬ್ಬರ ಎಟಿಎಂ ಕಾರ್ಡ್ ಕದ್ದು ಹಣ ಲಪಟಾಯಿಸಿದ್ದ ಇಬ್ಬರು ಆರೋಪಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಪಳ್ನೀರ್ ನ ಬ್ರಿಟ್ಟೋ ಲೇನ್ ನ ಜಾಯ್ಸ್ (70) ಅವರ ಮನೆಯಿಂದ ಎಟಿಎಂ ಕದ್ದು 3,59,000 ರು. ಡ್ರಾ ಮಾಡಿ ಪರಾರಿಯಾಗಿದ್ದ ತಮಿಳುನಾಡಿನ ವೆಲ್ಲೂರು ನಿವಾಸಿ ಫಾತಿಮಾ (28) ಹಾಗೂ ಆಕೆಯ ಪತಿ ಸೆಲ್ವಂ (31) ಎನ್ನುವರನ್ನು ಪೊಲೀಸರು ಬಂಧಿಸಿ, 2.2 ಲಕ್ಷ ನಗದು ಹಾಗೂ ಡ್ರಾ ಮಾಡಿದ ಹಣದಿಂದ ಖರೀದಿಸಿದ 20 ಗ್ರಾಂ ತೂಕದ ಚಿನ್ನದ ಸರವನ್ನು ವಶ ಪಡಿಸಿಕೊಂಡಿದ್ದಾರೆ.

Mangaluru Police Arrest Couple in ATM Theft Case, Recover Rs 2.2 Lakh

ಜಾಯ್ಸ್ ವಿಧೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಫಾತೀಮಾ ಎಟಿಎಂ ಕಾರ್ಡ್‌ ಹಾಗೂ ಪಾಸ್‌ವರ್ಡ್‌ ಬರೆದಿಟ್ಟಿದ್ದ ಡೈರಿ ಎಗರಿಸಿ ಪರಾರಿಯಾಗಿದ್ದಳು ಬಳಿಕ ಈಕೆ ಮನೆ ಕೆಲಸವನ್ನು ಬಿಟ್ಟಿದ್ದಳು ಎನ್ನಲಾಗಿದೆ.

ಜಾಯ್ಸ್ ಸ್ವದೇಶಕ್ಕೆ ಮರಳಿದ ಬಳಿಕ ವಂಚನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Mangaluru Police Arrest Couple in ATM Theft Case, Recover Rs 2.2 Lakh

ಇನ್ಸ್ ಸ್ಪೆಕ್ಟರ್ ಬೆಳ್ಳಿಯಪ್ಪ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

English summary
The Mangaluru Pandeshwara South Police arrested a couple from Tamil Nadu for withdrawing money in lakhs from a stolen ATM card on July 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X