ಮಂಗಳೂರಿನ ಸೋಮವಾರದ ಹಲವು ಸುದ್ದಿ ಗುಚ್ಛ

ಮಂಗಳೂರು, ಅಕ್ಟೋಬರ್ 26 : ಉಳ್ಳಾಲದಲ್ಲಿ ಮತ್ತೊಂದು ಗ್ಯಾಂಗ್ ವಾರ್ ಸದ್ದು ಮಾಡಿದ್ದು ಇದರಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ಸೋಮವಾರ ಮುಂಜಾನೆ 2.30ರ ಸುಮಾರಿಗೆ ತೊಕ್ಕೊಟ್ಟಿನಲ್ಲಿ ಈ ಘಟನೆ ನಡೆದಿದೆ.

ಕೊಲೆಯಾಗಿರುವ ಯುವಕನನ್ನು ವಿಕ್ರಂ (28) ಎಂದು ಗುರುತಿಸಲಾಗಿದೆ. ವಿಕ್ರಂ ಮತ್ತು ಕೊಲೆ ಮಾಡಿರುವ ತಂಡದವರು ಹಿಂದೆ ಗೆಳೆಯರಾಗಿದ್ದರು. ಇತ್ತೀಚೆಗೆ ವ್ಯವಹಾರದ ವಿಚಾರದಲ್ಲಿ ಇಬ್ಬರಿಗೂ ವೈಷಮ್ಯ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. [ಸಚಿವರಿಗೆ ಬಂದಿದ್ದು ಹುಸಿ ಕರೆಯಲ್ಲ]

ಭಾನುವಾರ ವಿಕ್ರಂ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ವಿಚಕ್ರ ವಾಹನದಲ್ಲಿ ಹಿಂದಿರುಗುತ್ತಿದ್ದಾಗ ಸ್ಕಾರ್ಪಿಯೋ ವಾಹನದಲ್ಲಿ ಮೂವರು ದ್ವಿಚಕ್ರ ವಾಹನ ಬೆನ್ನಟ್ಟಿ ಬಂದು ತೊಕ್ಕೊಟ್ಟಿನ ವಿನಮ್ರ ಬಾರ್ ಬಳಿ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

mangaluru

ಚೀನಾದಲ್ಲಿ ದಕ್ಷಿಣ ಕನ್ನಡದ ಮಹಿಳೆ ನಿಧನ : ಮೂಡುಬಿದಿರೆಯ ತಾಕೊಡೆಯ ಸುರ್ಲಾಯಿಯ ಕೃಷಿಕ ವಿಲ್ಫ್ರೆಡ್ ಪಿಂಟೊ ಅವರ ಪತ್ನಿ ರೀಟಾ ರೊಡ್ರಿಗಸ್ (40) ಲಂಡನ್‍ನಿಂದ ಹಾಂಕಾಂಗ್‍ಗೆ ಆಗಮಿಸುತ್ತಿದ್ದ ವಿಮಾನ ಹಾಂಕಾಂಗ್‍ನಲ್ಲಿ ಲ್ಯಾಂಡ್ ಆಗುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೂಲತಃ ಪಾಲಡ್ಕದವರಾದ ರೀಟಾ ರೊಡ್ರಿಗಸ್ ಹಲವಾರು ವರ್ಷಗಳಿಂದ ಹಾಂಕಾಂಗ್‍ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದವಾರವಷ್ಟೇ ಲಂಡನ್‍ಗೆ ತೆರಳಿದ್ದು ವಾಪಾಸ್ ಹಾಂಕಾಂಗ್ ಬರುವಾಗ ಘಟನೆ ಸಂಭವಿಸಿದೆ. ರೀಟಾ ಅವರು ಪತಿ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+